ದರ್ಬೆತ್ತಡ್ಕ ಶಾಲಾ 8ನೇ ತರಗತಿ ಮಕ್ಕಳ ಬೀಳ್ಕೊಡುಗೆ ಸಮಾರಂಭ-ಶಾಲೆಗೆ ಗ್ರೈಂಡರ್ ಕೊಡುಗೆ

0

ನಿಡ್ಪಳ್ಳಿ: ದ. ಕ. ಜಿ. ಪಂ. ಉನ್ನತ ಹಿರಿಯ ಪ್ರಾಥಮಿಕ ಶಾಲೆ ದರ್ಬೆತ್ತಡ್ಕ ಇಲ್ಲಿಯ 8ನೇ ತರಗತಿಯ ಮಕ್ಕಳ ಬೀಳ್ಕೊಡುಗೆ ಸಮಾರಂಭವು ಏ.8 ರಂದು ನಡೆಯಿತು. 

ಶಾಲಾ ಮುಖ್ಯಗುರು ಯು.ಬಿ ಚರುಂಬರವರ ಉಪಸ್ಥಿತಿಯಲ್ಲಿ, ತಾಯಂದಿರ ಸಮಿತಿಯ ಅಧ್ಯಕ್ಷೆ ಅನಸೂಯ, ಹಿರಿಯ ಪೋಷಕರ ಪ್ರತಿನಿಧಿ ಮಾಧವ ದರ್ಬೆತ್ತಡ್ಕ, ಶಿಕ್ಷಕ ರಾಜು ಎಸ್ ಟಿ, ಅತಿಥಿ ಶಿಕ್ಷಕಿಯರಾದ ಯೋಗಿನಿ, ಚೈತ್ರಾ ರೈ, ಜ್ಯೋತಿ, ಅಶ್ವಿತಾ ಮತ್ತು ಎಸ್. ಡಿ. ಎಂ. ಸಿ ಸದಸ್ಯರು, ಪೋಷಕರು, ಹಿರಿಯ ವಿದ್ಯಾರ್ಥಿಗಳ ಸಂಘದ ಸದಸ್ಯರು, ಅಕ್ಷರ ದಾಸೋಹ ಸಿಬ್ಬಂದಿ ಮತ್ತು ಸಹಾಯಕರು, ಶಿಕ್ಷಣ ಪ್ರೇಮಿಗಳು ಮತ್ತು ಪೋಷಕರು ಸಮಾರಂಭದಲ್ಲಿ ಭಾಗವಹಿಸಿದ್ದರು.

ಶಾಲೆಗೆ ಗ್ರೈಂಡರ್ ಕೊಡುಗೆ:
ಶಾಲೆಗೆ ಬಹಳ ಅವಶ್ಯಕತೆ ಇದ್ದ ಗ್ರೈಂಡರನ್ನು ವಿದ್ಯಾರ್ಥಿಗಳು ಮತ್ತು ಪೋಷಕರು ಕೊಡುಗೆಯಾಗಿ ನೀಡಲಾಯಿತು.

ಎಸ್. ಡಿ. ಎಂ. ಸಿ  ಉಪಾಧ್ಯಕ್ಷೆ ಸಹನಾ ಕುಮಾರಿ ಅಧ್ಯಕ್ಷತೆ ವಹಿಸಿದ್ದು, ಶಿಕ್ಷಕ ರಾಜು ಎಸ್. ಟಿ ಪ್ರಾಸ್ತವಿಕವಾಗಿ ಮಾತನಾಡಿ, ಜ್ಯೋತಿ ಕಾರ್ಯಕ್ರಮ ನಿರೂಪಿಸಿದರು.ಚೈತ್ರಾ ರೈ ಸ್ವಾಗತಿಸಿ, ಯೋಗಿನಿ ವಂದಿಸಿದರು.

LEAVE A REPLY

Please enter your comment!
Please enter your name here