ಪೆರ್ನೆ: ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ಮದ್ಯದ ಬಾಟ್ಲಿ ಪೊಲೀಸರ ವಶ

0

ಉಪ್ಪಿನಂಗಡಿ: ಪರವಾನಿಗೆ ಪಡೆದುಕೊಳ್ಳದೇ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ಮದ್ಯದ ಬಾಟ್ಲಿಗಳನ್ನು ಪೊಲೀಸರು ವಶಪಡಿಸಿಕೊಂಡ ಘಟನೆ ಪೆರ್ನೆ ಗ್ರಾಮದ ಕಾರ್ಲ ಎಂಬಲ್ಲಿ ಮಾ.24ರಂದು ನಡೆದಿದೆ.
ಪೆರ್ನೆ ಗ್ರಾಮದ ಕಾರ್ಲ ಎಂಬಲ್ಲಿ ಪಿಯಾದ್ ಪಿಂಟೋ ಎಂಬವರು ಮನೆಯಲ್ಲಿ ಯಾವುದೇ ಪರವಾನಿಗೆ ಪಡೆಯದೇ ಅಕ್ರಮವಾಗಿ ಮದ್ಯದ ಬಾಟ್ಲಿಗಳನ್ನು ಶೇಖರಿಸಿಟ್ಟು ಮಾರಾಟ ಮಾಡಲು ಪ್ರಯತ್ನಿಸುತ್ತಿರುವುದಾಗಿ ದೊರೆತ ಮಾಹಿತಿ ಮೇರೆಗೆ ಉಪ್ಪಿನಂಗಡಿ ಪಿಎಸ್‌ಐ ಹಾಗೂ ಸಿಬ್ಬಂದಿಗಳು ದಾಳಿ ನಡೆಸಿ ಪರಿಶೀಲನೆ ಮಾಡಿದ ವೇಳೆ ಮನೆಯ ಡೈನಿಂಗ್ ರೂಮ್‌ನ ಮೇಲಿನ ಮಹಡಿಗೆ ಹೋಗುವ ಮೆಟ್ಟಿಲುಗಳ ಕೆಳಗೆ ಅಡಿಭಾಗದಲ್ಲಿ ಮದ್ಯ ತುಂಬಿದ ಬಾಕ್ಸ್ ಮತ್ತು ಬಾಟ್ಲಿಗಳು ಪತ್ತೆಯಾಗಿವೆ. ಪಿಯಾದ್ ಪಿಂಟೋ ಅವರು ಯಾವುದೇ ಪರವಾನಿಗೆ ಪಡೆಯದೇ ಮದ್ಯದ ಬಾಟ್ಲಿ ಸಂಗ್ರಹಿಸಿಟ್ಟಿರುವುದನ್ನು ದೃಢಪಡಿಸಿಕೊಂಡ ಪೊಲೀಸರು ಅ ವುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಒಟ್ಟು 79.410 ಲೀಟರ್ ಮದ್ಯವಿದ್ದು, ಇವುಗಳ ಮೌಲ್ಯ 37,582 ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣಾ ಅ.ಕ್ರ: 37/2024, ಕಲಂ: 32, 34 ಕರ್ನಾಟಕ ಅಬಕಾರಿ ಕಾಯ್ದೆಯಂತೆ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here