ಪುತ್ತೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಪುತ್ತೂರು, ಅಂಗನವಾಡಿ ಕೇಂದ್ರ ಪುಳಿತ್ತಡಿ, ಬಾಲವಿಕಾಸ ಮಹಿಳಾ ಸಮಿತಿ ಪುಳಿತ್ತಡಿ, ಸ್ರ್ತೀಶಕ್ತಿ ಗುಂಪುಗಳು ಹಾಗೂ ಮಕ್ಕಳ ಪೋಷಕರ ಸಂಯುಕ್ತ ಆಶ್ರಯದಲ್ಲಿ ಉಪ್ಪಿನಂಗಡಿ ಪುಳಿತ್ತಡಿ ಅಂಗನವಾಡಿ ಕೇಂದ್ರದಲ್ಲಿ ಬಾಲಮೇಳ ಹಾಗೂ ಸನ್ಮಾನ ಕಾರ್ಯಕ್ರಮ ನಡೆಯಿತು.
ಬಾಲವಿಕಾಸ ಸಮಿತಿಯ ಅಧ್ಯಕ್ಷೆ ಚೈತ್ರಾ ಉದ್ಘಾಟಿಸಿ ಶುಭಹಾರೈಸಿದರು. ಉಪ್ಪಿನಂಗಡಿ ಗ್ರಾಮ ಪಂಚಾಯತ್ ಸದಸ್ಯ ಸುರೇಶ್ ಅತ್ರಮಜಲು ಮಾತನಾಡಿ, ಅಂಗನವಾಡಿಯಲ್ಲಿ ಮಕ್ಕಳಿಗೆ ಚಿಕ್ಕಂದಿನಲ್ಲಿಯೇ ಸಂಸ್ಕಾರಯುತ ಜೀವನ ನಡೆಸಲು ಪೂರಕವಾದ ಶಿಕ್ಷಣ ಸಿಗುತ್ತಿದೆ ಎಂದರು. ಅಂಬೇಡ್ಕರ್ ಸಮಿತಿ ಕಜೆಕ್ಕಾರ್ ಇದರ ಸದಸ್ಯೆ ಭಾರತಿ ಮಾತನಾಡಿ, ಜಾತಿ ಮತ ಬೇಧ ಮರೆತು ಎಲ್ಲರೂ ಒಟ್ಟಾಗಿ ಇಂತಹ ಕಾರ್ಯಕ್ರಮಗಳನ್ನು ನಡೆಸಿದಾಗ ಬಹಳಷ್ಟು ಖುಷಿ ನೀಡುತ್ತದೆ ಎಂದರು. ಉಪ್ಪಿನಂಗಡಿ ಸಮುದಾಯ ಆರೋಗ್ಯ ಇಲಾಖೆಯ ಕಿರಿಯ ಮಹಿಳಾ ಆರೋಗ್ಯ ಸುರಕ್ಷಾ ಅಧಿಕಾರಿ ಗಾಯತ್ರಿ, ಉಪ್ಪಿನಂಗಡಿ ಗ್ರಾ.ಪಂ.ಸದಸ್ಯರಾದ ವನಿತಾ, ಪುಳಿತ್ತಡಿ ಸ.ಹಿ.ಪ್ರಾ.ಶಾಲಾ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಝಕಾರಿಯಾ, ಸುಲ್ತಾನ್ ಯೂತ್ ಪೆಡರೇಶನ್‌ನ ಅಧ್ಯಕ್ಷ ಫಯಾಜ್ ರೈನಾ, ಬಾಲವಿಕಾಸ ಸಮಿತಿ ಮಾಜಿ ಸದಸ್ಯ ವೆಂಕಪ್ಪ ಪೂಜಾರಿ ಮರ್ವೆಲ್, ಆಶಾಕಾರ್ಯಕರ್ತೆ ಯಶೋದ ಮುರಳೀಧರ, ಉದಯ ಅತ್ರಮಜಲು ಶುಭಹಾರೈಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ, ಜಿಲ್ಲಾ ರಾಜ್ಯೋತ್ಸವ ಪುರಸ್ಕೃತರು, ಚಾರ್ವಾಕ ಸಿ.ಎ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಗಿರುವ ಅಶೋಕ್ ಗೌಡರವರು, ಸರಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ, ಗುರು ಹಿರಿಯರ ಆಶೀರ್ವದದಿಂದ ಇದೀಗ ಉನ್ನತ್ತ ಹುದ್ದೆಗೆ ಅವಕಾಶ ದೊರಕಿತು ಎಂದವರು ತನ್ನ ತಾಯಿಯವರ ಜೊತೆ ಸನ್ಮಾನ ಪಡೆದ ಈ ಕ್ಷಣ ಅವಿಸ್ಮರಣೀಯವಾದುದು ಎಂದರು.
ಪುಷ್ಪಾ ಕೋಡಿ, ಹರೀಣಾಕ್ಷಿ ಪುಳಿತ್ತಡಿ, ಹೊನ್ನಮ್ಮ ಕಜೆಕ್ಕಾರು, ಸವಿತಾ ಕಜೆಕ್ಕಾರು, ಸರೋಜಿನಿ ಪುಳಿತ್ತಡಿ, ಯಶವಂತಿ ಗೌಂಡತ್ತಿಗೆ, ದೀಕ್ಷಾ ಪುಳಿತ್ತಡಿ ಅತಿಥಿಗಳಿಗೆ ಹೂ ನೀಡಿ ಗೌರವಿಸಿದರು. ಸವಿತಾ ಕೋಡಿ ಸ್ವಾಗತಿಸಿ, ಅಂಗನವಾಡಿ ಕಾರ್ಯಕರ್ತೆ ಚಂದ್ರಿಕಾ ವಂದಿಸಿದರು. ಶ್ರೀರಾಮ ಶಾಲಾ ಶಿಕ್ಷಕಿ ಅಕ್ಷತಾ ಆರ್ತಿಲ ಕಾರ್ಯಕ್ರಮ ನಿರೂಪಿಸಿದರು. ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮದ ಬಳಿಕ ಸುಲ್ತಾನ್ ಯೂಥ್ ಪೆಡರೇಶನ್‌ನ ಅಧ್ಯಕ್ಷರು ಮಕ್ಕಳಿಗೆ ನೀರಿನ ಬಾಟಲ್ ಹಾಗೂ ಪ್ರಶಾಂತ್ ಆಚಾರ್ಯ ಪುಳಿತ್ತಡಿ ಸ್ಪರ್ಧಾ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಿದರು.
ಸನ್ಮಾನ:
1989ರಲ್ಲಿ ಪುಳಿತ್ತಡಿಯ ಸೇಸಪ್ಪ ಗೌಡರ ಹೊಟೇಲಿನ ಪಕ್ಕದಲ್ಲಿದ್ದ ಖಾಲಿ ಕೋಣೆಯಲ್ಲಿ ಅಂಗನವಾಡಿ ತೆರೆಯಲು ಸ್ಥಳವಕಾಶ ನೀಡಿರುವ ಎಲ್ಲರ ಪ್ರೀತಿ ಗೌರವಕ್ಕೆ ಪಾತ್ರರಾಗಿದ್ದ ದಿ| ಸೇಸಪ್ಪ ಗೌಡರ ಸ್ಮರಣಾರ್ಥ ಅವರ ಪತ್ನಿ ಕಮಲರವರನ್ನು ಕೂಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅಶೋಕ್ ಗೌಡರವರ ಜೊತೆ ಸನ್ಮಾನಿಸಲಾಯಿತು.