ಮೋದಿಯವರನ್ನು ಮತ್ತೆ ಪ್ರಧಾನಿ ಮಾಡಲು ಜನತೆ ತೀರ್ಮಾನಿಸಿದ್ದಾರೆ’-ಪುತ್ತೂರು ಬಿಜೆಪಿ ಕಚೇರಿಗೆ ಭೇಟಿ ನೀಡಿದ ಬಿಜೆಪಿ ಅಭ್ಯರ್ಥಿ ಕ್ಯಾ|ಬ್ರಿಜೇಶ್ ಚೌಟ

0

ಪುತ್ತೂರು:ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ದೇಶದ ಪ್ರಧಾನ ಮಂತ್ರಿಯನ್ನಾಗಿ ಮಾಡುವುದಾಗಿ ಜನತೆ ತೀರ್ಮಾನಿಸಿದ್ದಾರೆ ಎಂದು ದ.ಕ. ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾ|ಬ್ರಿಜೇಶ್ ಚೌಟ ಹೇಳಿದರು.


2024ರ ಲೋಕಸಭಾ ಚುನಾವಣೆಗೆ ದ.ಕ.ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಘೋಷಣೆಯಾದ ಬಳಿಕ ಮಾ.14ರಂದು ಸಂಜೆ ಪುತ್ತೂರಿಗೆ ಪ್ರಥಮ ಭೇಟಿ ನೀಡಿದ ಅವರು ಪಕ್ಷದ ಕಚೇರಿಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.ಕಾಶ್ಮೀರದಲ್ಲಿ ಅತೀ ದೊಡ್ಡ ಸಮಸ್ಯೆಯಾಗಿದ್ದ ಆರ್ಟಿಕಲ್ 370ನ್ನು ರದ್ದುಪಡಿಸಲಾಗಿದೆ.ಆರ್ಟಿಕಲ್ 370 ರದ್ದು ಪಡಿಸಿದರೆ ಬೆಂಕಿ ಬೀಳಲಿದೆ ಎಂದು ಗೇಲಿ ಮಾಡಿದ್ದವರಿಗೆ ಸರಿಯಾದ ಉತ್ತರ ದೊರೆತಿದೆ.ಅತ್ಯಂತ ಕ್ಲಿಷ್ಟಕರ ಸನ್ನಿವೇಶಗಳನ್ನು ಸುಲಭವಾಗಿ ಪರಿಹಾರ ಮಾಡಿದ್ದಾರೆ.ಮೋದಿಯವರ ನಾಯಕತ್ವದಿಂದ ದೇಶದ ಅಭಿವೃದ್ಧಿಯಲ್ಲಿ ಅಮೂಲಾಗ್ರ ಬದಲಾವಣೆ ಮಾಡಿದ್ದಾರೆ.ಹಿಂದುಗಳ ಸ್ವಾಭಿಮಾನದ ಸಂಕೇತವಾಗಿದ್ದ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸುವ ಮೂಲಕ ಐನೂರು ವರ್ಷಗಳ ಹೋರಾಟಕ್ಕೆ ಫಲ ಒದಗಿಸಿದ್ದಾರೆ ಎಂದರು.


ಸರಕಾರದ ಯೋಜನೆಗಳನ್ನು ಜನರಿಗೆ ನೇರವಾಗಿ ಮನೆ ಮನೆಗೆ ತಲುಪಿಸುವ ಕೆಲಸ ಮೋದಿ ಸರಕಾರದಿಂದ ಆಗಿದೆ.ಗ್ಯಾರಂಟಿಗೆ ಮೋದಿಯೇ ಗ್ಯಾರಂಟಿಯಾಗಿದೆ.ಎಲ್ಲಾ ಕಾರ್ಯಕರ್ತರಿಂದ ಮತದಾರರ ಆಕಾಂಕ್ಷೆ, ಅಪೇಕ್ಷಗಳಿಗೆ ಅನುಗುಣವಾಗಿ ಕೆಲಸವಾಗಬೇಕು. ಜನರ ಧ್ವನಿಯಾಗಿ ಕೆಲಸ ಮಾಡಿದಾಗ ಜನರಿಗೆ ವಿಶ್ವಾಸ ಮೂಡಲಿದೆ.ಜನರ ಧ್ವನಿಯಾಗಿರುವುದರಿಂದ ಕಳೆದ ಲೋಕಸಭಾ ಚುಣಾವಣೆಯಲ್ಲಿ 302 ಸ್ಥಾನ ತಲುಪಿದೆ.ಬಿಜೆಪಿ ಹಾಗೂ ಮೋದಿಯವರ ಬಗ್ಗೆ ಪ್ರಾರಂಭದಿಂದಲೂ ಗೇಲಿ ಮಾಡುತ್ತಿದ್ದವರಿಗೆ ಜನತೆ ಸರಿಯಾದ ಉತ್ತರ ನೀಡಿದ್ದಾರೆ.ಈ ಬಾರಿ 400 ಸ್ಥಾನಗಳನ್ನು ನೀಡುವುದಾಗಿ ಜನತೆ ನಿರ್ಣಯ ಮಾಡಿದ್ದಾರೆ ಎಂದು ಚೌಟ ಹೇಳಿದರು.


ಅಭಿನಂದನೆ:
ಅಭ್ಯರ್ಥಿಯಾಗಿ ಆಯ್ಕೆಯಾದ ಬಳಿಕ ಪಕ್ಷದ ಕಚೇರಿಗೆ ಭೇಟಿ ನೀಡಿದ ಕ್ಯಾ|ಬ್ರಿಜೇಶ್ ಚೌಟರವರನ್ನು ಪಕ್ಷದ ವತಿಯಿಂದ ಮಾಜಿ ಶಾಸಕ ಸಂಜೀವ ಮಠಂದೂರುರವರು ಪೇಟ ತೊಡಿಸಿ, ಶಾಲು ಹೊದಿಸಿ, ಅಯೋಧ್ಯೆಯ ಪ್ರಸಾದ ತಿನ್ನಿಸಿ ಅಭಿನಂದಿಸಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯತೀಶ್ ಆರ‍್ವಾರ, ಕಾರ್ಯದರ್ಶಿ ವಿದ್ಯಾ ಗೌರಿ, ವಿಭಾಗ ಸಹ ಪ್ರಭಾರಿ ಗೋಪಾಲಕೃಷ್ಣ ಹೇರಳೆ, ಜಿಲ್ಲಾ ಯುವ ಮೋರ್ಚಾದ ಅಧ್ಯಕ್ಷ ನಂದನ್ ಮಲ್ಯ, ಚುನಾವಣಾ ರಾಜ್ಯ ಪ್ರಭಾರಿ ಸುಲೋಚನಾ ಜಿ.ಕೆ ಭಟ್, ಕರಾವಳಿ ಅಭಿವೃದ್ಧಿ ಪ್ರಾಽಕಾರದ ಮಾಜಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಬಿಜೆಪಿ ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ನಿತೀಶ್ ಶಾಂತಿವನ ಸ್ವಾಗತಿಸಿ, ಪುರುಷೋತ್ತಮ ಮುಂಗ್ಲಿಮನೆ ವಂದಿಸಿದರು.ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಭಾರತೀಯ ಜನತಾ ಪಕ್ಷವು ಸಂಘಟನೆ, ರಾಷ್ಟ್ರೀಯ ವಿಚಾರ, ಆಡಳಿತ, ನಾಯಕತ್ವಕ್ಕೆ ಉತ್ತಮ ಹೆಸರಿರುವ ಪಕ್ಷವಾಗಿದೆ.ಅತೀ ದೊಡ್ಡ ರಾಷ್ಟ್ರೀಯ ಪಕ್ಷದ ಅಭ್ಯರ್ಥಿಯಾಗಿ ನಾನು ಆಯ್ಕೆಯಾಗಿರುವುದು ಅತ್ಯಂತ ಹೆಮ್ಮೆಯ ಕ್ಷಣವಾಗಿದೆ.ನನಗೆ ದೊರೆತ ಜವಾಬ್ದಾರಿಯನ್ನು ಅತ್ಯಂತ ವಿನೀತನಾಗಿ ನಿರ್ವಹಣೆ ಮಾಡುತ್ತೇನೆ. ಎಲ್ಲಾ ಕಾರ್ಯಕರ್ತರನ್ನು ವಿಶ್ವಾಸಕ್ಕೆ ಪಡೆದುಕೊಂಡು, ಕಾರ್ಯಕರ್ತರನ್ನು ಹಾಗೂ ಮತದಾರರನ್ನು ತಲುಪುವ ಕೆಲಸ ಮಾಡಬೇಕಾಗಿದೆ
-ಕ್ಯಾ.ಬ್ರಿಜೇಶ್ ಚೌಟ, ಅಭ್ಯರ್ಥಿ

LEAVE A REPLY

Please enter your comment!
Please enter your name here