ಕಡಬ ತಾಲ್ಲೂಕು ಶ್ರೀ ಕ್ಷೇ.ಧ.ಗ್ರಾ.ಯೋಜನೆಯ ಸಭೆ

0

ಪುತ್ತೂರು: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಕಡಬ ತಾಲೂಕು ಪ್ರಗತಿಬಂಧು ಕೇಂದ್ರ ಒಕ್ಕೂಟ ಸಮಿತಿಯ ಸಭೆಯು ಕಡಬ ಅಂಬೇಡ್ಕರ್ ಭವನದಲ್ಲಿ ನಡೆಯಿತು. ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಕಡಬ ತಾಲೂಕು ಅಧ್ಯಕ್ಷರಾದ ಮಹೇಶ್ ಕೆ ಸವಣೂರು ಸಭೆಯನ್ನು ಉದ್ಘಾಟಿಸಿ ಮಾತನಾಡಿ ಕಡಬ ತಾಲೂಕಿನ 63 ಒಕ್ಕೂಟದ ಅಧ್ಶಕ್ಷರುಗಳು ಒಟ್ಟಾಗಿ ಸೇರಿ ಒಕ್ಕೂಟದ ಬಲವರ್ಧನೆಯನ್ನು ನಿಸ್ವಾರ್ಥತೆಯಿಂದ ಮಾಡುತ್ತಿರುವುದು ಅಭಿನಂದನಾರ್ಹ ಪ್ರತಿಯೊಬ್ಬ ಅಧ್ಶಕ್ಷರು ಒಬ್ಬ ನಾಯಕನಾಗಿ ತಮ್ಮ ವ್ಶಾಪ್ತಿಯ ಒಕ್ಕೂಟದ ಸದಸ್ಯರ ಕಷ್ಟಗಳಿಗೆ ಸ್ಪಂದಿಸಿ ಗ್ರಾಮಾಭಿವೃಧ್ಧಿ ಯೋಜನೆಯ ಸೌಲಭ್ಶಗಳ ಒದಗಿಸಿಕೊಟ್ಟಲ್ಲಿ ಒಕ್ಕೂಟವು ಸಮರ್ಥವಾಗಿ ನಡೆಯಲು ಸಾಧ್ಶವಾಗುತ್ತದೆ. ತಮ್ಮ ವ್ಶಾಪ್ತಿಯ ಒಕ್ಕೂಟದ ಅಸ್ತಿತ್ವ ಒಕ್ಕೂಟದ ಅಧ್ಯಕ್ಷನ ಕಾರ್ಯಕ್ಷಮತೆಯ ಮೇಲಿರುತ್ತದೆ ಎಂದರು.

ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ಪ್ರವೀಣ್ ಕುಮಾರ್ ಮಾತನಾಡಿ, ಕಡಬ ತಾಲೂಕಿನ ಒಕ್ಕೂಟಗಳು ಜಿಲ್ಲೆಗೆ ಮಾದರಿಯಾಗಿ ಕರ್ತವ್ಯ ನಿರ್ವಹಿಸುತ್ತಿವೆ.ಒಕ್ಕೂಟದ ಕಾರ್ಯಕ್ಷಮತೆ ಹೆಚ್ಚಿಸುವಲ್ಲಿ ಒಕ್ಕೂಟದ ಅಧ್ಶಕ್ಷರುಗಳು ಇನ್ನಷ್ಟು ಶ್ರಮವಹಿಸಬೇಕು. ಯೋಜನೆಯ ಸೌಲಭ್ಯಗಳನ್ನು ಒಕ್ಕೂಟದ ಪ್ರತಿಯೊಬ್ಬರಿಗೂ ತಲುಪಿಸಲು ಪ್ರಯತ್ನಿಸಿದಾಗ ಸದಸ್ಯರ ವಿಶ್ವಾಸವನ್ನು ಗಳಿಸಲು ಸಾಧ್ಶವಾಗುತ್ತದೆ ಎಂದರು. ಕಡಬ ತಾಲೂಕು ಪ್ರಗತಿ ಬಂಧು ಕೇಂದ್ರ ಒಕ್ಕೂಟ ಸಮಿತಿ ಅಧ್ಯಕ್ಷ ಸಂತೋಷ್ ಕೇನ್ಯ ಅಧ್ಶಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ತಾಲೂಕು ಕೇಂದ್ರ ಒಕ್ಕೂಟ ಸಮಿತಿ ನಿಕಟಪೂರ್ವ ಅಧ್ಶಕ್ಷರು ಬಾಲಕೃಷ್ಣಗೌಡ ಹಾರ್ಪಲ ಕರಾವಳಿ ಪ್ರಾದೇಶಿಕ ವಿಭಾಗದ ಜನಜಾಗೃತಿ ಯೋಜನಾಧಿಕಾರಿ ಗಣೇಶ್ ಆಚಾರ್ಯ ಅವರು ಜನಜಾಗೃತಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಕಡಬ ತಾಲೂಕಿನ ವಲಯ ಒಕ್ಕೂಟದ ಅಧ್ಶಕ್ಷರುಗಳಾದ ರಮೇಶ್ ರೈ ಆರ್ಪಾಜೆ, ಕುಶಾಲಪ್ಪಗೌಡ, ˌರಾಮಚಂದ್ರ ಗೌಡ, ಉಮೇಶ್ ಉಪಸ್ಥಿತರಿದ್ದರು.
ತಾಲೂಕು ಯೋಜನಾಧಿಕಾರಿ ಮೇದಪ್ಪ ನಾವೂರು ಸ್ವಾಗತಿಸಿ ಸಾಧನಾ ವರದಿ ಮಂಡಿಸಿದರು. ನೆಲ್ಶಾಡಿ ವಲಯ ಮೇಲ್ವೀಚಾರಕ ವಿಜೇಶ್ ಜೈನ್ ವಂದಿಸಿದರು. ಕಡಬ ವಲಯ ಮೇಲ್ವೀಚಾರಕ ರವಿಪ್ರಸಾದ್ ಆಲಾಜೆ ಕಾರ್ಯಕ್ರಮ ನಿರೂಪಿಸಿದರು. ತಾಲೂಕಿನ 63 ಒಕ್ಕೂಟದ ಅಧ್ಶಕ್ಷರುಗಳು ಹಾಗೂ ಮೇಲ್ವೀಚಾರಕ ಶ್ರೇಣಿ ಸಿಬ್ಬಂದಿಗಳು ಉಪಸ್ಥಿತರಿದ್ದು ಮಾಹಿತಿ ಪಡೆದುಕೊಂಡರು.

LEAVE A REPLY

Please enter your comment!
Please enter your name here