ಸಂಸ್ಥೆಯ ಇಂತಹ ಕೆಲಸ ಅಭಿನಂದನೀಯ: ಅನಿತಾ ಹೇಮನಾಥ ಶೆಟ್ಟಿ
ಆದಾಯಕ್ಕಿಂತ ಗ್ರಾಹಕರ ತೃಪ್ತಿಯನ್ನು ಬಯಸುತ್ತಿರುವುದು ಸಂಸ್ಥೆಯ ಬೆಳವಣಿಗೆಗೆ ಪೂರಕ: ರಂಜಿತಾ ಹೆಚ್. ಶೆಟ್ಟಿ
ಆಭರಣಗಳ ವೆರೈಟಿ ಗ್ರಾಹಕರನ್ನು ಆಕರ್ಷಿಸುವಂತೆ ಮಾಡುತ್ತದೆ: ಶಶಿಕಲ
ಪುತ್ತೂರು: ಅಂತರಾಷ್ಟ್ರೀಯ ಖ್ಯಾತಿಯ ಚಿನ್ನಾಭರಣ ಮಳಿಗೆ, ಕೆ.ಎಸ್.ಆರ್.ಟಿ.ಸಿ. ಬಸ್‌ನಿಲ್ದಾಣದ ಕಮರ್ಷಿಯಲ್ ಕಾಂಪ್ಲೆಕ್ಸ್‌ನಲ್ಲಿರುವ ಜೋಸ್ ಅಲುಕ್ಕಾಸ್ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರನ್ನು ಹಾಗೂ ಮಹಿಳಾ ಗ್ರಾಹಕರನ್ನು ಗೌರವಿಸಲಾಯಿತು.
ಪ್ರಮುಖರಾದ ಅನಿತಾ ಹೇಮನಾಥ ಶೆಟ್ಟಿ ಅವರು ಮಾತನಾಡಿ ಮಹಿಳೆ ಒಂದು ಮನೆಯ ಆಸ್ತಿ, ಇದೀಗ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿಯೂ ತನ್ನದೇ ಆದ ಛಾಪು ಮೂಡಿಸಿದ್ದಾರೆ. ಅಂತಹ ಮಹಿಳೆಯರನ್ನು ಇದೀಗ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಸಂಸ್ಥೆಯ ವತಿಯಿಂದ ಗೌರವಿಸುತ್ತಿರುವುದು ಸಂತಸದ ವಿಚಾರ. ಸಂಸ್ಥೆಯ ಇಂತಹ ಕೆಲಸ ಅಭಿನಂದನೀಯ ಎಂದರು.
ಜಿಲ್ಲಾ ಲಿಯೋ ಕ್ಲಬ್ ನ ಅಧ್ಯಕ್ಷರಾದ ರಂಜಿತಾ ಹೆಚ್. ಶೆಟ್ಟಿ ರವರು ಮಾತನಾಡಿ ಜೋಸ್ ಆಲುಕ್ಕಾಸ್ ಚಿನ್ನಾಭರಣ ಮಳಿಗೆ ನಮ್ಮ ಕುಟುಂಬದ ಅಚ್ಚುಮೆಚ್ಚಿನ ಸಂಸ್ಥೆಯಾಗಿದೆ. ಗ್ರಾಹಕ ವರ್ಗಕ್ಕೆ ನೀವುಗಳು ನೀಡುತ್ತಿರುವ ಸೇವೆ ಬಹಳ ಉತ್ತಮ ವಾಗಿದೆ. ಸಂಸ್ಥೆ ತನ್ನ ಆದಾಯಕ್ಕಿಂತ ಗ್ರಾಹಕರ ತೃಪ್ತಿಯನ್ನು ಬಯಸುತ್ತಿರುವುದು ಸಂಸ್ಥೆಯ ಬೆಳವಣಿಗೆಗೆ ಪೂರಕ. ಸಂಸ್ಥೆ ಇನ್ನಷ್ಟು ಬೆಳೆಯಲಿ ಎಂದರು.
ಕುಂಬ್ರ ಕ್ಲಸ್ಟರ್ ನ ಸಿ.ಆರ್.ಪಿ. ಶಶಿಕಲರವರು ಮಾತನಾಡಿ ಮಹಿಳೆ ದೇಶದ ಶಕ್ತಿ. ಮಹಿಳಾ ದಿನಾಚರಣೆಯ ಈ ಶುಭ ಸಂದರ್ಭದಲ್ಲಿ ಸಂಸ್ಥೆ ಮಹಿಳೆಯರನ್ನು ಗೌರವಿಸುತ್ತಿರುವುದು ಇತರರಿಗೆ ಮಾದರಿ. ಸಂಸ್ಥೆಯ ಸಿಬಂಧಿಗಳ ನಗುಮುಖದ ಸೇವೆ, ಆಭರಣಗಳ ವೆರೈಟಿ ಗ್ರಾಹಕರನ್ನು ಆಕರ್ಷಿಸುವಂತೆ ಮಾಡುತ್ತದೆ ಎಂದರು.
ಹೊಟೇಲ್ ಉದ್ಯಮಿ ಸುಜಾತ ಶೆಟ್ಟಿ, ಧನ್ವಂತರಿ ಆಸ್ಪತ್ರೆಯ ಮಾಲಕರಾದ ಜಾನಕಿ, ಡ್ಯಾಶ್ ಮಾರ್ಕೆಟಿಂಗ್ ನ ಮಾಲಕರಾದ ನಳಿನಿ, ಇಂಪೀರಿಯರ್ ಫರ್ನೀಚರ್ ನ ಮಾಲಕರಾದ ವೈಲೆಟ್ ಪಿಂಟೊ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪುತ್ತೂರು ಶಾಖ ವ್ಯವಸ್ಥಾಪಕ ರತೀಶ್ ಸಿ.ಪಿ. ಸ್ವಾಗತಿಸಿ, ಸಹಯಕ ಶಾಖಾ ವ್ಯವಸ್ಥಾಪಕ ಲೆನೀಶ್ ವಂದಿಸಿದರು. ಸಿಬ್ಬಂದಿ ಉದಯ ಕೆ. ಕಾರ್ಯಕ್ರಮ ನಿರೂಪಿಸಿದರು.