ಸರ್ವ ಸಮಾಜದವರ ಕಾರ್ಯಕ್ರಮ – ಸುಬ್ರಹ್ಮಣ್ಯ ನಟ್ಟೋಜ
ಶೃಂಗೇರಿ ಗುರುಗಳ ಅಭಿವಂದನಾ ಕಾರ್ಯಕ್ರಮವನ್ನು ಒಂದು ಸಮಾಜ ಅಥವಾ ವರ್ಗಕ್ಕೆ ಸೀಮಿಗೊಳಿಸದೆ ಪುತ್ತೂರಿನ ಎಲ್ಲಾ ಸಮಾಜದವರನ್ನು ಒಗ್ಗೂಡಿಸಿಕೊಂಡು ಆಯೋಜಿಸಲಾಗಿದೆ. ಜಾತಿ ಬೇಧವಿಲ್ಲದೇ ಈ ಕಾರ್ಯಕ್ರಮದಲ್ಲಿ ಸರ್ವರೂ ಪಾಲ್ಗೊಂಡು ಗುರುಗಳ ಆಶೀರ್ವಾದ ಪಡೆಯುವುದು ನಮ್ಮೆಲ್ಲರ ಉದ್ದೇಶವಾಗಿದೆʼ ಎಂದು ಸಮಿತಿಯ ಸಂಚಾಲಕ ಸುಬ್ರಹ್ಮಣ್ಯ ನಟ್ಟೋಜ ಹೇಳಿದರು.
ಪುತ್ತೂರು: ಶ್ರೀ ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನ ದಕ್ಷಿಣಾಮ್ನಾಯ ಶ್ರೀ ಶೃಂಗೇರಿ ಪೀಠಾಧೀಶ್ವರರಾದ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಯವರ ಅಭಿವಂದನಾ ಸಮಿತಿ ಮತ್ತು ಅಂಬಿಕಾ ವಿದ್ಯಾಲಯದ ದಶಾಂಬಿಕೋತ್ಸವ ಸಮಿತಿ ಆಶ್ರಯದಲ್ಲಿ ಏ.24 ಮತ್ತು 25ರಂದು ಪುತ್ತೂರಿನಲ್ಲಿ ನಡೆಯಲಿರುವ ಶ್ರೀಗಳ ಅಭಿವಂದನಾ ಕಾರ್ಯಕ್ರಮದ ಪೂರ್ವಭಾವಿ ಸಭೆಯು ಮಾ.11ರಂದು ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ಕಾಲೇಜಿನಲ್ಲಿ ನಡೆಯಿತು.
ಸಮಿತಿಯ ಸಂಚಾಲಕ ಸುಬ್ರಹ್ಮಣ್ಯ ನಟ್ಟೋಜರವರು ಸ್ವಾಗತಿಸಿ, ಪ್ರಸ್ತಾಪಿಸಿದರು. ಶೃಂಗೇರಿ ಶ್ರೀ ಪೀಠ ಸಾಮಾನ್ಯವಾಗಿ ಎಲ್ಲಾ ಸಮಾಜದವರಿಗೂ ಗುರುಪೀಠವಾಗಿರುವ ಹಿನ್ನೆಲೆಯಲ್ಲಿ ಪುತ್ತೂರಿನ ಸರ್ವ ಸಮಾಜದವರನ್ನು ಸೇರಿಸಿಕೊಂಡು ಕಾರ್ಯಕ್ರಮ ಆಯೋಜಿಸುವ ಕುರಿತು ಚರ್ಚಿಸಲಾಯಿತು. ಆಮಂತ್ರಣ ಪತ್ರಿಕೆ ರಚನೆಗ ಬಗ್ಗೆ ಸಭೆಯಲ್ಲಿ ಸಲಹೆ ಸೂಚನೆಗಳನ್ನು ಪಡೆದುಕೊಳ್ಳಲಾಯಿತು. ಸಭೆಯಲ್ಲಿ ಸಮಿತಿಯ ಸಲಹೆಗಾರರಾದ ಧಾರ್ಮಿಕ ಪರಿಷತ್ ಮಾಜಿ ಸದಸ್ಯ ಎನ್.ಕೆ. ಜಗನ್ನೀವಾಸ ರಾವ್, ಸಮಿತಿಯ ಸಂಘಟನಾ ಕಾರ್ಯದರ್ಶಿ ಅಂಬಿಕಾ ಸಮೂಹ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯ ಬಾಲಕೃಷ್ಣ ಬೋರ್ಕರ್, ಪ್ರಧಾನ ಕಾರ್ಯದರ್ಶಿ ಬಿ. ಐತ್ತಪ್ಪ ನಾಯ್ಕ್, ಉಪಾಧ್ಯಕ್ಷ ಅಂಬಿಕಾ ಆಡಳಿತ ಮಂಡಳಿ ಸದಸ್ಯ ಸುರೇಶ್ ಶೆಟ್ಟಿ, ಸಮಿತಿಯ ಖಜಾಂಜಿ ಶಿವಬ್ರಾಹ್ಮಣ ಸಂಘದ ಉಪಾಧ್ಯಕ್ಷ ಪಿ.ಸತೀಶ್ ರಾವ್, ಯು. ಲೋಕೇಶ್ ಹೆಗ್ಡೆ, ಆರ್ಯಾಪು ಸೇವಾ ಸಹಕಾರಿ ಸಂಘದ ನಿರ್ದೇಶಕ ಸತೀಶ್ ನಾೖಕ್ ಪರ್ಲಡ್ಕ, ಮಹಿಳಾ ಸಮಿತಿ ಸದಸ್ಯೆ ನ್ಯಾಯವಾದಿ ಹರಿಣಾಕ್ಷಿ ಜೆ. ಶೆಟ್ಟಿ, ಗೊಲ್ಲ ಯಾದವ ಸಂಘ ಕಡಬ ಪುತ್ತೂರು ವಲಯಾಧ್ಯಕ್ಷ ಇ. ವಾಸುದೇವ ಇಡ್ಯಾಡಿ, ಪರಿವಾರ ಸಹಕಾರಿ ಸಂಘದ ನಿರ್ದೇಶಕ ರತ್ನಾಕರ ನಾೖಕ್, ಎಚ್. ಮಾಧವ ಸ್ವಾಮಿ, ಸಮಿತಿಯ ಕಾರ್ಯದರ್ಶಿ ಶಿವಳ್ಳಿ ಸಂಪದ ವಕ್ತಾರ ಲಕ್ಷ್ಮೀನಾರಾಯಣ ಕಡಂಬಳಿತ್ತಾಯ, ಕೆ. ಶ್ರೀನಿವಾಸ ರಾವ್, ಬಾಲಕೃಷ್ಣ ರಾವ್, ಪಿ. ಬಾಬು ನಾಯ್ಕ್, ದಿನೇಶ್ ಕುಮಾರ್ ಜೈನ್, ಅಂಬಿಕಾ ಕಾಲೇಜಿನ ಪ್ರಾಂಶುಪಾಲ ರಾಕೇಶ್ ಕುಮಾರ್ ಕಮ್ಮಾಜೆ ಉಪಸ್ಥಿತರಿದ್ದರು ವಿವಿಧ ರೀತಿಯ ಸಲಹೆ ಸೂಚನೆ ನೀಡಿದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ಬಿ. ಐತ್ತಪ್ಪ ನಾಯ್ಕ್ ವಂದಿಸಿದರು.