-ಸಿಶೇ ಕಜೆಮಾರ್
ಸಿನಿಮಾ ಲೋಕದಲ್ಲಿ ಹೊಸ ಸಂಚಲನ ಮೂಡಿಸಿದ ʼಅಬ್ಬಬ್ಬಾ..ʼ ಯಶಸ್ವಿ ಪ್ರದರ್ಶನವನ್ನು ಕಾಣುತ್ತಿದೆ. ಬೆಂಗಳೂರು, ಮಂಗಳೂರು ಸೇರಿದಂತೆ ಎಲ್ಲಾ ಕಡೆಯಲ್ಲೂ ಹೌಸ್‌ಫುಲ್ ಪ್ರದರ್ಶನವನ್ನು ಕಾಣುತ್ತಿರುವ ಅಬ್ಬಬ್ಬಾದಲ್ಲಿ ಅಂಥದ್ದೇನಿದೆ..? ಎಂದು ನಿಮಗನಿಸಿದರೆ ನೀವು ಥಿಯೇಟರ್‌ಗೆ ಹೋಗಿ ನೋಡಲೇಬೇಕಾಗಿದೆ. ಎರಡೂವರೆ ಗಂಟೆ ಕುಳಿತಲ್ಲಿಯೇ ಮಸ್ತ್ ಮನರಂಜನೆ ಕೊಡುವ ಅಬ್ಬಬ್ಬಾ.. ಎಲ್ಲಾ ಕೆಟಗರಿಯಲ್ಲೂ ಪ್ರೇಕ್ಷಕರಿಂದ ಭೇಷ್ ಅನಿಸಿಕೊಂಡಿದೆ. ಸಿನಿಮಾದಲ್ಲಿ ಮುಖ್ಯವಾಗಿ ಈಗಾಗಲೇ ಯೂಟ್ಯೂಬ್ ಮೂಲಕ ಎಲ್ಲರ ಮನಗೆದ್ದಿರುವ ಧನರಾಜ್ ಆಚಾರ್ಯರವರು ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದು ಎಲ್ಲರನ್ನು ನಗೆಗಡಲಲ್ಲಿ ತೇಲಿಸಿದ್ದಾರೆ. ʼಆ ದಿನಗಳುʼ ಖ್ಯಾತಿಯ ಕೆ.ಎಂ.ಚೈತನ್ಯ ನಿರ್ದೇಶನ ಮಾಡಿರುವ ಕನ್ನಡದ ಒಂದು ಸದಭಿರುಚಿಯ ಚಿತ್ರವಾಗಿದೆ. ಬಿಡುಗಡೆಗೊಂಡು ವಾರ ಕಳೆದಿದ್ದು ಎಲ್ಲೆಡೆ ಉತ್ತಮ ಪ್ರದರ್ಶನವನ್ನು ಕಾಣುತ್ತಿದೆ. ಹುಡುಗರ ಹಾಸ್ಟೇಲ್‌ವೊಂದರಲ್ಲಿ ನಡೆಯುವ ಘಟನೆಗಳೇ ಸಿನಿಮಾದ ಪ್ರಮುಖ ಕಥಾಹಂದರವಾಗಿದೆ. ಹುಡುಗರ ಹಾಸ್ಟೇಲ್‌ಗೆ ಅಚಾನಕ್ ಆಗಿ ಹುಡುಗಿಯೊಬ್ಬಳು ಎಂಟ್ರಿ ಕೊಡುತ್ತಾಳೆ ಅಲ್ಲಿಂದ ಸಿನಿಮಾ ತನ್ನ ವೇಗ ಪಡೆದುಕೊಳ್ಳುತ್ತದೆ. ಪ್ರೇಕ್ಷಕರನ್ನು ಕೂತಲ್ಲಿಂದ ಎದ್ದುಬಿದ್ದು ನಗಿಸಲು ಆರಂಭಿಸುತ್ತದೆ. ನವಿರಾದ ಹಾಸ್ಯ ಇಡೀ ಸಿನಿಮಾವನ್ನು ಪ್ರೇಕ್ಷಕರ ಮನದಾಳಕ್ಕೆ ತೆಗೆದುಕೊಂಡು ಹೋಗುತ್ತದೆ. ವಿಭಿನ್ನ ಕಥೆ, ನವಿರಾದ ಹಾಸ್ಯ, ಇಂಪಾದ ಸಂಗೀತ, ಅದ್ಭುತ ಛಾಯಾಗ್ರಹಣ ಎಲ್ಲವೂ ಸಿನಿಮಾದಲ್ಲಿದೆ.
ಸಿನಿಮಾದಲ್ಲಿ ವಿಶೇಷವಾಗಿ ಪುತ್ತೂರಿನ ಕಲಾವಿದ, ಯೂಟ್ಯೂಬ್ ಮೂಲಕವೇ ಎಲ್ಲರನ್ನು ನಗಿಸುತ್ತಿರುವ ಧನರಾಜ್ ಆಚಾರ್ಯ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಮಿಂಚಿದ್ದು ಪ್ರೇಕ್ಷಕರನ್ನು ಮತ್ತಷ್ಟು ನಗಿಸುತ್ತಾರೆ. ಹೊಸಬರ ಪ್ರಯತ್ನ ವೃತ್ತಿಪರ ಕಲಾವಿದರಿಗೆ ಸಾಟಿ ಕೊಡುವಂತಿದೆ. ಸಿನಿಮಾ ನೋಡಲು ಬಂದ ಪ್ರೇಕ್ಷಕರ ಹಣಕ್ಕೆ ಯಾವುದೇ ಚ್ಯುತಿ ಬಾರದ ರೀತಿಯಲ್ಲಿ ಸಿನಿಮಾವನ್ನು ನಿರ್ದೇಶಕರು ಹೆಣೆದಿದ್ದಾರೆ. ಹುಡುಗರ ಹಾಸ್ಟೇಲ್‌ಗೆ ಬಂದ ಹುಡುಗಿ ಹಾಸ್ಟೇಲ್‌ನಿಂದ ಹೇಗೆ ಹೊರಗೆ ಹೋಗುತ್ತಾಳೆ..? ಹಾಸ್ಟೇಲ್‌ನಲ್ಲಿ ಮೋಹಿನಿ ಇರುವುದು ನಿಜವಾ..? ಇದೆಲ್ಲ ಸತ್ಯವನ್ನು ತಿಳಿಯಬೇಕಾದರೆ ಥಿಯೇಟರ್‌ಗೆ ಹೋಗಲೇಬೇಕಾಗಿದೆ. ಚಿತ್ರದಲ್ಲಿ ಲಿಖಿತ್ ಶೆಟ್ಟಿ, ಅಮೃತಾ ಅಯ್ಯಂಗಾರ್, ಅನುಷಾ ರೈ, ಅಜಯ್‌ರಾಜ್, ಧನರಾಜ್ ಆಚಾರ್ಯ, ಶರತ್ ಲೋಹಿತಾಶ್ವ, ಸಿಹಿಕಹಿ ಚಂದ್ರು, ಸುಧಾ ಬೆಳವಾಡಿ ಇತ್ಯಾದಿ ಕಲಾವಿದರು ನಟಿಸಿದ್ದಾರೆ.
ಪುತ್ತೂರು ಭಾರತ್ ಮಾಲ್‌ನಲ್ಲಿ ನಾಳೆ 7.30 ಕ್ಕೆ ಪ್ರದರ್ಶನ:
ಈಗಾಗಲೇ ಸಿನಿಮಾ ಹೌಸ್‌ಫುಲ್ ಪ್ರದರ್ಶನವನ್ನು ಕಾಣುತ್ತಿದ್ದು ಪ್ರೇಕ್ಷಕರ ಒತ್ತಾಯದ ಮೇರೆಗೆ ಫೆ.24 ಶನಿವಾರದಂದು ಸಂಜೆ ಗಂಟೆ 7.30ಕ್ಕೆ ಶೋ ಇರಲಿದೆ. ಇನ್ನೂ ಕೂಡ ಅಬ್ಬಬ್ಬಾ..’ ನೋಡದವರು ನಾಳೆ ಥಿಯೇಟರ್‌ಗೆ ಬಂದು ಸಿನಿಮಾ ನೋಡಬಹುದಾಗಿದೆ.