ಬೆಳಂದೂರು: ಬಿಜೆಪಿ ಸಂಸ್ಥಾಪನಾ ದಿನಾಚರಣೆ

0

ಕಾಣಿಯೂರು: ಕಡಬ ತಾಲೂಕು ಸವಣೂರು ಮಹಾಶಕ್ತಿ ಕೇಂದ್ರದ ಬೆಳಂದೂರು ಗ್ರಾಮದ ಬೂತ್ ಸಂಖ್ಯೆ -73 ಇದರ ವತಿಯಿಂದ ಭಾರತೀಯ ಜನತಾ ಪಾರ್ಟಿಯ ಸ್ಥಾಪನಾ ದಿನಾಚರಣೆಯನ್ನು ಬೂತ್ ಅಧ್ಯಕ್ಷ ಚಂಪಾ ಕುಶಾಲಪ್ಪ ಗೌಡ ಅಬೀರ ಇವರ ಮನೆಯಲ್ಲಿ ಧ್ವಜ ಹಾರಿಸುವ ಮುಖಾಂತರ ಆಚರಿಸಲಾಯಿತು.


ಈ ಸಂದರ್ಭದಲ್ಲಿ ಲೋಕಸಭಾ ಚುನಾವಣೆಯ ಕಾರ್ಯ ಚಟುವಟಿಕೆಗಳ ಬಗ್ಗೆ ಚರ್ಚೆ ನಡೆಸಲಾಯಿತು. ಈ ಸಂಧರ್ಭದಲ್ಲಿ ಬೂತ್ ಸಮಿತಿಯ ಅಧ್ಯಕ್ಷ ಚಂಪಾ ಕುಶಾಲಪ್ಪ ಗೌಡ, ಕಾರ್ಯದರ್ಶಿ ಶೇಖರ ಗೌಡ ಮೇಗಿನ ಮನೆ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಪ್ರಮೀಳಾ ಜನಾರ್ದನ, ಬೆಳಂದೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜಯಂತ ಅಬೀರ, ಸದಸ್ಯರಾದ ಗೌರಿ ಮಾದೋಡಿ, ಕಾಣಿಯೂರು ಹಾಲು ಉತ್ಪಾದಕರ ಸಹಕಾರ ಸಂಘದ ಉಪಾಧ್ಯಕ್ಷ ಚಂದ್ರಯ್ಯ ಅಚಾರ್ಯ, ಜನಾರ್ದನ ಆಚಾರ್ಯ, ಕುಶಾಲಪ್ಪ ಗೌಡ, ಕಮಲ ಹೊಸೊಳಿಗೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here