ಶಿವ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಪ್ರಾಂತೀಯ ಕಲೆಗಳ ಪ್ರದರ್ಶನ ನೀಡುವಂತೆ ರಾಜ್ಯ ಧಾರ್ಮಿಕ ದತ್ತಿ ಇಲಾಖೆಯಿಂದ ಸೂಚನೆ

0

ಪುತ್ತೂರು: ಮಾ.8ರಂದು ನಡೆಯುವ ಮಹಾಶಿವರಾತ್ರಿಯ ಅಂಗವಾಗಿ ರಾಜ್ಯದ ಎಲ್ಲಾ ಶಿವನ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಮತ್ತು ಮರೆಯಾಗುತ್ತಿರುವ ಪ್ರಾಂತೀಯ ಕಲೆಗಳನ್ನು ಮಾಡಿಸುವಂತೆ ರಾಜ್ಯ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯಿಂದ ಎಲ್ಲಾ ಶಿವ ದೇವಸ್ಥಾನಗಳಿಗೆ ಸೂಚನೆ ನೀಡಲಾಗಿದೆ.


ಶಿವರಾತ್ರಿಯ ಹಬ್ಬದ ದಿನದಂದು ವಿಶೇಷವಾಗಿ ಸಂಕಲ್ಪಿಸಿ ಆ ದಿನ ಪ್ರಾಂತಃ ಕಾಲದಿಂದ ಮಧ್ಯಾಹ್ನದ ತನಕ ಯಾವುದಾದರೊಂದು ಸೂಕ್ತ ಸಮಯದಲ್ಲಿ ದೇವಾಲಯದ ದೈನಂದಿನ ಪೂಜಾಧಿಗಳಿಗೆ ತೊಂದರೆ ಆಗದಂತೆ ರುದ್ರಾಭಿಷೇಕ ಮತ್ತು ರುದ್ರ ಹೋಮ ಪೂಜಾ ಕಾರ್ಯಗಳನ್ನು ವಿಶೇಷವಾಗಿ ನಡೆಸಬೇಕು. ಮರೆಯಾಗುತ್ತಿರುವ ಸಾಂಸ್ಕೃತಿಕ ಕಲೆಗಳಾದ ಗೊಂಬೆಯಾಟಗಳು ಸಹಿತ ಇತರೆ ಸಾಂಸ್ಕೃತಿಕ ಕಾರ್ಯಕ್ರಮಗಳಾದ ಕೋಲಾಟ, ಯಕ್ಷಗಾನ, ವೀರಭದ್ರ ಕುಣಿತ, ದೇಸೀಯ ವಾದ್ಯಗಳು, ಭರತ ನಾಟ್ಯ, ಭಕ್ತಿಗೀತೆಗಳು, ಜಾನಪದ ಕಲೆಗಳು, ಪಾರಂಪರಿಕ ಸ್ಥಳೀಯ ಕಿರು ನಾಟಕಗಳಾದ ದಕ್ಷಯಜ್ಞ, ಶನಿ ಮಹಾತ್ಮೆ, ಶಿವ ಸಂಬಂಧಿ ಕಾರ್ಯಕ್ರಮಗಳನ್ನು ಆಯೋಜಿಸುವುದು. ಇದಾವುದು ಲಭ್ಯವಾಗದಿದ್ದರೆ ಸ್ಥಳೀಯವಾಗಿ ಆಯಾಯ ಪ್ರಾಂತ್ಯಗಳಲ್ಲಿ ಜಿಲ್ಲೆಗಳಲ್ಲಿ ಮರೆಯಾಗುತ್ತಿರುವ ಯಾವುದಾದರೊಂದು ಲಭ್ಯವಾಗಬಹುದಾದ ಸಾಂಸ್ಕೃತಿಕ ಕಲೆ, ಧಾರ್ಮಿಕ ಕಲೆಯನ್ನು ಗಮನಿಸಿ ಸಂಬಂಧಪಟ್ಟ ಸ್ಥಳೀಯ ಅಧಿಕಾರಿಗಳು ಅದಕ್ಕನುಗುಣವಾಗಿ ಪೂರ್ವ ಸಿದ್ಧತೆ ಮಾಡಿಕೊಂಡು ಶಿವರಾತ್ರಿ ಹಬ್ಬದ ದಿನದಂದು ವಿಶೇಷವಾಗಿ ಹಬ್ಬವನ್ನು ಆಚರಿಸುವಂತೆ ಸೂಚನೆ ನೀಡಲಾಗಿದೆ.

LEAVE A REPLY

Please enter your comment!
Please enter your name here