ಉಪ್ಪಿನಂಗಡಿ: ಶಾಂತಿ-ಸಾಮರಸ್ಯದ ಸಂಕೇತವಾದ ಈದುಲ್ ಫಿತ್ರ್ ಹಬ್ಬವನ್ನು ಮುಸ್ಲಿಂ ಬಾಂಧವರು ಸಂಭ್ರಮ-ಸಡಗರದಿಂದ ಆಚರಿಸಿದರಲ್ಲದೆ, ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಉಪ್ಪಿನಂಗಡಿಯ ಮಾಲೀಕುದ್ದೀನಾರ್ ಮಸೀದಿಯಲ್ಲಿ ಖತೀಬರಾದ ಸಲಾಂ ಫೈಝಿ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯಿತು. ಬಳಿಕ ಅವರು ಈದುಲ್ ಫಿತ್ರ್ ಹಬ್ಬದ ಸಂದೇಶ ನೀಡಿದರು.
ಈ ಸಂದರ್ಭ ಮಸೀದಿಯ ಅಧ್ಯಕ್ಷ ಯೂಸುಫ್ ಎಚ್., ಕಾರ್ಯದರ್ಶಿ ಶುಕುರ್ ಹಾಜಿ, ಪದಾಧಿಕಾರಿಗಳಾದ ರವೂಫ್ ಯು.ಟಿ., ಮುಸ್ತಾಫ ಡಬಲ್ಫೋರ್, ಪ್ರಮುಖರಾದ ಇಸ್ಮಾಯೀಲ್ ತಂಙಳ್, ಶಬೀರ್ ಕೆಂಪಿ, ತೌಸೀಫ್ ಯು.ಟಿ., ಅಶ್ರಫ್ ಬಸ್ತಿಕ್ಕಾರ್, ಅಝೀಝ್ ಬಸ್ತಿಕ್ಕಾರ್, ಯೂಸುಫ್ ಪೆದಮಲೆ, ಇಬ್ರಾಹೀಂ ಆಚಿ ಕೆಂಪಿ, ಸಿದ್ದೀಕ್ ಕೆಂಪಿ, ಹಾರೂನ್ ಅಗ್ನಾಡಿ, ಇರ್ಷಾದ್ ಯು.ಟಿ., ಮುನೀರ್ ಎನ್ಮಾಡಿ ಮತ್ತಿತರರು ಉಪಸ್ಥಿತರಿದ್ದರು.