ಗೌರವಾಧ್ಯಕ್ಷರಾಗಿ ಹೇಮನಾಥ ಶೆಟ್ಟಿ ಕಾವು, ಅಧ್ಯಕ್ಷರಾಗಿ ಸಿ.ಹೆಚ್. ಅಬ್ದುಲ್ ಅಜೀಜ್.
ಪುತ್ತೂರು:ಶತಮಾನ ಕಂಡ ಕಾವು ಮಾದರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಹಿರಿಯ ವಿದ್ಯಾರ್ಥಿ ಸಂಘ ರಚನೆಯನ್ನು ವಿದ್ಯಾಸಂಸ್ಥೆಯನ್ನು ದತ್ತು ಸ್ವೀಕರಿಸಿರುವ ಹೇಮನಾಥ ಶೆಟ್ಟಿ ಕಾವು ಇವರ ಅಧ್ಯಕ್ಷತೆಯಲ್ಲಿ ಮಾ.9ರಂದು ನಡೆಸಲಾಯಿತು.
ಹಿರಿಯ ವಿದ್ಯಾರ್ಥಿಗಳ ಸಮಾಗಮ ಕಾರ್ಯಕ್ರಮದಲ್ಲಿ ಸುಮಾರು ನೂರಕ್ಕೂ ಮಿಕ್ಕಿ ಹಿರಿಯ ವಿದ್ಯಾರ್ಥಿಗಳ ಉಪಸ್ಥಿತಿಯಲ್ಲಿ ನೂತನ ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯಕಾರಿಣಿ ಸಮಿತಿಯನ್ನು ರಚಿಸಲಾಯಿತು.
ಗೌರವಾಧ್ಯಕ್ಷರಾಗಿ ಹೇಮನಾಥ ಶೆಟ್ಟಿ ಕಾವು, ಅಧ್ಯಕ್ಷರಾಗಿ ಅಬ್ದುಲ್ ಅಜೀಜ್ ಸಿ.ಹೆಚ್ ಇವರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರುಗಳಾಗಿ ಹರೀಶ್ ಹೊಸಮನೆ ಮತ್ತು ಹರೀಶ್ ಕುಂಜತ್ತಾಯ, ಗೌರವ ಸಲಹೆಗಾರರಾಗಿ ಲೋಕೇಶ್ ಚಾಕೋಟೆ, ಖಾಯಂ ಸಮಿತಿ ಸದಸ್ಯರಾಗಿ ಗ್ರಾಮ ಪಂಚಾಯತ್ ಸದಸ್ಯರುಗಳಾದ ದಿವ್ಯನಾಥ ಶೆಟ್ಟಿ ಕಾವು, ಮೋನಪ್ಪ ಪೂಜಾರಿ ಕೆರೆಮಾರು, ಅಬ್ದುಲ್ ರಹಿಮಾನ್ ಕಾವು, ವಿಜಿತ್ ಕೆರೆಮಾರು ಇವರನ್ನು ಆಯ್ಕೆ ಮಾಡಿದರು.
ಪ್ರಧಾನ ಕಾರ್ಯದರ್ಶಿಯಾಗಿ ಪ್ರಭಾರ ಮುಖ್ಯ ಗುರು ಪ್ರತಿಮಾ ಎಸ್, ಕಾರ್ಯದರ್ಶಿಗಳಾಗಿ ಪ್ರಸಾದ್ ಕೆರೆಮಾರು ಹಾಗೂ ಚಿದಾನಂದ ಆಚಾರ್ಯ ಇವರು ಆಯ್ಕೆಯಾದರು. ಸಂಘಟನಾ ಕಾರ್ಯದರ್ಶಿಗಳಾಗಿ ರವಿಕಿರಣ್ ಕಾವು, ಹೇಮನಾಥ ಕೆರೆಮಾರು ಹಾಗೂ ಮಜೀದ್ ಇವರನ್ನು ಆಯ್ಕೆ ಮಾಡಲಾಯಿತು. ನೂತನ ಹಿರಿಯ ವಿದ್ಯಾರ್ಥಿ ಸಂಘದ ಸದಸ್ಯರಾಗಿ ಶಶಿಕಲಾ ಚೌಟ, ನವೀನ, ಕವಿತಾ, ತಿಮ್ಮಯ್ಯ ಉಜ್ರುಗುಳಿ, ಹರೀಶ್ ಮಾಡನ್ನೂರು, ಉಸ್ಮಾನ್, ಹರಿಪ್ರಸಾದ್ ರೈ, ಮೊಹಮ್ಮದ್ ಕುಂಞ, ಭರತ್ ಉಜ್ರುಗುಳಿ, ಮಹಮ್ಮದ್ ಹಾಗೂ ಚಂದ್ರಾವತಿ, ಕಿರಣ್ ಮಾಣಿಯಡ್ಕ ಇವರನ್ನು ಆಯ್ಕೆ ಮಾಡಲಾಯಿತು.
ನಿಕಟಪೂರ್ವ ಜಿ.ಪಂ. ಸದಸ್ಯರಾದ ಅನಿತಾ ಹೇಮನಾಥ ಶೆಟ್ಟಿ,ಎಸ್.ಡಿ.ಎಮ್.ಸಿ ಅಧ್ಯಕ್ಷ ಯತೀಶ್ ಪೂಜಾರಿ,ಎಸ್.ಡಿ.ಎಮ್.ಸಿ ಪದಾಧಿಕಾರಿಗಳು, ಶಿಕ್ಷಕರಾದ ಪ್ರಮೀಳಾ ಹೆಚ್.ಆರ್, ಅನಿತಾ ಡಿಸೋಜಾ, ವಸಂತಿ, ಶಮೀಮಾ, ಮಲ್ಲಿಕಾ, ಸಂತೋಷ್, ಅತಿಥಿ ಶಿಕ್ಷಕರಾದ ದೀಪಿಕಾ ಹಾಗೂ ವನಿತಾ ಉಪಸ್ಥಿತರಿದ್ದರು. ಶಿಕ್ಷಕರಾದ ಭಾಸ್ಕರ್ ಎನ್. ಕಾರ್ಯಕ್ರಮವನ್ನು ನಿರ್ವಹಿಸಿದರು.