ಉಪ್ಪಿನಂಗಡಿ: ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ವರ್ಷಾವಧಿ ಜಾತೋತ್ಸವದ ಅಂತಿಮ ಕಾರ್ಯಕ್ರಮವಾದ ದೊಂಪದಬಲಿ ನೇಮೋತ್ಸವವು ಮಂಗಳವಾರ ರಾತ್ರಿ ದೇವಳದ ಜಾತ್ರಾ ಗದ್ದೆಯಲ್ಲಿ ನಡೆಯಿತು.
ಕದಿಕ್ಕಾರು ಬೀಡಿನಿಂದ ದೈವದ ಭಂಡಾರವನ್ನು ಪಲ್ಲಕಿಯಲ್ಲಿ ದೇವಳಕ್ಕೆ ತಂದು ದೊಂಪದ ಬಲಿಯ ವಿಧಿವಿಧಾನಗಳು ನಡೆದವು. ದೇವಳದ ಮಖೆ ಜಾತ್ರೆಯಂದು ಅಳವಡಿಸಲಾಗುವ ಬ್ರಹ್ಮರಥದ ಕಲಶ (ಮುಗುಳಿ) ವನ್ನು ಕಲ್ಕುಡ ದೈವದ ಸೂಚನೆ ಲಭಿಸಿದ ಬಳಿಕವೇ ತೆರವುಗೊಳಿಸುವುದು ವಾಡಿಕೆ. ಅಂತೆಯೇ ಬ್ರಹ್ಮರಥದ ಕಲಶವನ್ನು ತೆಗೆಯಲು ದೈವದ ನಿರ್ದೇಶನ ದೊರಕಿತು. ದೊಂಪದ ಬಲಿಯಲ್ಲಿ ಪರಿವಾರ ದೈವಗಳಿಗೂ ಸೇವೆ ಸಲ್ಲಿಸಲಾಯಿತು.
ಈ ವೇಳೆ ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೆ. ರಾಧಾಕೃಷ್ಣ ನಾೖಕ್ , ಸದಸ್ಯರಾದ ಎಂ. ವೆಂಕಪ್ಪ ಪೂಜಾರಿ ಮರುವೇಲು, ಜಿ. ಅರ್ತಿಲ ಕೃಷ್ಣ ರಾವ್, ದೇವಿದಾಸ ರೈ ಬೆಳ್ಳಿಪ್ಪಾಡಿ, ಗೋಪಾಲಕೃಷ್ಣ ರೈ ಬೆಳ್ಳಿಪ್ಪಾಡಿ, ಸೋಮನಾಥ, ಹರೀಶ್ ಉಪಾಧ್ಯಾಯ, ಡಾ. ರಮ್ಯ ರಾಜಾರಾಮ್, ಅನಿತಾ ಕೇಶವ ಗೌಡ, ಪ್ರಮುಖರಾದ ಡಾ. ರಾಜಾರಾಮ ಕೆ.ಬಿ., ರೂಪೇಶ್ ರೈ ಅಲಿಮಾರ್, ಕರುಣಾಕರ ಸುವರ್ಣ, ಕೈಲಾರ್ ರಾಜಗೋಪಾಲ ಭಟ್, ಪ್ರವೀಣ್ ಕುಮಾರ್ ಕದಿಕ್ಕಾರು ಬೀಡು, ಬಾಲಕೃಷ್ಣ ಶೆಟ್ಟಿ ಕದಿಕ್ಕಾರು, ಜಗದೀಶ್ ಶೆಟ್ಟಿ, ಕಂಗ್ವೆ ವಿಶ್ವನಾಥ ಶೆಟ್ಟಿ, ಜಗದೀಶ್ ಶೆಟ್ಟಿ ಕದಿಕ್ಕಾರು, ಹರಿರಾಮಚಂದ್ರ, ಉದಯ ಅತ್ರಮಜಲು, ದೇವಳದ ವ್ಯವಸ್ಥಾಪಕ ವೆಂಕಟೇಶ್ ರಾವ್, ದೇವಳದ ಅರ್ಚಕರು, ಸಿಬ್ಬಂದಿ ವರ್ಗ ಸೇರಿದಂತೆ ಹಲವಾರು ಮಂದಿ ಭಾಗವಹಿಸಿದ್ದರು.