2,500 ಶಿಕ್ಷಕರು, 300ರಷ್ಟು ಶಿಕ್ಷಣ ಸಂಸ್ಥೆಗಳ ಕೇಂದ್ರ ಸ್ಥಾನವಾಗಿರುವ ಪುತ್ತೂರಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ನೂತನ ಕಟ್ಟಡಕ್ಕೆ ಶಿಲಾನ್ಯಾಸ

0

ಗ್ರೌಂಡ್ ಪ್ಲೋರ್ ಅರ್ತ್‌ವರ್ಕ್‌ಗೆ ಶಾಸಕರ ನಿಧಿಯಿಂದ ರೂ. 5 ಲಕ್ಷ – ಅಶೋಕ್ ಕುಮಾರ್ ರೈ

ಪುತ್ತೂರು: 2,500 ಶಿಕ್ಷಕರು ಮತ್ತು ಸುಮಾರು 300 ವಿದ್ಯಾಸಂಸ್ಥೆಗಳಿಗೆ ಕೇಂದ್ರ ಸ್ಥಾನವಾಗಿರುವ ಪುತ್ತೂರಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ನೂತನ ಕಟ್ಟಡ ವ್ಯವಸ್ಥಿತ ರೀತಿಯಲ್ಲಿ ಇರಬೇಕೆಂದು ಶಾಸಕ ಅಶೋಕ್ ಕುಮಾರ್ ರೈ ಅವರು ಗ್ರೌಂಡ್ ಪ್ಲೋರ್ ಅರ್ತ್‌ವರ್ಕ್‌ಗೆ ಶಾಸಕರ ನಿಧಿಯಿಂದಲೇ ರೂ. 5 ಲಕ್ಷ ನೀಡುವುದಾಗಿ ಭರವಸೆ ನೀಡಿದ್ದಲ್ಲದೆ ಇನ್ನೂ ಒಳ್ಳೆಯ ರೀತಿಯಲ್ಲಿ ಕಟ್ಟಡಲು ನಿರ್ಮಾಣ ಮಾಡಲು ಹೆಚ್ಚಿನ ಅನುದಾನಕ್ಕಾಗಿ ಮಂತ್ರಿಯವರಲ್ಲಿ ಮಾತನಾಡುವುದಾಗಿ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ರೂ.80ಲಕ್ಷ ಅನುದಾನದಲ್ಲಿ ಆಗುವ ನೂತನ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮವನ್ನು ಅವರು ಮಾ.4ರಂದು ನೆರವೇರಿಸಿದ ಮಾತನಾಡಿದರು. ಪುತ್ತೂರಿನಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಸರಿಯಾದ ವ್ಯವಸ್ಥೆ ಇಲ್ಲ. ಮುಂದುವರಿದ ಶಿಕ್ಷಣದಲ್ಲಿ ಆನ್‌ಲೈನ್ ಶಿಕ್ಷಣ, ಶಿಕ್ಷಕರ ಸಭೆ ನಡೆಸಲು ಸೂಕ್ತ ವ್ಯವಸ್ಥೆಯ ಕಟ್ಟಡ ಬೇಕಾಗಿದೆ. ಈ ನಿಟ್ಟಿನಲ್ಲಿ ನೂತನ ಕಟ್ಟಡಕ್ಕೆ ಟೆಂಡರ್ ಆಗಿದೆ. ಈ ಹಿಂದೆ ಬಸ್‌ನಿಲ್ದಾಣದಲ್ಲಿ ಮಾಡುವ ಯೋಜನೆ ಇತ್ತು. ಆದರೆ ಕೆಲವು ತೊಂದರೆಗಳಿಂದಾಗಿ ಬಿಇಒ ಕಚೇರಿಯ ಸ್ಥಳದಲ್ಲೇ ಕಟ್ಟಡ ನಿರ್ಮಾಣ ಆಗಲಿದೆ. ಇಲ್ಲಿ ಶಿಕ್ಷಕರ ಬೇಡಿಕೆ ಬೇಸ್‌ಮೆಂಟ್ ಪಾರ್ಕಿಂಗ್ ಬೇಕೆಂಬ ಮನವಿಯಂತೆ ತಕ್ಷಣ ಗ್ರೌಂಡ್ ಪ್ಲೋರ್ ಮಾಡಲು ಇಂಜಿನಿಯರ್‌ಗೆ ಹೇಳಿದ್ದೇನೆ. ಇಲ್ಲಿ ಕಟ್ಟಡ ನಿರ್ಮಾಣಕ್ಕೆ ಮಾತ್ರ ಅನುದಾನ ಬಂದಿದೆ. ಗ್ರೌಂಡ್ ಪ್ಲೋರ್ ಮಾಡಬೇಕಾದರೆ ಅರ್ತ್ ವರ್ಕ್ ಮಾಡಬೇಕು. ಈ ನಿಟ್ಟಿನಲ್ಲಿ ಶಾಸಕರ ನಿಧಿಯಿಂದ ರೂ.5 ಲಕ್ಷ ಭರಿಸುತ್ತೇನೆ. ಇದರ ಜೊತೆಗೆ ರೂ.2 ಕೋಟಿ ಅನುದಾನ ಬಂದರೆ ಇನ್ನೂ ಒಳ್ಳೆಯ ರೀತಿಯ ಕಟ್ಟಡ ನಿರ್ಮಾಣ ಮಾಡಬಹುದು. ಅದಕ್ಕೆ ಪೂರಕವಾಗಿ ಪ್ರಯತ್ನ ಮಾಡುತ್ತೇನೆ. ಈ ಕುರಿತು ನನಗೆ ಪ್ರಸ್ತಾವನೆ ಕೊಡಿ. 3 ಮಹಡಿ ಕಟ್ಟುವುದಾದರೆ ಈಗಲೇ ಪ್ಲಾನ್ ಮಾಡಬೇಕು. ಅದಕ್ಕೆ ನಾನು ಮಿನಿಸ್ಟರ್‌ನಲ್ಲಿ ಮಾತನಾಡುತ್ತೇನೆ. ಗುತ್ತಿಗೆದಾರರಿಗೂ ಕೂಡಾ ಟೆಂಡರ್ ಕಾಲಾವಕಾಶ ನೀಡಲು ಅವಕಾಶ ನೀಡಲಾಗುವುದು. ಇಮಿಡಿಯಟ್ ಅರ್ತ್‌ವರ್ಕ್ ಮಾಡಿ ಎಂದರು.

ರಾಜಕೀಯದವರಿಗೂ ನಿವೃತ್ತಿ ಇರಬೇಕು
ರಾಜಕೀಯದವರು ಕಾಮಗಾರಿ ಮಾಡುವುದು ಮಾತ್ರ. ಆದ ಕಾಮಗಾರಿಗೆ ಪುನಃ ಕಾಮಗಾರಿ ಮಾಡಿಸುತ್ತಾರೆ. ಡಾಮರ್ ಹಾಕಿದಲ್ಲಿ ಮತ್ತೆ ಡಾಮರ್ ಕಾಂಕ್ರೀಟ್ ಹಾಕಿಸುತ್ತಾರೆ. ಅವರಿಗೆ ಹಣ ಮಾಡುವದು ಒಂದೇ ಗುತ್ತು. ಬೇರೆ ಬೇರೆ ದೇಶದಲ್ಲಿ ಪ್ಲಾನ್ ಮಾಡಿ ಅಭಿವೃದ್ಧಿ ಕೆಲಸ ಮಾಡುತ್ತಾರೆ. ಹಾಗಾಗಿ ಹೊಸ ಜನರೇಶನ್ ಬರಬೇಕು. ಆಗ ಹೊಸ ಆಲೋಚನೆ ಹುಟ್ಟುತ್ತದೆ. ಇಲ್ಲಿ ಸರಕಾರಿ ನೌಕರರಿಗೆ 60 ವರ್ಷ ಆದಾ ಬಳಿಕ ನಿವೃತ್ತಿ ಇದ್ದಂತೆ ರಾಜಕೀಯದವರಿಗೂ ಇರಬೇಕು. ಆದರೆ ರಾಜಕೀಯದಲ್ಲಿ 90 ವರ್ಷ ಆದರೂ ಓಡುತ್ತಾ ಇರುತ್ತಾರೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅಬ್ರಹಾಂ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಮಲ್ ಕುಮಾರ್, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನಾಗೇಶ್ ಪಾಟಾಳಿ, ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾ ಸಹ ಸಂಘಟನಾ ಕಾರ್ಯದರ್ಶಿ ಶ್ಯಾಮಲ ರೈ, ರಾಮಣ್ಣ ರೈ, ಸಿ.ಆರ್.ಪಿ ಅಶ್ರಫ್, ಶಿಕ್ಷಣ ಸಂಯೋಜಕ ಹರಿಪ್ರಸಾದ್, ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಜಯರಾಮ ಶೆಟ್ಟಿ, ನವೀನ್, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರಾದ ಸೀತಾರಾಮ ಗೌಡ ಮತ್ತು ಸುಧಾಕರ್ ರೈ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here