ಶ್ರೀ.ಕ್ಷೇ.ಧ.ಗ್ರಾ.ಯೋಜನೆ ಕೆದಂಬಾಡಿ ವಲಯ ಜನಮಂಗಲ ಕಾರ್ಯಕ್ರಮ – ಯು ಸೇಪ್ ವಾಕರ್ ಮತ್ತು ವೀಲ್ ಚೇರ್ ವಿತರಣೆ

0

ಕೆಯ್ಯೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ, ಬಿ.ಸಿ. ಟ್ರಸ್ಟ್ ಪುತ್ತೂರು ತಾಲೂಕು ಇದರ ವತಿಯಿಂದ ಶ್ರೀ. ಕ್ಷೇ.ಧ.ಗ್ರಾ.ಯೋ.ಕೆದಂಬಾಡಿ ವಲಯ ಜನಮಂಗಲ  ಫಲಾನುಭವಿಗಳಾದ ಪ್ರಣೀತಾ.ಪಿ, ಹರೀಶ.ಕೆ, ಜಿವೀತಾ.ಎ, ಹುಸೈನ್, ಜಂಸ್ಮೀರ್, ಸುಂದರ ಗೌಡ, ಇವರಿಗೆ ವೀಲ್ ಚೇರ್, ಮತ್ತು ಬಾಲಕೃಷ್ಣ.ಎಂ, ಲಕ್ಷ್ಮೀ, ಸ್ವರಸ್ವತಿ ರೈ ಇವರಿಗೆ ಯು ಸೇಪ್ ವಾಕರ್ ಮತ್ತು ಮಾಡಾವು ವಿಕಲಚೇತನಾ ಬೇಬಿಯವರಿಗೆ ಮಾಸಾಶನ ವಿತರಣಾ ಕಾರ್ಯಕ್ರಮವು ಪಾಲ್ತಾಡಿ ಸೇವಾ ಕೇಂದ್ರದಲ್ಲಿ ಆಯೋಜನೆ ಮಾಡಲಾಯಿತು.

ಈ ಸಂದರ್ಭದಲ್ಲಿ ಕೆಯ್ಯೂರು ಗ್ರಾ.ಪಂ.ಅದ್ಯಕ್ಷ ಶರತ್ ಕುಮಾರ್ ಮಾಡಾವು, ಸದಸ್ಯರಾದ ಮೀನಾಕ್ಷಿ ವಿ.ರೈ, ಸುಭಾಷಿಣಿ, ಒಕ್ಕೂಟದ ಅಧ್ಯಕ್ಷ ಬೇಬಿ ಪುಜಾರಿ ದೇರ್ಲ, ಮಾಜಿ ಅಧ್ಯಕ್ಷ ಚಂದ್ರಶೇಖರ ರೈ ಇಳಂತಾಜೆ, ಜನಜಾಗೃತಿ ಗ್ರಾಮ ಸಮಿತಿ ಸದಸ್ಯ ಅಬ್ದುಲ್ ಖಾದರ್ ಮೇರ್ಲ, ಫಲಾನುಭವಿಗಳಿಗೆ ವಿತರಣೆ ಮಾಡಿದರು.

ಈ ಸಂದರ್ಭದಲ್ಲಿ ಕೆಯ್ಯೂರು ಗ್ರಾ.ಪಂ ವಿಕಲಚೇತನರ ಗ್ರಾಮೀಣ ಪುನರ್ವಸತಿ ಕಾರ್ಯಕರ್ತ ರಪೀಕ್ ಟಿ, ವಲಯದ ಸೇವಾಪ್ರತಿನಿಧಿಗಳು, ಒಕ್ಕೂಟದ ಪಧಾಧಿಕಾರಿಗಳು ವಿ.ಎಲ್.ಇ. ಗಳು ಉಪಸ್ಥಿತರಿದ್ದರು. ವಲಯ ಮೇಲ್ವಿಚಾರಕಿ ಶುಭವತಿ ಸ್ವಾಗತಿಸಿ, ವಂದಿಸಿ ಕಾರ್ಯಕ್ರಮ ನಿರೂಪಿಸಿದರು. 

LEAVE A REPLY

Please enter your comment!
Please enter your name here