ಮಂಗಳೂರು ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ಮತ್ತು ಈಶ್ವರಮಂಗಲ ನವೋದಯ ಒಕ್ಕೂಟದ ವತಿಯಿಂದ ಕ್ಯಾನ್ಸರ್ ಬಗ್ಗೆ ಮಾಹಿತಿ ಶಿಬಿರ

0

ಪುತ್ತೂರು: ಕಾವು ಕೃಷಿ ಪತ್ತಿನ ಸಹಕಾರಿ ಸಂಘ, ಸಹಭಾಗಿತ್ವದಲ್ಲಿ ಈಶ್ವರಮಂಗಲ ನವೋದಯ ಒಕ್ಕೂಟದ ವತಿಯಿಂದ ಮಂಗಳೂರು ಎಂ ಐ ಒ ಆಸ್ಪತ್ರೆಯಿಂದ ಕ್ಯಾನ್ಸರ್ ಬಗ್ಗೆ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ನಡೆಯಿತು. ಗಜಾನನ ಆಂಗ್ಲ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮವನ್ನು ಶಾಲೆಯ ಸಂಚಾಲಕ ಶಿವರಾಮ್ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕ್ಯಾನ್ಸರ್ ಬಗ್ಗೆ ಮಾಹಿತಿಯನ್ನು ಪಡೆದು ಧೈರ್ಯವಾಗಿ ಎದುರಿಸುವ ಸಾಮರ್ಥ್ಯ ಬರಬೇಕು. ಇದೊಂದು ಉತ್ತಮ ಕಾರ್ಯಕ್ರಮ ಎಂದು ಶುಭ ಹಾರೈಸಿದರು.

ಮಂಗಳೂರು ಎಂ ಐ ಒ ಕ್ಯಾನ್ಸರ್ ಆಸ್ಪತ್ರೆಯ ನಿರ್ದೇಶಕ ಡಾ.ಸುರೇಶ್ ರಾವ್ ಕ್ಯಾನ್ಸರ್ ಬಗ್ಗೆ ಪೂರ್ಣ ಮಾಹಿತಿ, ಲಕ್ಷಣಗಳು ಹಾಗೂ ಹರಡುವ ರೀತಿಯನ್ನು ಪ್ರಾತ್ಯಕ್ಷಿಕೆ ಮುಖಾಂತರ ತಿಳಿಸಿಕೊಟ್ಟರು. ಇನ್ನೊಬ್ಬ ತಜ್ಞ ಡಾ.ಎಂ ಎಸ್ ಬಾಳಿಗಾ ಮಾತನಾಡಿ, ಕ್ಯಾನ್ಸರ್ ಬಾಯಿ ಮತ್ತು ಇತರ ಭಾಗಗಳಲ್ಲೂ ಬರುತ್ತದೆ. ಉತ್ತಮ ಆಹಾರ ಪದ್ಧತಿಯಿಂದ ಕ್ಯಾನ್ಸರ್ ಬರುವುದನ್ನು ತಡೆಗಟ್ಟಬಹುದು ಎಂದು ಹೇಳಿದರು. ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿ ಪರಿಹಾರ ಸೂಚಿಸಿದರು.

ವೇದಿಕೆಯಲ್ಲಿ ಡಾ.ರೂಹಿ ಮತ್ತು ಕಾವು ಈಶ್ವರಮಂಗಲ ನವೋದಯ ಒಕ್ಕೂಟದ ಪ್ರೇರಕಿ ಉಪಸ್ಥಿತರಿದ್ದರು. ಒಕ್ಕೂಟದ ಅಧ್ಯಕ್ಷ ರತ್ನ ಕುಮಾರ್ ಸಂದರ್ಭೋಚಿತರಾಗಿ ಮಾತನಾಡಿ, ಶುಭ ಹಾರೈಸಿದರು. ರಕ್ತೇಶ್ವರಿ ನವೋದಯ ಸಂಘ ಬೆದ್ರಾಡಿ-ಕರ್ನೂರು ತಂಡವನ್ನು ಪುಸ್ತಕ ಹಸ್ತಾಂತರದ ಮುಖಾಂತರ ಅಧ್ಯಕ್ಷರು ಉದ್ಘಾಟಿಸಿದರು. ಜಲಜಾಕ್ಷಿ ಸ್ವಾಗತಿಸಿ, ವೆಂಕಪ್ಪ ಧನ್ಯವಾದ ನೆರವೇರಿಸಿದರು. ಆಸ್ಪತ್ರೆಯ ಸಿಬ್ಬಂದಿಗಳು ಸಹಕರಿಸಿದರು.

LEAVE A REPLY

Please enter your comment!
Please enter your name here