ರಾಮಕುಂಜ: ರಿಕ್ಷಾದಿಂದ ಬಿದ್ದು ಮಗುವಿಗೆ ಗಾಯ

0

ರಾಮಕುಂಜ: ಆಟೋ ರಿಕ್ಷಾದಿಂದ ಡಾಮಾರು ರಸ್ತೆಗೆ ಬಿದ್ದು ನಾಲ್ಕು ವರ್ಷದ ಮಗು ಗಾಯಗೊಂಡಿರುವ ಘಟನೆ ರಾಮಕುಂಜ ಗ್ರಾಮದ ಕಾಜರಕುಕ್ಕು ಎಂಬಲ್ಲಿ ಎ.15ರಂದು ಸಂಜೆ ನಡೆದಿದೆ.


ರಾಮಕುಂಜ ನಿವಾಸಿ ಹರಿಣಾಕ್ಷಿ ಅಚಾರ್ಯ ಅವರ ಪುತ್ರ ಸಾತ್ವಿಕ್(4ವ.)ಗಾಯಗೊಂಡ ಮಗು. ಹಳೆನೇರಂಕಿ ಕಡೆಯಿಂದ ಆತೂರು ಕಡೆಗೆ ಬರುತ್ತಿದ್ದ ಆಟೋರಿಕ್ಷಾ (ಕೆಎ 21, ಸಿ 0452)ವನ್ನು ಅದರ ಚಾಲಕ ಶಿವಪ್ರಸಾದ್ ಎಂಬವರು ಕಾಜರಕುಕ್ಕು ಎಂಬಲ್ಲಿ ಇಳಿಜಾರು ರಸ್ತೆಯಲ್ಲಿ ಏಕಾಏಕಿ ಬ್ರೇಕ್ ಹಾಕಿದಾಗ ಆಟೋರಿಕ್ಷಾದ ಹಿಂಬದಿಯ ಬಲಚಕ್ರ ಮೇಲಕ್ಕೆ ಎತ್ತಿದ ಪರಿಣಾಮ ಆಟೋರಿಕ್ಷಾದಲ್ಲಿದ್ದ ಮಗು ಸಾತ್ವಿಕ್ ರಸ್ತೆಗೆ ಬಿದ್ದು ಗಾಯಗೊಂಡಿರುವುದಾಗಿ ವರದಿಯಾಗಿದೆ. ಮಗುವಿಗೆ ಪುತ್ತೂರು ಸಿ.ಟಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಮಂಗಳಾ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಲಾಗಿದೆ. ಈ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.

LEAVE A REPLY

Please enter your comment!
Please enter your name here