ಏ.22 ಕಲ್ಕಾರು ಅಣ್ಣಪ್ಪ ಪಂಜುರ್ಲಿ, ಕಲ್ಲುರ್ಟಿ ಪಂಜುರ್ಲಿ ದೈವಸ್ಥಾನದಲ್ಲಿ ನಾಗದೇವರ, ದೈವಗಳ ಪ್ರತಿಷ್ಠಾಕಲಶ, ವಾರ್ಷಿಕ ನೇಮೋತ್ಸವ, ಧಾರ್ಮಿಕ ಸಭೆ : ಸವಣೂರು ಸೀತಾರಾಮ ರೈ

0

ವಿಟ್ಲ: ಕಲ್ಕಾರು ಕುಟುಂಬಸ್ಥರ ಶ್ರೀ ನಾಗದೇವರ, ಶ್ರೀ ಮಹಮ್ಮಾಯಿ ಅಮ್ಮ, ಶ್ರೀ ಅಣ್ಣಪ್ಪ ಪಂಜುರ್ಲಿ, ಕಲ್ಲುರ್ಟಿ ಪಂಜುರ್ಲಿ ದೈವಗಳ ಹಾಗೂ ಪರಿವಾರ ದೈವಗಳ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಬಡಾಜೆ ಗೋಪಾಲಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ಏ.21ರಂದು ನಡೆಯಲಿದೆ ಎಂದು ಕಲ್ಕಾರು ದೈವ ದೇವರುಗಳ ಕಾರ್ಯಕಾರಿ ಸಮಿತಿ ಅಧ್ಯಕ್ಷ ಕೆ. ಸೀತಾರಾಮ ರೈ ಸವಣೂರು ಹೇಳಿದರು.

ಅವರು ಏ.18ರಂದು ಕ್ಷೇತ್ರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಸುಮಾರು 25 ಲಕ್ಷ ವೆಚ್ಚದಲ್ಲಿ 37 ದಿನಗಳಲ್ಲಿ ದೈವಸ್ಥಾನ ಹಾಗೂ ನಾಗದೇವರ ಚಿತ್ರ ಕೂಟ ನಿರ್ಮಾಣವಾಗಿದೆ. ಸುಮಾರು 30 ವರ್ಷಗಳ ಹಿಂದೆ ಬಾಲಕೃಷ್ಣ ರೈ ಚೊಕ್ಕಾಡಿ ರವರ ಮುಂದಾಳುತ್ವದಲ್ಲಿ, ಕುಟುಂಬದ ಹಿರಿಯರು ಸೇರಿಕೊಂಡು ಪಯ್ಯನೂರು ಮಾಧವ ಪೊದುವಾಳರ ನೇತೃತ್ವದಲ್ಲಿ ಅಷ್ಟ ಮಂಗಳ ಪ್ರಶ್ನೆಯನ್ನು ನಡೆಸಿ ಕಲ್ಕಾರಿನಲ್ಲಿಆ ಕುಟುಂಬದ ದೈವಗಳನ್ನು ಮತ್ತು ನಾಗ ದೇವರನ್ನು ಆರಾಧಿಸಬೇಕು ಎಂದು ಕಂಡು ಬಂದ ಪ್ರಕಾರ, ಕಲ್ಕಾರು ಲಕ್ಷ್ಮೀ ಸಿ ಶೆಟ್ಟಿ ಮತ್ತು ಮಕ್ಕಳು, ನಾರಾಯಣ ಅಡ್ಯಂತಾಯ ಮತ್ತು ಸಹೋದರರು, ಕೃಷ್ಣ ಅಡಪ ರವರು ದಾನವಾಗಿ ನೀಡಿದ ಜಾಗದಲ್ಲಿ 1994 ರಲ್ಲಿ ದೈವಸ್ಥಾನ ಮತ್ತು ನಾಗಬನ ನಿರ್ಮಾಣ ಮಾಡಿ ಬ್ರಹ್ಮ ಕಲಶವನ್ನು ನೆರವೇರಿಸಲಾಯಿತು. 2002 ರಿಂದ ಕುಟುಂಬದ ಕಾರ್ಯಕಾರಿ ಸಮಿತಿಯ ಜವಾಬ್ದಾರಿಯನ್ನು ವಹಿಸಿಕೊಂಡ ನಾನು ಕುಟುಂಬಿಕರ ಸಹಕಾರದೊಂದಿಗೆ ಹೊಸ ತರವಾಡು ಮನೆ, ರಂಗ ಮಂಟಪ ಮುಂತಾದ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ.

ದೈವಗಳ ಪ್ರೇರಣೆಯಂತೆ ದೈವಸ್ಥಾನ ಮತ್ತು ನಾಗದೇವರ ಸಾನಿಧ್ಯವನ್ನು ಜೀರ್ಣೋದ್ದಾರ ಮಾಡುವ ಬಗ್ಗೆ ಕುಟುಂಬದ ಹಿರಿಯವರಾದ ಸೀತಾರಾಮ ಅಡ್ಯಂತಾಯ ಬೋಳಂತ್ತೂರು ಗುತ್ತು, ವೆಂಕಪ್ಪ ಆಳ್ವ ಕುರಿಯ, ವಾಸುದೇವ ಶೆಟ್ಟಿ ಪಲ್ಲತಡ್ಕ, ಪದ್ಮನಾಭ ಕಾಜವ ಕೆಂಜಲ, ಕೃಷ್ಣ ಶೆಟ್ಟಿ ಕನಾರು, ಸದಾಶಿವ ಆಳ್ವ ಬಾಳೆಪುಣಿಗುತ್ತು, ಶಿಧರ ಶೆಟ್ಟಿ ಹಿನಾರಿ ಮತ್ತು ಕುಟುಂಬಿಕರನ್ನು ಒಟ್ಟು ಸೇರಿಸಿ ದೈವ ದೇವರ ಜೀರ್ಣೋದ್ಧಾರ ಕೆಲಸವನ್ನು ಮಾಡುವ ಬಗ್ಗೆ ತೀರ್ಮಾನ ಕೈಗೊಂಡು, ಪಯ್ಯನೂರು ಮಾಧವ ಪೊದುವಾಳರ ಮೂಲಕ ತಾಂಬೂಲ ಪುನಃ ಪ್ರಶ್ನಾ ಚಿಂತನೆಯನ್ನು ನಡೆಸಿ ನೂತನ ದೈವಸ್ಥಾನದ ಕೆಲಸವನ್ನು ಪ್ರಾರಂಭ ಮಾಡಲಾಯಿತು ಎಂದು ತಿಳಿಸಿದರು.

ಕುಟುಂಬಿಕರಾದ ಪಟ್ಲ ಸತೀಶ್ ಶೆಟ್ಟಿ, ದೇವರಾಜ್ ರೈ ಸುರಿಬೈಲು, ವಿಶ್ವನಾಥ ಆಳ್ವ ನಾಡಾಜೆ, ರಾಧಕೃಷ್ಣ ಅಡ್ಯಂತಾಯ ಕಲ್ಯಾರು, ಪುಷ್ಪರಾಜ್ ಅಡ್ಯಂತಾಯ ಕಲ್ಕಾರು, ರತ್ನಾಕರ ಅಡಪ ಕಲ್ಯಾರು, ರವಿ ರೈ ಕಳಸ, ಸುಧಾಕರ ಶೆಟ್ಟಿ ನಾಡಾಜಿ, ಸುನಾದ್ ರಾಜ್ ಶೆಟ್ಟಿ ಬೊಂಡಾಲ ಅಂತರಗುತ್ತು, ರಾಮ್ ಪ್ರಸಾದ್ ರೈ, ಮಹೇಶ್ ಆಳ್ವ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಧಾರ್ಮಿಕ – ಸಾಂಸ್ಕೃತಿಕ ಕಾರ್ಯಕ್ರಮ:
ಏ. 19ರಂದು ಸಾಯಂಕಾಲ 5ರಿಂದ ಸುದರ್ಶನ ಹೋಮ, ದುರ್ಗಾ ಪೂಜೆ, ಏ.೨೦ರಂದು ಬೆಳಗ್ಗೆ 6ಕ್ಕೆ ತಿಲಹೋಮ, ಸಾಯಂಕಾಲ 5ಕ್ಕೆ ತಂತ್ರಿಗಳ ಸ್ವಾಗತ,ದೇವತಾ ಪ್ರಾರ್ಥನೆ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಬಲಿ ಸೇರಿ ಧಾರ್ಮಿಕ ಕಾರ್ಯಕ್ರಮ, ಏ.21ರಂದು ಬೆಳಗ್ಗೆ 7ಕ್ಕೆ ಗಣಪತಿ ಹವನ, 9.25ಕ್ಕೆ ನಾಗದೇವರ ಬಿಂಬ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ, 9.45ರಿಂದ 10.25ರ ಸಮಯದಲ್ಲಿ ಶ್ರೀದೈವಗಳ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ, 11ಕ್ಕೆ ನಾಗತಂಬಿಲ, ಆಶ್ಲೇಷ ಬಲಿ, ದೈವಗಳ ತಂಬಿಲ, ಶ್ರೀ ಸತ್ಯನಾರಾಯಣ ಪೂಜೆ, ಶ್ರೀ ವೆಂಕಟರಮಣ ದೇವರ ಮುಡಿಪು ಕಟ್ಟುವುದು, ಮಹಾಪೂಜೆ, ಪ್ರಸಾದ ವಿತರಣೆ, 12.30ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದು, ಗೌರಿಗದ್ದೆ ದತ್ತಾಶ್ರಮ ವಿನಯ ಗುರೂಜಿ ದಿವ್ಯ ಉಪಸ್ಥಿತಿ ನೀಡಲಿದ್ದಾರೆ. ಅಧ್ಯಕ್ಷತೆಯನ್ನು ಕೆ. ಸೀತಾರಾಮ ರೈ ಸವಣೂರು ಅಧ್ಯಕ್ಷತೆಯನ್ನು ವಹಿಸಲಿದ್ದು, ಧಾರ್ಮಿಕ ಚಿಂತಕ ಶ್ರೀಕಾಂತ್ ಶೆಟ್ಟಿ ಕಾರ್ಕಳ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಯಕ್ಷದ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಉಪಸ್ಥಿತರಿರಲಿದ್ದಾರೆ. ಕುಟುಂಬದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಮಧ್ಯಾಹ್ನ 2.30 ರಿಂದ ಯಕ್ಷಗಾನ ತಾಳಮದ್ದಳೆ ಶ್ರೀರಾಮ ಪರಂದಾಮ, ಸಾಯಂಕಾಲ ೬ ರಿಂದ ನೇಮೋತ್ಸವ ಕಾರ್ಯಕ್ರಮ ನಡೆಯಲಿದೆ. ಏ.22ರಂದು ದೈವಗಳಿಗೆ ತಂಬಿಲ ಸೇವೆ ನಡೆಯಲಿದೆ.

LEAVE A REPLY

Please enter your comment!
Please enter your name here