ಬಡಗನ್ನೂರು:ಪಡುಮಲೆ ಕುತ್ಯಾಳ ಶ್ರೀ ಮಹಾವಿಷ್ಣು ದೇವಸ್ಥಾನದ 20 ನೇ ವರ್ಷದ ವಾರ್ಷಿಕ ಜಾತ್ರೋತ್ಸವವು ಮಾ.2 ಮೊದಲ್ಗೊಂಡು ಮಾ.4 ತನಕ ಕುಂಟಾರು ವೇದಮೂರ್ತಿ ಶ್ರೀ ವಾಸುದೇವ ತಂತ್ರಿಯವರ ಮಾರ್ಗದರ್ಶನದಲ್ಲಿ ಕುಂಟಾರು ಬ್ರಹ್ಮ ಶ್ರೀ ರವೀಶ ತಂತ್ರಿಯವರ ನೇತೃತ್ವದಲ್ಲಿ ಜರುಗಿತು.ಮಾ 4 ರಂದು ಪೂರ್ವಾಹ್ನ ದರ್ಶನ ಬಲಿ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಿತು.
ಮಾ.2 ರಂದು ಸಂಜೆ ಗಂ 6 ರಿಂದ ಉಗ್ರಾಣ ಮುಹೂರ್ತ,ಅತ್ತಾಳ ಪೂಜೆ ನಡೆಯಿತು.ಮಾ.3 ರಂದು ಬೆಳಗ್ಗೆ ಗಣಪತಿ ಹೋಮ,ನವಕಾಭಿಷೇಕ ತುಲಾಭಾರ ಸೇವೆ, ಮಧ್ಯಾಹ್ನ ಮಹಾಪೂಜೆ ಪ್ರಸಾದ ವಿತರಣೆ ಅನ್ನ ಸಂತರ್ಪಣೆ ನಡೆಯಿತು.ಸಂಜೆ ಶ್ರೀ ನೀಲೇಶ್ವರ ಗಂಗಾಧರ ಮಾರಾರ್ ಮತ್ತು ಬಳಗದವರಿಂದ ತ್ರಾಯಂಬಕ ಸೇವೆ ರಂಗಪೂಜೆ, ಶ್ರೀ ದೇವರ ನೃತ್ಯ ಬಲಿ, ಬಳಿಕ ಭೂತಬಲಿ, ನಡೆಯಿತು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಾ.3 ರಂದು ಸಂಜೆ ಗಂ 7 ರಿಂದ ರಾಜ್ಯ ಪ್ರಶಸ್ತಿ ಪುರಸ್ಕೃತ ತೆಲಿಕೆದ ಬೊಳ್ಳಿ ಡಾ: ದೇವದಾಸ್ ಕಾಪಿಕಾಡ್ ರಚಿಸಿ, ನಿರ್ದೇಶಿಸಿ ನಟಿಸಿರುವ ನಾಟಕ ಪುದರ್ ದೀರ್ತಾಂಡ್ ತುಳು ಹಾಸ್ಯಮಯ ನಾಟಕ ನಡೆಯಿತು.
ಈ ಸಂದರ್ಭದಲ್ಲಿ ದೇವಸ್ಥಾನ ಆಡಳಿತ ಮೂಕ್ತೇಸರ ವಿನೋದ್ ಆಳ್ವ ಮೂಡಾಯೂರು, ಜಾತ್ರೋತ್ಸವ ಸಮಿತಿ ಅಧ್ಯಕ್ಷ ಅನಾಗ್ ಆಳ್ವ, ಕಾರ್ಯದರ್ಶಿ ಅಯಾಗ್ ಆಳ್ವ, ಬಡಗನ್ನೂರು ಗ್ರಾ.ಪಂ ಅಧ್ಯಕ್ಷೆ ಪುಷ್ಪಲತಾ ದೇವಕಜೆ, ಸದಸ್ಯರಾದ ರವಿರಾಜ ರೈ ಸಜಂಕಾಡಿ, ಸಂತೋಷ್ ಆಳ್ವ ಗಿರಿಮನೆ, ಕುಮಾರ ಅಂಬಟೆಮೂಲೆ, ಧರ್ಮೇಂದ್ರ ಕುಲಾಲ್ ಪದಡ್ಕ ಮಾಜಿ ಉಪಾಧ್ಯಕ್ಷ ಗಂಗಾಧರ ರೈ ಎಂ.ಜಿ ,ಮಾಜಿ ಸದಸ್ಯ ರಘನಾಥ ರೈ ಕುತ್ಯಾಳ ಸ್ಥಳೀಯರಾದ ದಾಸಪ್ಪ ರೈ ಕುತ್ಯಾಳ, ನೆಟ್ಟನಿಗೆ ಮೂಡ್ನೂರು ಗ್ರಾ.ಪಂ ಉಪಾಧ್ಯಕ್ಷ ರಾಮ ಮೇನಾಲ ಹಾಗೂ ಗಣ್ಯರು ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.