“ಕೋತಿ ಬೆಣ್ಣೆ ತಿಂದು ಬೆಕ್ಕಿನ ಮುಖಕ್ಕೆ ಒರೆಸಿದ ಹಾಗೆ” ತಮ್ಮ ಮುಖ ಉಳಿಸಿಕೊಳ್ಳಲು ಆರ್‌ ಸಿ ನಾರಾಯಣ್‌ ನನ್ನ ವಿರುದ್ಧ ದೂರು ನೀಡಿದ್ದಾರೆ-ಅಮಳ ರಾಮಚಂದ್ರ

0

ಪುತ್ತೂರು: “ಕೋತಿ ಬೆಣ್ಣೆ ತಿಂದು ಬೆಕ್ಕಿನ ಮುಖಕ್ಕೆ ಒರೆಸಿದ ಹಾಗೆ” ತಮ್ಮ ಮುಖ ಉಳಿಸಿಕೊಳ್ಳಲು ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿರುವ ಆರ್‌ ಸಿ ನಾರಾಯಣ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಅಮಳ ರಾಮಚಂದ್ರ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ‌

“ಪದ್ಮರಾಜ್ ಪರಿವಾರ” ವಾಟ್ಸ್‌ಆಪ್ ಗ್ರೂಪ್‌ ವಿವಾದಕ್ಕೆ ಸಂಬಂಧಪಟ್ಟಂತೆ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಮಳ ರಾಮಚಂದ್ರ, ನಾನು ಪದ್ಮರಾಜ್‌ ಪರಿವಾರ ವಾಟ್ಸ್‌ಆಪ್ ಗ್ರೂಪ್‌ ಸೇರುವ ಮೊದಲೇ ಆರ್‌ ಸಿ ನಾರಾಯಣ್‌ ಈ ಗ್ರೂಪ್‌ ನ ಸದಸ್ಯರಾಗಿದ್ದರು. ನಾನು ಗ್ರೂಪ್‌ ಸೇರಿದ ಮೇಲೆ ಮೂರು ದಿನಗಳ ವರೆಗೂ ಆರ್‌ ಸಿ ನಾರಾಯಣ್‌ ಈ ಗ್ರೂಪ್‌ ನಲ್ಲಿದ್ದರು. ಅನೇಕ ವರ್ಷಗಳಿಂದ ನಾನು ಅವರ ಸಂಪರ್ಕದಲ್ಲಿಲ್ಲ, ಕಾಲ್‌ ಮಾಡಿದ್ದೂ ಇಲ್ಲ, ಫೋನ್‌ ನಂಬರೂ ನನ್ನಲ್ಲಿಲ್ಲ. ಹಾಗಿದ್ದೂ ನನ್ನ ಮೇಲೆ ದೂರು ನೀಡಿದ್ದಾರೆ. ನಾನವರನ್ನು ಗ್ರೂಪ್‌ ಗೆ ಸೇರಿಸಿರುವ ಬಗ್ಗೆ ಅವರು ದಾಖಲೆ ನೀಡಲಿ. ಬಿಜೆಪಿ ಗೆ ಸೋಲುವ ಭಯ. ಗೆಲ್ಲುವ ವಿಶ್ವಾಸ ಇರುತ್ತಿದ್ದರೆ ಮಂಗಳೂರಿಗೆ ಮೋದಿ ಅವರನ್ನು ಕರೆಸುತ್ತಿರಲಿಲ್ಲ. ಸೋಲುವ ಭಯದಿಂದ ಕಾಂಗ್ರೆಸ್‌ ಪರ ಕೆಲಸ ಮಾಡುವವರಿಗೆ ತೊಂದರೆ ಕೊಡುವ, ಕೆಲಸಕ್ಕೆ ಅಡ್ಡಿ ಪಡಿಸುವ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿ ಬಗ್ಗೆ ಒಲವು ಇದ್ರೆ ಓಟ್‌ ಹಾಕಲಿ. ನಮ್ಮ ಅಡ್ಡಿ ಇಲ್ಲ. ಆದರೆ ತಮ್ಮ ಮುಖ ಉಳಿಸಿಕೊಳ್ಳಲು ಇನ್ನೊಬ್ಬರ ಮೇಲೆ ಅಪವಾದ ಮಾಡಿ ದೂರು ನೀಡಿರುವುದು ಸರಿಯಲ್ಲ ಎಂದು ಅಮಳ ರಾಮಚಂದ್ರ ಹೇಳಿದ್ದಾರೆ. ಗ್ರೂಪ್ ವಿವಾದಕ್ಕೆ ಸಂಬಂಧಪಟ್ಟಂತೆ ನನ್ನನ್ನು ಗ್ರೂಪ್‌ ಗೆ ಸೇರಿಸುವ ಮೂಲಕ ತೇಜೋವಧೆ ಮಾಡಲಾಗಿದೆ. ಪಕ್ಷದಲ್ಲಿ ನನ್ನ ಮೇಲೆ ಟೀಕೆ ಮಾಡಲಾಗುತ್ತಿದೆ ಎಂದು ಆರ್‌ ಸಿ ನಾರಾಯಣ್‌ ದೂರು ದಾಖಲಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ರಂಜಿತ್‌ ಬಂಗೇರ, ಶಕೂರ್‌ ಹಾಜಿ, ಮೌರಿಸ್‌ ಮಸ್ಕರೇಂಜಸ್‌ ಮತ್ತು ಮಹೇಶ್‌ ಅಂಕೊತ್ತಿಮಾರ್‌ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here