ಸಂಸ್ಕಾರ ಭಾರತೀ ವತಿಯಿಂದ ಯುಗಾದಿ ಹಬ್ಬದ ಆಚರಣೆ

0

ಪುತ್ತೂರು: ಸಂಸ್ಕಾರ ಭಾರತೀ ದ.ಕ.ಜಿಲ್ಲೆ , ಪುತ್ತೂರು ವಿಭಾಗ ಇದರ ವತಿಯಿಂದ, ಕ್ರೋಧಿ ನಾಮ ಹೊಸ ಸಂವತ್ಸರದ ಆಗಮದ ಅಪೂರ್ವ ದಿನವಾದ ಚಾಂದ್ರಮಾನ ಯುಗಾದಿ ಹಬ್ಬದ ಆಚರಣೆಯನ್ನು ಏ.9ರಂದು ಪುತ್ತೂರಿನ ಖ್ಯಾತ ನ್ಯಾಯವಾದಿಗಳಾದ ಕೆ.ಆರ್.ಆಚಾರ್ ಅವರ ಸ್ವಗೃಹ ‘ವಿಭೂಮ್ನಿ’ ಯಲ್ಲಿ ಬೇವು ಬೆಲ್ಲವನ್ನು ಹಂಚಿ ಆಚರಿಸಲಾಯಿತು.

ಹಿರಿಯ ಸಾಹಿತಿ, ನಿವೃತ್ತ ಉಪನ್ಯಾಸ ಹಾಗೂ ಪತ್ರಕರ್ತ ವಿ.ಬಿ. ಅರ್ತಿಕಜೆ ಇವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಶುಭ ಹಾರೈಸಿದರು. ಹಬ್ಬವನ್ನು ಪುತ್ತೂರಿನ ಸಂಗೀತ ಗುರು ವಿದುಷಿ ಪಾರ್ವತಿ ಪದ್ಯಾಣ, ಸುಮನ ಪ್ರಶಾಂತ್ ಮತ್ತು ವಿದುಷಿ ಗೀತಾ ಸಾರಡ್ಕ ಇವರ ಸಾಂದರ್ಭಿಕ ಸಂಗೀತ ಕಾರ್ಯಕ್ರಮದ ಮೂಲಕ ಆಚರಿಸಲಾಯಿತು. ಜಗದೀಶ್ ಅವರು ಪಿಟೀಲು ಹಾಗೂ ವಿಷ್ಣು ಮಿಹಿರ ಮೃದಂಗದಲ್ಲಿ ಸಹಕರಿಸಿದರು.

ಯಕ್ಷಗಾನ ತಾಳಮದ್ದಳೆ ಕಲಾವಿದೆ, ಸಾಹಿತಿ ಹಾಗೂ ಕವಯಿತ್ರಿ ಪದ್ಮ ಆಚಾರ್ಯ ಇವರು ಪ್ರಾಸ್ತಾವಿಕ ನುಡಿಗಳೊಂದಿಗೆ ಯುಗಾದಿ ಹಬ್ಬದ ಸಲುವಾಗಿ ಶುಭ ಹಾರೈಸಿದರು. ವಿದುಷಿ ಮೇಘನಾ ಪಾಣಾಜೆ ಧ್ಯೇಯ ಗೀತೆಯನ್ನು ಹಾಡಿದರು. ಸಂಸ್ಕಾರ ಭಾರತೀ ಜಿಲ್ಲಾ ಉಪಾಧ್ಯಕ್ಷರಾದ ರೂಪಲೇಖಾ ಹಾಗೂ ಅತಿಥೇಯರಾದ ಪದ್ಮಾ ಆಚಾರ್ ಮತ್ತು ಕೆ. ಆರ್. ಆಚಾರ್ ಇವರು ಕಲಾವಿದರನ್ನು ಶಾಲು ಹೊದಿಸಿ ಗೌರವಿಸಿದರು.

ಜಯಲಕ್ಷ್ಮಿ ವಿ.ಭಟ್, ಪ್ರೇಮ ನೂರಿತ್ತಾಯ ಹಾಗೂ ಭಾರತಿ ಇವರು ಕಲಾವಿದರನ್ನು ಪರಿಚಯಿಸಿ, ಸುಮಂಗಲಾ ಸ್ವಾಗತಿಸಿ, ವಿದುಷಿ ನಯನ ವಿ. ರೈ ವಂದಿಸಿದರು.

ಇದರ ಜೊತೆಗೆ, ಜಿಲ್ಲಾ ಸಂಘಟಕರ ಆದೇಶದ ಮೇರೆಗೆ ಹಮ್ಮಿಕೊಂಡ ಭಾವ ಜಾಗರಣ ಕಾರ್ಯಕ್ರಮದಲ್ಲಿ, ಮತದಾನ ಜಾಗೃತಿಯ ಬಗ್ಗೆ ಶಂಕರಿ ಶರ್ಮ ಮಾತನಾಡಿದರು. ಅವರು ರಚಿಸಿದ ಕವನವನ್ನು ಕೃಷ್ಣವೇಣಿ ಪ್ರಸಾದ್ ಮುಳಿಯ ರಾಗ ಸಂಯೋಜಿಸಿ ಹಾಡಿದರು.

LEAVE A REPLY

Please enter your comment!
Please enter your name here