ಫೆ.25:ಶಿವಳ್ಳಿ ಕ್ರಿಕೆಟ್ ಲೀಗ್- ಸೀಸನ್ 4 ಕ್ರಿಕೆಟ್ ಪಂದ್ಯಾಟ

0

ಪುತ್ತೂರು:ಶಿವಳ್ಳಿ ಕ್ರಿಕೆಟರ್ಸ್, ಪುತ್ತೂರು ಇದರ ವತಿಯಿಂದ ನಡೆಯುವ 4ನೇ ವರ್ಷದ ಶಿವಳ್ಳಿ ಬ್ರಾಹ್ಮಣರ ಆಹ್ವಾನಿತ ತಂಡಗಳ ಅಂತರ್ ರಾಜ್ಯ ಮಟ್ಟದ “ಶಿವಳ್ಳಿ ಕ್ರಿಕೆಟ್ ಲೀಗ್” ಓವರ್ ಅರ್ಮ್ ಕ್ರಿಕೆಟ್ ಪಂದ್ಯಾಕೂಟವು ಫೆ.25 ರಂದು ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ” ನಡೆಯಲಿದೆ.

ಈ ಪಂದ್ಯಾಕೂಟದಲ್ಲಿ ಉಡುಪಿ, ಕೊಡಗು ಜಿಲ್ಲೆ, ಕಾಸರಗೋಡು ಜಿಲ್ಲೆ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಉಜಿರೆ, ರಾಮಕುಂಜ, ಮಂಗಳೂರು, ಕಟೀಲ್ ಭಾಗಗಳಿಂದ ಸುಮಾರು 150ಕ್ಕೂ ಅಧಿಕ ಕ್ರೀಡಾಳುಗಳು ಪಾಲ್ಗೊಳ್ಳಲಿದ್ದಾರೆ ಎಂದು ಆಯೋಜಕರಾದ ಡಾ. ಸುಜಯ್ ತಂತ್ರಿ, ಕೆಮ್ಮಿಂಜೆ ಮತ್ತು ಗುರುರಂಜನ್ ಪುಣಿoಚತ್ತಾಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here