ಪುತ್ತೂರು: ಕಳೆದ ಆರೇಳು ತಿಂಗಳಿನಿಂದ ರಾಜ್ಯದಲ್ಲಿ ನಡೆಯುತ್ತಿರುವ ದುಸ್ಥಿತಿಯನ್ನು ನೋಡಿ ಅದರ ವಿರುದ್ಧ ರಾಷ್ಟ್ರಪ್ರೇಮಿಗಳ ನೇತೃತ್ವದಲ್ಲಿ ಹೋರಾಟ ನಡೆಯುತ್ತಿದೆ. ಇದನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿರುವ ರಾಜ್ಯ ಸರಕಾರ ರಾಷ್ಟ್ರದ್ರೋಹಿಯೋ, ರಾಷ್ಟ್ರಪ್ರೇಮೀಯೋ ಎಂಬುದನ್ನು ಪ್ರಶ್ನೆ ಮಾಡಬೇಕಾಗಿದೆ ಎಂದು ರಾಜ್ಯ ಬಿಎಮ್‌ಎಸ್ ಕಾರ್ಯಕಾರಿಣಿ ಸಮಿತಿ ಸದಸ್ಯ ನ್ಯಾಯವಾದಿ ಅನಿಲ್ ಕುಮಾರ್ ಯು ಅವರು ಹೇಳಿದರು.
ರಾಜ್ಯಾದ್ಯಂತ ನಡೆದ ಹಿಂದೂ ವಿರೋಧಿ ಕೃತ್ಯ, ಪಾಕಿಸ್ತಾನಕ್ಕೆ ಜೈಕಾರ ಹಾಕಿರುವ ಪ್ರಕರಣ, ಬೆಂಗಳೂರಿನ ಕೆಫೆಯಲ್ಲಿ ನಡೆದ ಬಾಂಬ್ ಸ್ಪೋಟದ ಭಯೋತ್ಪಾದನಾ ಕೃತ್ಯವನ್ನು ಖಂಡಿಸಿ ಭಯೋತ್ಪಾದನ ವಿರೋಧಿ ಹೋರಾಟ ಸಮಿತಿಯಿಂದ ಮಾ.6ರಂದು ದರ್ಬೆಯಲ್ಲಿ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.ರಾಜ್ಯದ ದುಸ್ಥಿತಿಯ ವಿರುದ್ದ ಎಚ್ಚರಿಕೆ ನೀಡಲು ಈ ಪ್ರತಿಭಟನೆ ನಡೆಸಲಾಗುತ್ತಿದೆ. ಭಯೋತ್ಪಾದನೆ ವಿರುದ್ಧ ಪ್ರತಿಭಟನೆ ಮಾಡಲು ತುಮಕೂರಿಗೆ ತೆರಳುತ್ತಿದ್ದ ಪುತ್ತೂರಿನ ಮುತ್ತು ಮುರಳೀಕೃಷ್ಣ ಹಸಂತಡ್ಕ ಅವರನ್ನು ರಾಜ್ಯ ಸರಕಾರದ ಒತ್ತಡದಿಂದ ಪೊಲೀಸರು ಬಂಽಸುವ ಕೆಲಸ ಮಾಡಿದ್ದಾರೆ.ಈ ರೀತಿಯಲ್ಲಿ ಹಿಂದು ಕಾರ್ಯಕರ್ತರ ದಮನ ಮಾಡುವುದಾದರೆ ಮುರಳಿಕೃಷ್ಣ ಹಸಂತಡ್ಕ ಅವರಂತಹ ಸಾವಿರಾರು ಕಾರ್ಯಕರ್ತರು ಪುತ್ತೂರಿನಲ್ಲಿ ಸಿಡಿದೇಳಲಿದ್ದಾರೆ.ಇವತ್ತು ನೀವು ಜೇನುನೊಣಕ್ಕೆ ಕಲ್ಲು ಎಸೆದಿದ್ದೀರಿ.ರಾಷ್ಟ್ರಭಕ್ತರನ್ನು ಮುಟ್ಟುವ ಕೆಲಸ ಮಾಡಬೇಡಿ.ನೀವು ಸುಟ್ಟು ಹೋಗುತ್ತೀರಿ ಎಂದು ಎಚ್ಚರಿಕೆ ನೀಡಿದ ಅವರು, ಪಾಕ್ ಪ್ರೇರಿತ ರಾಷ್ಟ್ರದ್ರೋಹಿಗಳನ್ನು ಸಮರ್ಥನೆ ಮಾಡುವ ಮೂಲಕ ಕಾಂಗ್ರೆಸ್‌ನ ರಾಜ್ಯ ಸಭೆ ಸದಸ್ಯರೇ ಬೆಂಬಲ ನೀಡುತ್ತಿರುವುದು, ಹಿಂದುಗಳ ಹೋರಾಟ ಹತ್ತಿಕ್ಕುವುದನ್ನು ನೋಡಿದಾಗ ರಾಜ್ಯ ಸರಕಾರ ರಾಷ್ಟ್ರಪ್ರೇಮಿ ಸರಕಾರವೋ? ರಾಷ್ಟ್ರದ್ರೋಹಿ ಸರಕಾರವೋ ಎಂಬ ಪ್ರಶ್ನೆ ಮೂಡಿದೆ ಎಂದರು.
ರಾಷ್ಟ್ರದ್ರೋಹಿಗಳನ್ನು ಅರಬ್ಬಿ ಸಮುದ್ರಕ್ಕೆ ಎತ್ತಿ ಬಿಸಾಡಬೇಕು: ರಾಷ್ಟ್ರಕ್ಕೆ ವಿರೋಧವಾಗಿ ಕೆಲಸ ಮಾಡುವವರಿಗೆ ತಕ್ಕ ಶಿಕ್ಷೆ ಕೊಡಬೇಕು.ಅದಕ್ಕೆ ಪ್ರೇರಣೆ ನೀಡುವ ರಾಜಕೀಯ ವ್ಯಕ್ತಿಗಳು ಕೂಡಾ ರಾಷ್ಟ್ರ ಬಿಟು ಹೋಗಬೇಕು.ಅವರು ಬಿಟ್ಟು ಹೋಗದಿದ್ದರೆ ನೂರಾರು, ಸಾವಿರಾರು ರಾಷ್ಟ್ರಭಕ್ತರು ಅವರನ್ನು ಅರಬ್ಬಿ ಸಮುದ್ರಕ್ಕೆ ಎತ್ತಿ ಬಿಸಾಡಲಿದ್ದಾರೆ ಎಂದ ಅವರು, ನಮ್ಮ ಹೋರಾಟ ಇಲ್ಲಿಗೆ ಸೀಮಿತವಾಗಿಲ್ಲ.ಮುಂದಿನ ದಿನ ಇದಕ್ಕಿಂತ ಉಗ್ರವಾದ ಹೋರಾಟ ಇಡೀ ರಾಜ್ಯದಲ್ಲಿ ನಡೆಯಲಿದೆ ಎಂದರು. ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಮಾಜಿ ಶಾಸಕ ಸಂಜೀವ ಮಠಂದೂರು, ಜಿಲ್ಲಾ ಬಿಜೆಪಿಯ ಮಾಜಿ ಉಪಾಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕಿಶೋರ್ ಬೊಟ್ಯಾಡಿ, ಕರಾವಳಿ ಅಭಿವೃದ್ಧಿ ಪ್ರಾಽಕಾರದ ನಿಕಟಪೂರ್ವ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರ ಮಂಡಲದ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್,ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ, ಸೀತಾರಾಮ ರೈ ಕೆದಂಬಾಡಿಗುತ್ತು, ಯತೀಶ್, ಅಜಿತ್ ರೈ ಹೊಸಮನೆ, ಚಂದ್ರಶೇಖರ್ ರಾವ್ ಬಪ್ಪಳಿಗೆ, ವಿಶ್ವಹಿಂದು ಪರಿಷತ್ ಜಿಲ್ಲಾಧ್ಯಕ್ಷ ಡಾ.ಕೃಷ್ಣಪ್ರಸನ್ನ, ಪ್ರಮುಖರಾದ
ಶ್ರೀಧರ್ ತೆಂಕಿಲ, ಜಿತೇಶ್ ಬಲ್ನಾಡು, ಹರೀಶ್ ದೋಳ್ಪಾಡಿ, ಜನಾರ್ದನ ಬೆಟ್ಟ, ಶೇಷಪ್ಪ ಬೆಳ್ಳಿಪ್ಪಾಡಿ, ಪ್ರವೀಣ್ ಕಲ್ಲೇಗ, ಮಹೇಶ್ ಬಜತ್ತೂರು, ಪ್ರಮೋದ್ ಕಡಬ, ಜಯಂತ್ ಕಡಬ, ತಿಲಕ್ ಕಡಬ, ಪದ್ಮನಾಭ ವಿಟ್ಲ, ಕೃಷ್ಣಪ್ಪ ಕಲ್ಲಡ್ಕ, ಲಕ್ಷ್ಮಣ ಗೌಡ ಬೆಳ್ಳಿಪ್ಪಾಡಿ, ವಿಶಾಕ್ ಶಶಿಹಿತ್ಲು, ಅಜಿತ್ ಕೆಯ್ಯೂರು, ಅನಿಲ್ ಇರ್ದೆ, ಹಿಂದೂ ಜಾಗರಣ ವೇದಿಕೆಯ ದಿನೇಶ್ ಪಂಜಿಗ, ನರಸಿಂಹ ಮಾಣಿ, ಮನೀಶ್ ಬಿರ್ವ, ಬಿಜೆಪಿ ಪ್ರಮುಖರಾದ ಜಯಂತಿ ನಾಯಕ್, ವಿದ್ಯಾ ಗೌರಿ, ಮೋಹಿನಿ ವಿಶ್ವನಾಥ ಗೌಡ, ಶಶಿಪ್ರಭಾ, ಪ್ರೇಮಲತಾ ಸಹಿತ ಹಲವಾರು ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಕಾರ್ಯಕರ್ತರು, ಪೊಲೀಸರ ಮಧ್ಯೆ ಮಾತಿನ ಚಕಮಕಿ
ಪ್ರತಿಭಟನೆ ನಡೆಯುತ್ತಿದ್ದ ಸಂದರ್ಭ ಕೆಲ ಕಾರ್ಯಕರ್ತರು ರಸ್ತೆಯಲ್ಲಿ ಕುಳಿತಿದ್ದರು. ರಸ್ತೆಯಲ್ಲಿ ಕುಳಿತವರನ್ನು ಅಲ್ಲಿಂದ ಎದ್ದೇಳುವಂತೆ ಪೊಲೀಸರು ಸೂಚನೆ ನೀಡಿದ ವೇಳೆ ಕಾರ್ಯಕರ್ತರು ಮತ್ತು ಪೊಲೀಸರ ಮಧ್ಯೆ ಮಾತಿನ ಚಕಮಕಿ ನಡೆಯಿತು. ನಗರ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಸತೀಶ್ ಜಿ.ಜೆ ಅವರು ಮಧ್ಯೆ ಪ್ರವೇಶಿಸಿದರು. ಕಾರ್ಯಕರ್ತರು ಸರಕಾರ ಮತ್ತು ಪೊಲೀಸರ ವಿರುದ್ಧ ಘೋಷಣೆ ಕೂಗಲಾರಂಭಿಸಿದರು. ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಕಿಶೋರ್ ಬೊಟ್ಯಾಡಿ, ಬಜರಂಗದಳ ಪ್ರಮುಖರೂ ಪೊಲೀಸರೊಂದಿಗೆ ಮಾತನಾಡಿದರು. ಕೊನೆಗೆ ದರ್ಬೆ ವೃತ್ತದ ಒಂದು ಭಾಗದ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಿ ಏಕಮುಖ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ನೀಡಲಾಯಿತು. ಪ್ರತಿಭಟನೆ ಬಳಿಕವೂ ಕಾರ್ಯಕರ್ತರು ರಸ್ತೆಯಲ್ಲಿ ಕೆಲ ಹೊತ್ತು ಕೂತು ಬಳಿಕ ತೆರಳಿದರು.