




ಪುತ್ತೂರು: ಸಪ್ತಸ್ವರ ಸಂಗೀತ ಕಲಾಶಾಲೆ ಪುತ್ತೂರು ಇವರಿಂದ ಖ್ಯಾತ ಪಿಟೀಲು ವಾದಕ ಡಾ. ಮುಲೈವಾಸಲ್ ಜಿ.ಚಂದ್ರಮೌಳಿ ಚೆನ್ನೈ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಶಿಬಿರವು ಎ.12ರಿಂದ 14ರ ತನಕ ಬೊಳುವಾರು ನೇಸರ ನಿವಾಸದಲ್ಲಿ ಜರುಗಲಿದೆ.



ಪ್ರತಿ ದಿನ ಬೆಳಗ್ಗೆ ಗಂಟೆ 10 ರಿಂದ 12.45ರ ತನಕ ವಿದ್ವತ್ ಗ್ರೇಡ್ ವಿದ್ಯಾಥಿಗಳಿಗೆ ಮತ್ತು ಮಧ್ಯಾಹ್ನ ಗಂಟೆ 2.30 ರಿಂದ ಸಂಜೆ ಗಂಟೆ 5 ರ ತನಕ ಜೂನಿಯರ್ ಮತ್ತು ಸೀನಿಯರ್ ವಿದ್ಯಾರ್ಥಿಗಳಿಗೆ ಶಿಬಿರ ನಡೆಯಲಿದೆ. ಎ.12ರಂದು ಸಂಜೆ ಗಂಟೆ 4.15ಕ್ಕೆ ಪ್ರೊ. ಎಚ್.ಮಾಧವ ಭಟ್ ಅವರಿಂದ ಸಂಗೀತದಿಂದ ಸಮಯ ಸಮೃದ್ಧಿ ಬಗ್ಗೆ ಸುವಿಚಾರ ಕಾರ್ಯಕ್ರಮ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9482337231 ಅನ್ನು ಸಂಪರ್ಕಿಸುವಂತೆ ಸಂಘಟಕರು ತಿಳಿಸಿದ್ದಾರೆ.













