ಪುತ್ತೂರು:ಪುತ್ತೂರು ಮರಾಟಿ ಸಮಾಜ ಸೇವಾ ಸಂಘ ಇದರ ಆಶ್ರಯದ ಅಂಗ ಸಂಸ್ಥೆಯಾದ ಮರಾಟಿ ಯುವ ವೇದಿಕೆಯ 2025-2026 ನೇರ ಸಾಲಿನ ನೂತನ ಕಾರ್ಯಕಾರಿ ಸಮಿತಿಯ ರಚನೆ ಇತ್ತೀಚೆಗೆ ಪುತ್ತೂರಿನ ಕೊಂಬೆಟ್ಟು ಮರಾಟಿ ಸಮಾಜ ಮಂದಿರದಲ್ಲಿ ನಡೆಯಿತು.
ಮರಾಟಿ ಯುವ ವೇದಿಕೆಯ ನೂತನ ಅಧ್ಯಕ್ಷರಾಗಿ ನವೀನ್ ಕುಮಾರ್ ಕೆ. ಕಾಪುತಮೂಲೆ, ಕಾರ್ಯದರ್ಶಿಯಾಗಿ ಯಶಸ್ವಿನಿ ಸಾಲ್ಮರ, ಕೋಶಾಧಿಕಾರಿಯಾಗಿ ರವೀಶ್ ತಾರಿಗುಡ್ಡೆ ಆಯ್ಕೆಯಾದರು, ಇನ್ನುಳಿದಂತೆ ಉಪಾಧ್ಯಕ್ಷರಾಗಿ ಯತೀಶ್ ಕುಮಾರ್ ಕೆ. ಎಂ ಪುಣ್ಚಪ್ಪಾಡಿ, ಜೊತೆ ಕಾರ್ಯದರ್ಶಿಯಾಗಿ ನವೀನ್ ಎರ್ಕಮೆ, ಕ್ರೀಡಾ ಕಾರ್ಯದರ್ಶಿಯಾಗಿ ಸಂದೀಪ್ ಆರ್ಯಾಪು ಮತ್ತು ಹರ್ಷಿತಾ ಬಿ.ಟಿ ಶೇವಿರೆ, ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ಗಂಗಾಧರ ಕೌಡಿಚ್ಚಾರು ಮತ್ತು ಪೂರ್ಣಿಮಾ ಪುರುಷರಕಟ್ಟೆ, ಭಜನಾ ಉಸ್ತುವಾರಿಯಾಗಿ ಅಶೋಕ್ ನಾಯ್ಕ್ ಸೊರಕೆ, ಸಂಘಟನಾ ಕಾರ್ಯದರ್ಶಿಗಳಾಗಿ ಶ್ರೀನಿವಾಸ ಮಠಂತಬೆಟ್ಟು, ವಸಂತ ಆರ್ಯಾಪು, ಗೋಪಾಲ ಪಡುಮಲೆ, ಗಂಗಾಧರ ಪಾಣಾಜೆ, ಗಣೇಶ್ ಬುಳೇರಿಕಟ್ಟೆ, ಆಕಾಶ್ ನೆಹರು ನಗರ, ಸದಸ್ಯರಾಗಿ ಅಶ್ವಿನಿ ಸಿ ಎಚ್,ಚಾಕೊಟೆ, ಸ್ವಾತಿ ಬೊಳಿಂಜ, ಸೌಜನ್ಯ ಬೊಳಿಂಜ , ಹರ್ಷತಾ ಎನ್, ಸಾಲ್ಮರ, ಪ್ರಣತಿ. ಬಿ, ನವೀನ್ ಮೈರ, ಅಶ್ವಿತಾ ಜರಿನಾರು, ಜಸ್ಮಿತಾ ಜರಿನಾರು, ನಮ್ರತಾ. ಡಿ ಕೈಕಾರ, ಮಮತಾ ಎಸ್. ಪಂಜಿಗ, ಭೂಮಿಕಾ, ದೀಕ್ಷಾ ನಾಯ್ಕ್, ನವ್ಯಶ್ರೀ. ಕೆ ಆಯ್ಕೆಯಾದರು. ಮಾತೃ ಸಂಘದ ಮಾಜಿ ಅಧ್ಯಕ್ಷರಾದ ಮಂಜುನಾಥ್ ಎನ್.ಎಸ್ ಮತ್ತು ಕಾರ್ಯದರ್ಶಿ ರಾಮ ನಾಯ್ಕ್ ಗೆಣಸಿನ ಕುಮೇರು ಆಯ್ಕೆ ಪ್ರಕ್ರಿಯೆ ನೆರವೇರಿಸಿದರು.