ಭವಿಷ್ಯದ ಭಾರತಕ್ಕೆ ಮೋದಿ ಮತ್ತೊಮ್ಮೆ ಅವಶ್ಯಕ – ಚಕ್ರವರ್ತಿ ಸೂಲಿಬೆಲೆ
ಭಾರತ ಜಗತ್ತಿನ 5ನೇ ಆರ್ಥಿಕ ದೇಶವಾಗಿ ಹೊರ ಹೊಮ್ಮಿದೆ
ನರೇಂದ್ರ ಮೋದಿಯವರ ಮೇಲೆ ಒಂದೇ ಒಂದು ಭ್ರಷ್ಟಾಚಾರವಿರಲ್ಲ
ಪುತ್ತೂರು: ಹಿಂದುಳಿದ ದೇಶವೆಂದು ಹಿಯ್ಯಾಳಿಸುತ್ತಿರುವ ಜಗತ್ತಿನ ಎಲ್ಲಾ ರಾಷ್ಟ್ರಗಳಿಗೆ ವಿಶ್ವಗುರುವಾಗಿ ಹೊರ ಹೊಮ್ಮುತ್ತಿರುವ ಭಾರತದ ಭವ್ಯ ಭವಿಷ್ಯಕ್ಕೆ ಮತ್ತೆ ಮೋದಿ ಅವಶ್ಯಕವಾಗಿದ್ದಾರೆ ಎಂದು ಚಿಂತಕ ಸೂಲಿಬೆಲೆ ಚಕ್ರವರ್ತಿ ಅಭಿಪ್ರಾಯಪಟ್ಟರು.
ನಮೋ ಬ್ರಿಗೇಡ್ ಪುತ್ತೂರು ತಾಲೂಕು ಘಟಕದ ವತಿಯಿಂದ ಪುತ್ತೂರು ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಬಳಿ ಮಾ.14ರಂದು ಸಂಜೆ ಆಯೋಜಿಸಿದ್ದ ನಮೋ ಭಾರತ’ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿಶ್ವದ ಎಲ್ಲಾ ಶ್ರೀಮಂತ ರಾಷ್ಟ್ರಗಳಿಗೆ ಕೊರೋನಾ ಲಸಿಕೆ ನೀಡಿ ಅವರ ಪ್ರಾಣ ಉಳಿಸಿದ ಹೆಮ್ಮೆ ಭಾರತಕ್ಕೆ ತಂದು ಕೊಟ್ಟಿದ್ದು ಮೋದಿ. ಕೆಲವರು ಭಾರತೀಯರಿಗೆ ಪುಕ್ಕಟೆ ಲಸಿಕೆ ನೀಡುತ್ತಿರುವುದು ಸಹಿಸದೆ ವಿದೇಶಿ ಲಸಿಕೆಯೇ ಸುರಕ್ಷಿತ ಎಂದು ಪ್ರಚಾರ ಮಾಡಿದರು. ಆದರೆ ವಿದೇಶಿ ಲಸಿಕೆಯ ಆವಾಂತರ ಏನಾಗಿದೆ ಎಂದು ತಿಳಿದು ಬಂದಿದೆ ಎಂದರು. ಸ್ವಾತಂತ್ರ್ಯದ ನಂತರ ಬಂದ ಎಲ್ಲಾ ಸರ್ಕಾರಗಳು ಮಾಡದ ಕೆಲಸಗಳನ್ನು ಕೇವಲ 10 ವರ್ಷಗಳಲ್ಲಿ ಮಾಡಿ ದೇಶವನ್ನು ಜಗತ್ತಿಗೆ ಗುರುತಿಸುವಂತೆ ಮಾಡಿರುವ ಶ್ರೇಯ ಅವರಿಗೆ ಸಲ್ಲುತ್ತದೆ. ಹೀಗಾಗಿ ಭವ್ಯ ಭಾರತದ ಭವಿಷ್ಯಕ್ಕೆ ಮತ್ತೆ ನರೇಂದ್ರ ಮೋದಿ ಅತ್ಯವಶ್ಯಕವಾಗಿದ್ದಾರೆ ಎಂದು ಹೇಳಿದ ಅವರು ಈ ದೇಶದ ಅನೇಕ ಹೆಸರಾಂತ ನಾಯಕರು ಜಾತಿ ಹೆಸರು ಹೇಳಿಕೊಂಡು, ಅವರ ತಂದೆ, ತಾಯಿ, ಸಂಬಂಧಿಗಳ, ಗುತ್ತಿಗೆದಾರರ ಹೆಸರು ಬಳಸಿಕೊಂಡು ರಾಜಕೀಯಕ್ಕೆ ಬಂದಿದ್ದಾರೆ. ಆದರೆ ನರೇಂದ್ರ ಮೋದಿ ಯಾರ ಹೆಸರೂ ಹೇಳಿಕೊಂಡು ಅಧಿಕಾರಕ್ಕೆ ಬಂದಿಲ್ಲ. ಶ್ರೀರಾಮಂದಿರವನ್ನು 500 ವರ್ಷಗಳಿಂದ ಪಡೆಯುವ ಸಾಮಾರ್ಥ್ಯ ಯಾರಿಗೂ ಇರಲಿಲ್ಲ. ನರೇಂದ್ರ ಮೋದಿವಯರಲ್ಲಿ ಮಾತ್ರ ಸಾಧ್ಯವಾಯಿತು. ಹಾಗಾಗಿ ೫೦೦ ವರ್ಷಗಳಲ್ಲಿ ನರೇಂದ್ರ ಮೋದಿಯಂತಹ ಪ್ರಧಾನಿಯಾಗಲಿ ರಾಜನಾಗಲಿ ಮತ್ತೊಬ್ಬ ಇರಲಿಲ್ಲ ಎಂದರು.
ಭಾರತ ಜಗತ್ತಿನ 5ನೇ ಆರ್ಥಿಕ ದೇಶವಾಗಿ ಹೊರ ಹೊಮ್ಮಿದೆ:
ಕೇಂದ್ರ ಸರ್ಕಾರ ಕೇವಲ ಮಂದಿರಗಳನ್ನು ನಿರ್ಮಾಣ ಮಾಡುತ್ತಿದೆ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ. ಆದರೆ ನರೇಂದ್ರ ಮೋದಿ ಸರ್ಕಾರ ಮಂದಿರ ನಿರ್ಮಾಣಕ್ಕೂ ಮುನ್ನ ಭಾರತ ದೇಶ ಜಗತ್ತಿನ 5ನೇ ಆರ್ಥಿಕ ದೇಶವಾಗಿ ಹೊರ ಹೊಮ್ಮಿದೆ. ಈ ಹಿಂದಿನ ಎಲ್ಲ ಪ್ರಧಾನಿಗಳು ಸೇರಿ 74 ವಿಮಾನ ನಿಲ್ದಾಣ ನಿರ್ಮಾಣ ಮಾಡಿದ್ದರೆ. 10 ವರ್ಷದಲ್ಲಿ ಮೋದಿ 78 ವಿಮಾನ ನಿಲ್ದಾಣ ನಿರ್ಮಿಸಿದ್ದಾರೆ. ದೇಶದ ಉಳಿದೆಲ್ಲ ಪ್ರಧಾನ ಮಂತ್ರಿಗಳು ಶೇ.40 ಹಳ್ಳಿಗಳಿಗೆ ವಿದ್ಯುತ್ ನೀಡಿದರೆ, ಮೋದಿ ಶೇ.55 ಹಳ್ಳಿಗಳಿಗೆ ವಿದ್ಯುತ್ ನೀಡಿದ್ದಾರೆ. ಶೇ.100 ಹಳ್ಳಿಗಳಿಗೆ ಸೋಲಾರ್ ಕೊಡಿಸುವ ಕೆಲಸ ಮಾಡಿದರು. ಈ ಹಿಂದೆ 100 ಏಕಲವ್ಯ ಮಾದರಿ ವಸತಿ ಶಾಲೆಗಳನ್ನು ಮಾಡಿದ್ದರೆ ಮೋದಿ 600 ಮಾಡಿದ್ದಾರೆ. ರಸ್ತೆ ನಿರ್ಮಾಣ ಸೇರಿದಂತೆ ಅನೇಕ ಜನಪರ ಕಾರ್ಯಗಳನ್ನು ಮಾಡಿದ್ದಾರೆ. ಇವೆಲ್ಲವೂ ದೇವಸ್ಥಾನ ನಿರ್ಮಾಣಕ್ಕೂ ಮುನ್ನವೇ ಮಾಡಿದ ಅಭಿವೃದ್ಧಿ ಕಾರ್ಯಗಳಾಗಿವೆ ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದರು.
ನರೇಂದ್ರ ಮೋದಿಯವರ ಮೇಲೆ ಒಂದೇ ಒಂದು ಭ್ರಷ್ಟಾಚಾರವಿರಲ್ಲ
ಕಳೆದ 22 ವರ್ಷಗಳ ಅಧಿಕಾರದ ವರ್ಷಗಳಲ್ಲಿ ನರೇಂದ್ರ ಮೋದಿವಯರ ಮೇಲೆ ಒಂದೇ ಒಂದು ಭ್ರಷ್ಟಾಚಾರದ ಅರೋಪಗಳಿಲ್ಲ. 12 ವರ್ಷ ಮುಖ್ಯಮಂತ್ರಿ, 10 ವರ್ಷ ಪ್ರಧಾನ ಮಂತ್ರಿಯಾಗಿರುವ ನರೇಂದ್ರ ಮೋದಿಯವ ಮೇಲೆ ಒಂದು ಭ್ರಷ್ಟಾಚಾರದ ಆರೋಪ ಮಾಡಿ ಜೀರ್ಣೀಸಿಕೊಳ್ಳಲು ಯಾರಿಗೂ ಆಗಿಲ್ಲ. ಯಾರದಾರರು ಭ್ರಷ್ಟಾಚಾರ ಆಗಿದೆ ಎಂದು ಗೊತ್ತಾದ ತಕ್ಷಣ ಕ್ಯಾಬಿನೆಟ್‌ನಿಂದ ಕಿತ್ತು ಬಿಸಾಡುತ್ತಿದ್ದರು. ಈ ತರದ ಪ್ರಧಾನಿ ಯಾರೂ ಇರಲಿಲ್ಲ. ಸಣ್ಣ ಅವಧಿಯಲ್ಲಿ ಭ್ರಷ್ಟಾಚಾರ ಇಲ್ಲದೆ ಆಡಳಿತ ಮಾಡಿದವರು ಇದ್ದಾರೆ. ಆದರೆ ಸುಧೀರ್ಘವಾಗಿ ಭ್ರಷ್ಟಾಚಾರ ರಹಿತ ಆಡಳಿತ ಮಾಡಿದವರು ಮೋದಿ ಒಬ್ಬರೆ. ಕಾಂಗ್ರೆಸ್ ಸರಕಾರ ಇದ್ದಾಗ ಇಂಗ್ಲೀಷ್ ಪದಗಳ ಎಲ್ಲಾ ಅಕ್ಷರಗಳಲ್ಲೂ ಭ್ರಷ್ಟಾಚಾರದ ಹೆಸರನ್ನು ಉಲ್ಲೇಖಿಸಬಹುದಿತ್ತು. ಅದೆ ರೀತಿ ಮೋದಿ ಪರಿವಾರ ಎಲ್ಲೂ ಗುರುತಿಸಿಕೊಳ್ಳುತ್ತಿಲ್ಲ. ಆದರೆ ನಮ್ಮ ಲೋಕಲ್ ಎಮ್‌ಎಲ್‌ಎ ಆಗಿದ್ದರೆ ಗುತ್ತಿಗೆ ಪರಿವಾರದವರೆ ಜಾಸ್ತಿ ಇರುತ್ತಿದ್ದರು ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದರು.
ಮೋದಿಯವರು ಈ ಭಾರಿಯೂ ರಾಷ್ಟ್ರಗದ್ದುಗೆಗೆ ಏರಬೇಕು:
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಅವರು ಹನುಮಗಿರಿ ಕ್ಷೇತ್ರದ ಧರ್ಮದರ್ಶಿ ನನ್ಯ ಅಚ್ಚುತ ಮೂಡೆತ್ತಾಯ ಅವರು ಮಾತನಾಡಿ 2014 ರ ಹಿಂದೆ ನಮ್ಮ ದೇಶ ಹೇಗಿತ್ತು ಇವತ್ತು ಹೇಗಿದೆ ಎಂಬುದನ್ನು ನಾವು ಅರ್ಥೈಸಿಕೊಂಡಾಗ ದೇಶವನ್ನು ಪರಮ ವೈಭವಕ್ಕೆ ಕೊಂಡೊಯ್ಯುವ ಕಾರ್ಯವನ್ನು ಮೋದಿಯವರು ಮಾಡಿದರು. ಮೋದಿ ಪ್ರಧಾನಿಯಾದ
ಪ್ರಪಂಚದಲ್ಲಿ ದೇಶಕ್ಕೆ ಗೌರವ ಬರುವಲ್ಲಿ ಕಾರ್ಯಕರ್ತರ ಶ್ರಮವಿದೆ. ಇಂತಹ ಸಂದರ್ಭದಲ್ಲಿ ಮುಂದಿನ ಭಾರಿ ಮೋದಿಯವರನ್ನು 400 ಸೀಟ್ ಗೆಲ್ಲಿಸುವ ಮೂಲಕ ರಾಷ್ಟ್ರಗದ್ದುಗೆಗೆ ಏರಬೇಕು ಎಂದರು.
ರಾಷ್ಟ್ರೀಯ ಸೇವಿಕಾ ಸಮಿತಿ ಗಾಯತ್ರಿ ಪೈ ಮತ್ತು ಸಚಿನ್ ಶೆಣೈ ಅತಿಥಿಗಳನ್ನು ಗೌರವಿಸಿದರು. ತನ್ವಿ ಪ್ರಾರ್ಥಿಸಿದರು. ರೆಡಿಯೋ ಪಾಂಚಜನ್ಯದ ತೇಜಸ್ವಿನಿ ಕಾರ್ಯಕ್ರಮ ನಿರೂಪಿಸಿದರು. ನಮೋ ಬ್ರಿಗೇಡ್ ತಾಲೂಕು ಸಂಚಾಲಕ ಶಶಿಧರ್ ನಾಯಕ್ ಮತ್ತು ನಾಗೇಶ್ ಟಿ ಎಸ್ ವಿವಿಧಕಾರ್ಯಕ್ರಮ ನಿರ್ವಹಿಸಿದರು. ಸಭೆಯಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು, ಲೋಕಸಭಾ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ, ಗೋಪಾಲಕೃಷ್ಣ ಹೇರಳೆ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.
ಆನಂದ ಆಶ್ರಮದಿಂದ ಜಿ ಎಸ್ ಬಿ ಅಭಿವೃದ್ದಿ ಸಭಾಕ್ಕೆ ಆಂಬುಲೆನ್ಸ್ ಕೊಡುಗೆ:
ಆನಂದ ಆಶ್ರಮದಿಂದ ಜಿಎಸ್‌ಬಿ ಅಭಿವೃದ್ದಿ ಸಭಾಕ್ಕೆ ರೋಗಿಗಳ ಸೇವೆಗಾಗಿ ಆಂಬುಲೆನ್ಸ್ ಅನ್ನು ಆನಂದ ಆಶ್ರಮದ ಅಧ್ಯಕ್ಷೆ ಡಾ. ಗೌರಿ ಪೈ ಅವರು ಚಕ್ರವರ್ತಿ ಸೂಲಿಬೆಲೆಯವರ ಮೂಲಕ ಜಿಎಸ್‌ಬಿ ಸಂಘಟಕರಿಗೆ ಹಸ್ತಾಂತರಿಸಿದರು. ಈ ಸಂದರ್ಭ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಡಾ. ಅಶೋಕ್, ನನ್ಯ ಅಚ್ಚುತ ಮೂಡೆತ್ತಾಯ ನಗರಸಭೆ ಸದಸ್ಯ ಭಾಮಿ ಅಶೋಕ್ ಶೆಣೈ ಸಹಿತ ನಾಗೇಂದ್ರ ಬಾಳಿಗ, ಕಿರಣ್‌ಶಂಕರ್ ಮಲ್ಯ, ಸಚಿನ್ ಶೆಣೈ, ಸದಾಶಿವ ಪೈ ಉಪಸ್ಥಿತರಿದ್ದರು.
ಕೋಪವನ್ನು ಪಕ್ಕಕ್ಕೆ ಇಡಿ
ನನ್ನ ಅಭ್ಯರ್ಥಿ ನರೇಂದ್ರ ಮೋದಿಯವರ ಕೈಯಲ್ಲಿ ಒಂದು ಕಮಲ ಕೊಡುತ್ತೇವೆ ಎಂಬ ಸಂಕಲ್ಪ ಮಾಡಬೇಕು. ಮೋದಿಯವರ ಸಾವಿರ ವರ್ಷದ ಭಾರತದ ಪರಿಕಲ್ಪನೆಗಾಗಿ ನಾವು ಮೋದಿಯನ್ನು ಆಯ್ಕೆ ಮಾಡಬೇಕು. ಯಾಕೆಂದರೆ ಮೋದಿ ಚೋಳಿಗೆಯಲ್ಲಿದ್ದ ವಜ್ರದಂತೆ ಅದನ್ನು ನದಿಗೆ ಎಸೆಯದೆ ಚೋಪಾನಾವಾಗಿ ಇಟ್ಟುಕೊಳ್ಳಬೇಕು. ದೇಶದ ವಿಚಾರ ಬಂದಾಗ ನಮ್ಮ ಒಳಗಿನ ಎಲ್ಲಾ ದ್ವೇಷಮಯ ವಾತಾವರಣ ಶಾಂತಗೊಳಿಸಬೇಕು. ವೈಯಕ್ತಿಕವಾದ ಎಲ್ಲಾ ಕಿತ್ತಾಟ ಇರಲಿ. ಆದರೆ ದೇಶದ ವಿಚಾರ ಬಂದಾಗ ನೋ ಕಾಂಪ್ರವೈಸ್ ಇಲ್ಲ. ಇನ್ನು ಮುಂದಿನ ಒಂದುವರೆ ತಿಂಗಳ ಕಾಲ ಭಾರತ ಮುಖ್ಯ. ಪುತ್ತೂರಿಗೆ ವಿಶೇಷವಾಗಿ ಹೇಳಬಯಸುತ್ತೇನೆ. ಯಾಕೆಂದರೆ ಇಡಿ ರಾಜ್ಯ ಈ ಗಲಾಟೆಯನ್ನು ಕಂಡಿದೆ. ಯಾರೆ ಇರಲಿ. ಎಲ್ಲಾ ಕೋಪವನ್ನು ಆಕ್ರೋಶವನ್ನು ಪಕ್ಕಕ್ಕೆ ಇಟ್ಟು ಒಂದೇ ಒಂದು ಕಾರಣಕ್ಕೆ. ಅದು ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕಾಗಿದೆ. ಈ ದೇಶವನ್ನು ಬಲಾಡ್ಯವಾಗಿ ಕಟ್ಟಬೇಕು.
ಚಕ್ರವರ್ತಿ ಸೂಲಿಬೆಲೆ