





ಉಪ್ಪಿನಂಗಡಿ: ದೇಶದ ಪವಿತ್ರಾ ತೀರ್ಥ ಕ್ಷೇತ್ರಗಳಲ್ಲಿ ಒಂದಾಗಿರುವ ಕೇದಾರನಾಥ್ ಕ್ಷೇತ್ರದ ಪ್ರಧಾನ ಅರ್ಚಕ ಶಿವಶಂಕರ್ ಲಿಂಗ್ ಜೀಯವರು ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಾಲಯ, ಲಕ್ಷ್ಮೀ ವೆಂಕಟರಮಣ ದೇವಾಲಯ , ಹನುಮಾನ್ ದೇವಾಲಯಕ್ಕೆ ಭೇಟಿ ನೀಡಿ, ವಿಶೇಷ ಪೂಜೆಯನ್ನು ಸಲ್ಲಿಸಿದರು.



ಆಧ್ಯಾತ್ಮಿಕ ಕ್ಷೇತ್ರದ ಸಾಧಕ ಉಪ್ಪಿನಂಗಡಿಯ ಕೃಷ್ಣ ಶೆಣೈಯವರ ನೇತೃತ್ವದ ಚಾರ್ ಧಾಮ್ ಯಾತ್ರಾ ಸಂಘದ ಸದಸ್ಯರು ಶಿವಶಂಕರ್ ಲಿಂಗ್ ಜೀ ಯವರನ್ನು ಸ್ವಾಗತಿಸಿ, ಸಂಘದ ಹಾಗೂ ಉಪ್ಪಿನಂಗಡಿ ನಾಗರಿಕರ ವತಿಯಿಂದ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಹಾಗೂ ಯಾತ್ರಾ ಸಂಘದ ಆಶ್ರಯದಲ್ಲಿ ಅವರಿಗೆ ಜಿಲ್ಲೆಯ ಪುಣ್ಯ ಕ್ಷೇತ್ರಗಳಾದ ಕುಕ್ಕೆ ಸುಬ್ರಹ್ಮಣ್ಯ , ಧರ್ಮಸ್ಥಳ, ಸೌತಡ್ಕ ಕ್ಷೇತ್ರಗಳಿಗೂ ಯಾತ್ರೆ ಕೈಗೊಳ್ಳಲಾಯಿತು.
ಗೌರವ ಸ್ವೀಕರಿಸಿ ಮಾತನಾಡಿದ ಶಿವಶಂಕರ್ ಲಿಂಗ್ ಜೀಯವರು, ಈ ಭಾಗದ ಭಕ್ತಾದಿಗಳನ್ನು ವರ್ಷದ ಹಲವಾರು ಬಾರಿ ಉತ್ತರ ಭಾರತದ ಪುಣ್ಯ ಕ್ಷೇತ್ರಗಳಿಗೆ ಕರೆತರುವ ಚಾರ್ ಧಾಮ್ ಯಾತ್ರಾ ಸಂಘದ ಕೃಷ್ಣ ಶೆಣೈಯವರ ಕಾರ್ಯ ಅನುಪಮವಾದದ್ದು. ದೇವರೊಂದಿಗೆ ಭಕ್ತಭಾವದೊಂದಿಗೆ ಸಂಬಂಧ ಬೆಸೆದರೆ ಎಲ್ಲವೂ ಸಾಧ್ಯ ಎನ್ನುವುದನ್ನು ಕೃಷ್ಣ ಶೆಣೈ ಸಾಧಿಸಿ ತೋರಿಸಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಶ್ರೀ ಲಕ್ಷ್ಮೀವೆಂಕಟರಮಣ ದೇವಾಲಯದ ಆಡಳಿತ ಮೊಕ್ತೇಸರ ಬಿ. ಗಣೇಶ್ ಶೆಣೈ, ಸದಸ್ಯರಾದ ಯು. ನಾಗರಾಜ ಭಟ್, ಅನಂತರಾಯ ಕಿಣಿ, ದೇವಿದಾಸ್ ಭಟ್, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ಸಿಬ್ಬಂದಿ ಕೃಷ್ಣಪ್ರಸಾದ್ ಬಡಿಲ, ಪದ್ಮನಾಭ ಪ್ರಮುಖರಾದ ಗಿರೀಶ್, ಶ್ರೀನಿಧಿ ಉಪಾಧ್ಯಾಯ, ವಿಜೇತ್ ಕುಮಾರ್, ಕುಕ್ಕಪ್ಪ ಗೌಡ ನೇಜಿಕಾರು, ಸಚಿನ್ ಬಿಡೆ, ವಿಷ್ಣು ಪಟವರ್ಧನ್ ಮುಂಡಾಜೆ, ಯು. ರಾಜೇಶ್ ಪೈ, ಮಹೇಶ್ ನಟ್ಟಿಬೈಲು, ಚಂದ್ರಹಾಸ ಹೆಗ್ಡೆ, ಕರಾಯ ಗಣೇಶ್ ನಾಯಕ್, ಹೊನ್ನಪ್ಪ ಮೊದಲಾದವರು ಭಾಗವಹಿಸಿದ್ದರು.














