ಬಾಳಿಲ ವಿದ್ಯಾಬೋಧಿನೀ ಶಾಲೆಯಲ್ಲಿ ಮಕ್ಕಳ ಬೇಸಿಗೆ ಶಿಬಿರ

0

ಕಾಣಿಯೂರು: ಬಾಳಿಲ ವಿದ್ಯಾಬೋಧಿನೀ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಚಿಣ್ಣರ ಅಂಗಳ ಬೇಸಿಗೆ ಶಿಬಿರ ನಡೆಯಿತು. ಶಾಲಾ ಹಿರಿಯ ವಿದ್ಯಾರ್ಥಿ ಮಹೇಶ್ ಕಾಂಚೋಡು ದೀಪ ಬೆಳಗಿಸಿ ಉದ್ಘಾಟಿಸಿದರು.


ವೇದಿಕೆಯಲ್ಲಿ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ರಾಧಾಕೃಷ್ಣ ರಾವ್ ಯು, ಸಂಚಾಲಕ ಪಿಜಿಎಸ್ಎನ್ ಪ್ರಸಾದ್, ಆಡಳಿತ ಮಂಡಳಿ ಸದಸ್ಯ ಎನ್ ಗೋವಿಂದ ಭಟ್, ಎಸ್. ಡಿ. ಎಂ. ಸಿ ಅಧ್ಯಕ್ಷರಾದ ರುಕ್ಮಯ್ಯ ನಾಯ್ಕ, ಉಪಾಧ್ಯಕ್ಷೆ ಹರಿಣಾಕ್ಷಿ, ಉಪಸ್ಥಿತರಿದ್ದರು. ಒಂದು ವಾರ ನಡೆದ ಕಾರ್ಯಕ್ರಮದಲ್ಲಿ ಗೃಹಾಲಂಕಾರ ,ಭಾಷಣಕಲೆ, ಗೆರಟೆ ಕಲೆ, ಕಸದಿಂದ ರಸ, ಮನೆ ಮದ್ದು, ಸೋಪು ತಯಾರಿ, ಫಿನಾಯಿಲ್, ಕೆಂಡಲ್ ತಯಾರಿ, ಹೂ ಕಟ್ಟುವ ವಿಧಾನ ಇತ್ಯಾದಿ ತರಬೇತಿ ನೀಡಲಾಯಿತು. ಸಂಪನ್ಮೂಲ ವ್ಯಕ್ತಿ ಗಳಾಗಿ ಅಶ್ವಿನಿ ಕೊಡಿಬೈಲು, ಲಕ್ಮಿ ನಾರಾಯಣ ಕಾಯರ್ತೋಡಿ , ತ್ರಿವೇಣಿ ವಿಶ್ವೇಶ್ವರ ಬಾಳಿಲ , ಮೌನೇಶ್ ಬಾಳಿಲ, ರೋಹಿತ್ ಚೀಮುಳ್ಳು, ಭವಾನಿ ಕಾಂಚನ, ಉದಯ ಭಾಸ್ಕರ್ ಸುಳ್ಯ, ಶಿಲ್ಪಾ ಎಡಮಂಗಲ ಭಾಗವಹಿಸಿದರು.


ಶಿಬಿರದ ಕೊನೆಯ ದಿನ ಮಕ್ಕಳ ಜಾತ್ರೆ ಏರ್ಪಡಿಸಿದರು. ವಿದ್ಯಾರ್ಥಿಗಳೇ ವ್ಯಾಪಾರಿಗಳಾದರು, ಈ ಸಂದರ್ಭದಲ್ಲಿ ರೋಟರಿ ಸಂಸ್ಥೆ ಬೆಳ್ಳಾರೆ ಶಾಲೆಗೆ ಭೇಟಿ ನೀಡಿ ಸಿಹಿ ತಿಂಡಿ ಹಂಚಿದರು, ಹಾಗೂ ಶಾಲೆಗೆ ಡಯಾಸ್ ಕೊಡುಗೆ ನೀಡಿದರು.
ಸಮಾರೋಪದಲ್ಲಿ ವಿದ್ಯಾಬೋಧಿನೀ ಪ್ರೌಢ ಶಾಲೆ ಬಾಳಿಲ ಸಹ ಶಿಕ್ಷಕ ಉದಯ ಕುಮಾರ್ ರೈ ಯವರು ಸಮಾರೋಪ ಭಾಷಣ ಮಾಡಿದರು. ಶಾಲಾ ಮುಖ್ಯಗುರು ಕೃಷ್ಣಮೂರ್ತಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ವಿದ್ಯಾರ್ಥಿಗಳೇ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಶಿಕ್ಷಕ ಶಿವಪ್ರಸಾದ್ ಕಾರ್ಯಕ್ರಮ ಸಂಘಟಿಸಿದ್ದರು. ಎಲ್ಲಾ ಅದ್ಯಾಪಕ ವೃಂದದವರು, ಎಸ್.ಡಿ. ಎಂ. ಸಿ ಸದಸ್ಯರು, ಪೋಷಕರೂ ಹಾಜರಿದ್ದು ಕಾರ್ಯಕ್ರಮ ಯಶಸ್ವೀ ಗೊಳಿಸಿದರು .

LEAVE A REPLY

Please enter your comment!
Please enter your name here