ದೇವಾ ಟ್ರೇಡರ್ಸ್ ನಲ್ಲಿ ಫೆಸ್ಟಿವಲ್ ಆಫರ್ – ರೆಕ್ಸ್ ಕಂಪೆನಿಯ ಹೊಲಿಗೆ ಯಂತ್ರಗಳ ಮೇಲೆ ಭರ್ಜರಿ ಆಫರ್
ಪುತ್ತೂರು: ಸ್ಟಿಚ್ಚಿಂಗ್ ಇಂದು ಬಹುದೊಡ್ಡ ಉದ್ಯಮವಾಗಿ ಬೆಳೆದು ನಿಂತಿದೆ. ಭಾರತದಲ್ಲಂತೂ ಸ್ಟಿಚ್ಚಿಂಗ್ ಮೆಷಿನ್ ಗಳಿಲ್ಲದ ಮನೆಗಳೇ ವಿರಳ ಎಂದು ಹೇಳಬಹುದು. ಪ್ರಮುಖವಾಗಿ ಮಹಿಳೆಯರಿಗೆ ಸ್ವ-ಉದ್ಯೋಗದ ಅಗಾಧ ಅವಕಾಶವನ್ನು ಹೊಂದಿರುವ ಸ್ಟಿಚ್ಚಿಂಗ್ ಉದ್ಯಮಕ್ಕೆ ಇತ್ತೀಚಿನ ದಿನಗಳಲ್ಲಿ ಸರಕಾರವೂ ಉತ್ತಮ ಪ್ರೋತ್ಸಾಹವನ್ನು ನೀಡುತ್ತಿದೆ. ಕಳೆದ ಏಳೆಂಟು ವರ್ಷಗಳಲ್ಲಿ ಈ ಕ್ಷೇತ್ರಕ್ಕೆ ಒಂದು ಬಿಲಿಯನ್ ಡಾಲರ್ ನಷ್ಟು ಹೂಡಿಕೆ ಹರಿದು ಬಂದಿದೆ, ಮಾತ್ರವಲ್ಲದೇ, ಭಾರತದಲ್ಲಿ ಸ್ಟಿಚ್ಚಿಂಗ್ ಮೆಷಿನ್ ಉದ್ಯಮದ ಮಾರುಕಟ್ಟೆ 2020ರಲ್ಲಿ 47 ಮಿಲಿಯನ್ ಡಾಲರ್ ಗಳಷ್ಟಿತ್ತು ಮತ್ತಿದು 2021ರಲ್ಲಿ 50.8 ಮಿಲಿಯನ್ ಡಾಲರ್ ಗಳಿಗೆ ಏರಿಕೆಯಾಗಿದೆ.
ಇದಕ್ಕೆ ಪೂರಕವಾಗಿ ಹಲವಾರು ಕಂಪೆನಿಗಳ ವೈವಿಧ್ಯಮಯ ಸ್ಟಿಚ್ಚಿಂಗ್ ಯಂತ್ರಗಳು ಇದೀಗ ಮಾರುಕಟ್ಟೆಯನ್ನು ಪ್ರವೇಶಿಸಿದ್ದು, ಆಧುನಿಕತೆಗೆ ಅನುಗುಣವಾಗಿ ಇವುಗಳ ಮಾದರಿಗಳಲ್ಲೂ ಹಲವಾರು ಮಾರ್ಪಾಡುಗಳಾಗಿವೆ.
ದೇವಾ ಟ್ರೇಡರ್ಸ್ ನಲ್ಲಿ ರೆಕ್ಸ್ ಸ್ಟಿಚ್ಚಿಂಗ್ ಯಂತ್ರಗಳಿಗೆ ಭರ್ಜರಿ ಆಫರ್!
ಪುತ್ತೂರು ಮಾತ್ರವಲ್ಲದೇ ಈ ಭಾಗದ ಹತ್ತೂರುಗಳಲ್ಲೂ ಸ್ಟಿಚ್ಚಿಂಗ್ ಯಂತ್ರಗಳ ಪೂರೈಕೆ ಮತ್ತು ಸರ್ವಿಸ್ ನಲ್ಲಿ ಕಳೆದ 44 ವರ್ಷಗಳಲ್ಲಿ ಗುಣಮಟ್ಟದ ಸೇವೆಯನ್ನು ನೀಡುತ್ತಾ ಹೆಸರುವಾಸಿಯಾಗಿರುವ ಇಲ್ಲಿನ ಏಳ್ಮುಡಿಯಲ್ಲಿರುವ ಪಾಯಸ್ ಬಿಲ್ಡಿಂಗ್ ನಲ್ಲಿ ಕಾರ್ಯಾಚರಿಸುತ್ತಿರುವ ದೇವಾ ಟ್ರೇಡರ್ಸ್ ನಲ್ಲಿ ಇದೀಗ ಎಕ್ಸ್ ಪೋರ್ಟ್ ಗುಣಮಟ್ಟದ ರೆಕ್ಸ್ ಕಂಪೆನಿಯ ಸ್ಟಿಚ್ಚಿಂಗ್ ಯಂತ್ರಗಳ ಮೇಲೆ ಭರ್ಜರಿ ಆಫರ್ ಗಳನ್ನು ಘೋಷಿಸಲಾಗಿದೆ.
ನಿಮ್ಮ ಕೈಗೆಟಕುವ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಸ್ಟಿಚ್ಚಿಂಗ್ ಯಂತ್ರಗಳನ್ನು ಖರೀದಿಸಲು ನೀವು ಬಯಸುತ್ತಿದ್ದಲ್ಲಿ ಈಗಲೇ ಈ ಆಫರ್ ನ ಪ್ರಯೋಜವನ್ನು ನೀವು ಪಡೆದುಕೊಳ್ಳಬಹುದಾಗಿರುತ್ತದೆ. ಇಷ್ಟು ಮಾತ್ರವಲ್ಲದೇ ಬಜಾಜ್ ಫಿನ್ ಸರ್ವ್ ನ ಸುಲಭ ಕಂತುಗಳ ಸಾಲ ಸೌಲಭ್ಯವನ್ನೂ ಇಲ್ಲಿ ಒದಗಿಸಲಾಗುತ್ತಿದೆ.
ರೆಕ್ಸ್ ಕಂಪೆನಿಯ ಬಗ್ಗೆ ನಿಮಗೆಷ್ಟು ಗೊತ್ತು?
1957ರಲ್ಲಿ ಓಂ ಪ್ರಕಾಶ್ ದಂಡೋನಾ ಎಂಬವರಿಂದ ಪ್ರಾರಂಭಿಸಲ್ಪಟ್ಟ ರೆಕ್ಸ್ ಸ್ವೀವಿಂಗ್ ಮೆಷಿನ್ ಕಂಪೆನಿ ಉತ್ತಮ ಗುಣಮಟ್ಟಕ್ಕೆ ಹೆಸರುವಾಸಿಯಾಗಿ ದೇಶ-ವಿದೇಶಗಳಲ್ಲೂ ಮನೆ ಮಾತಾಗಿದೆ. ಐ.ಎಸ್.ಒ. 9001:2015 ಪ್ರಮಾಣೀಕೃತ ಕಂಪೆನಿಯಾಗಿ ಹೊರಹೊಮ್ಮಿರುವ ಕಂಪೆನಿ ವಾರ್ಷಿಕವಾಗಿ 3.60 ಲಕ್ಷ ಹೊಲಿಗೆ ಯಂತ್ರಗಳನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
ಭಾರತ ಮಾತ್ರವಲ್ಲದೇ ಪ್ರಪಂಚದ 36 ರಾಷ್ಟ್ರಗಳಿಗೆ ರೆಕ್ಸ್ ಕಂಪೆನಿಯ ಹೊಲಿಗೆ ಯಂತ್ರಗಳು ರಫ್ತಾಗುತ್ತಿದ್ದು, ಇದೀಗ ರೆಕ್ಸ್ ಭಾರತ ಸರಕಾರದಿಂದ ಗುರುತಿಸಲ್ಪಟ್ಟಿರುವ ರಫ್ತು ಕಂಪೆನಿಯಾಗಿ ಹೊರಹೊಮ್ಮಿದೆ. ಇಷ್ಟು ಮಾತ್ರವಲ್ಲದೇ ತಮ್ಮ ಡೀಲರ್ ಮತ್ತು ವಿತರಕರ ಮೂಲಕ ಕಂಪೆನಿಯು ಹಲವಾರು ರಾಜ್ಯ ಸರಕಾರದ ಯೋಜನೆಗಳಿಗೂ ಹೊಲಿಗೆ ಯಂತ್ರಗಳನ್ನು ನೀಡುತ್ತಿರುವ ಮೂಲಕ ಗುಣಮಟ್ಟದಲ್ಲಿ ರಾಜಿಯಿಲ್ಲದ ಕಂಪೆನಿಯಾಗಿ ಬೆಳೆಯುತ್ತಿದೆ.