ಶ್ರೀಕ್ಷೇತ್ರ ಹನುಮಗಿರಿಗೆ ಅಪೆಕ್ಸ್ ಬ್ಯಾಂಕ್, ಎಸ್‌ಸಿಡಿಸಿಸಿ ಬ್ಯಾಂಕ್‌ನ ಅಧಿಕಾರಿಗಳ ಭೇಟಿ

0

ಕಾವು: ಶ್ರೀಕ್ಷೇತ್ರ ಹನುಮಗಿರಿಯ ಶ್ರೀ ಪಂಚಮುಖಿ ಆಂಜನೇಯ ಮತ್ತು ಶ್ರೀ ಕೋದಂಡರಾಮ ಸನ್ನಿಧಿಗೆ ಬೆಂಗಳೂರು ಅಪೆಕ್ಸ್ ಬ್ಯಾಂಕ್ ಮತ್ತು ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಪ್ರಧಾನ ಕಛೇರಿಯಿಂದ ಅಧಿಕಾರಿಗಳು ಅ.9ರಂದು ಸಂಜೆ ಭೇಟಿ ನೀಡಿದರು.


ಅಪೆಕ್ಸ್ ಬ್ಯಾಂಕ್‌ನ ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ನಾಗರಾಜ್ ಟಿ.ಆರ್ ಮತ್ತು ದಯಾನಂದ ರಾವ್ ಎಸ್.ಎಚ್ ಹಾಗೂ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಮಂಗಳೂರು ಪ್ರಧಾನ ಕಛೇರಿಯ ಡಿಜಿಎಮ್ ಶರ್ಮಿಳಾ ರಾವ್, ಪ್ರಧಾನ ಕಛೇರಿಯ ಶ್ರೀನಾಥ್, ಎಸ್‌ಸಿಡಿಸಿಸಿ ಬ್ಯಾಂಕ್ ಪುತ್ತೂರು ಶಾಖೆಯ ಅಸಿಸ್ಟೆಂಟ್ ಮ್ಯಾನೇಜರ್ ಕೊರಗಪ್ಪ ಗೌಡ, ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಿಇಓ ಕೇಶವಮೂರ್ತಿ ಪಿ.ಜಿ, ಲೆಕ್ಕಿಗ ಅಭಿಷೇಕ್ ಪಿ.ಎಸ್‌ ಅವರು ಶ್ರೀಕ್ಷೇತ್ರಕ್ಕೆ ಭೇಟಿ ನೀಡಿದರು. ಈ ಸಂದರ್ಭ ಶ್ರೀಕ್ಷೇತ್ರದಿಂದ ಅರ್ಚಕರು ಪ್ರಾರ್ಥನೆ ಮಾಡಿ ಪ್ರಸಾದ ನೀಡಿ ಹರಸಿದರು.

LEAVE A REPLY

Please enter your comment!
Please enter your name here