ದರ್ಬೆಯ ಮಂಜುನಾಥೇಶ್ವರ ಎಲೆಕ್ಟ್ರೋನಿಕ್ಸ್ & ಫರ್ನೀಚರ್ಸ್ ನಲ್ಲಿ ಜಾತ್ರೋತ್ಸವದ ಪ್ರಯುಕ್ತ ವಿಶೇಷ ರಿಯಾಯಿತಿ

0

ಪುತ್ತೂರು: ಇಲ್ಲಿನ ದರ್ಬೆವೃತ್ತದ ಬಳಿ ಇರುವ ಪ್ರಶಾಂತ್ ಮಹಲ್ ನ ನೆಲಮಹಡಿಯಲ್ಲಿ ವ್ಯವಹಾರ ನಡೆಸುತ್ತಿರುವ ಮಂಜನಾಥೇಶ್ವರ ಎಲೆಕ್ಟ್ರೋನಿಕ್ಸ್ & ಫರ್ನೀಚರ್ಸ್ ನಲ್ಲಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವದ ಪ್ರಯುಕ್ರ ಪ್ರತೀ ಖರೀದಿಗೆ ವಿಶೇಷ ರೀಯಾಯಿತಿ ನೀಡಲಾಗುತ್ತಿದ್ದು, ಗ್ರಾಹಕರಿಂದ ಉತ್ತಮ‌ ಸ್ಪಂಧನೆ ವ್ಯಕ್ತವಾಗಿದೆ.

ಸಂಸ್ಥೆಯು ಕಳೆದ 28 ವರುಷಗಳಿಂದ ವಿಟ್ಲ ಹಾಗೂ ಪೆರ್ಲದಲ್ಲಿ ನಿರಂತರ ಸೇವೆಯನ್ನು ನೀಡುತ್ತಾ ಬಂದಿದ್ದು, ಗ್ರಾಹಕರ ನೆಚ್ಚಿನ ಸಂಸ್ಥೆಗಳಲ್ಲಿ ಒಂದಾಗಿದೆ.
ಇದೀಗ ತಿಂಗಳ ಹಿಂದೆ ಪುತ್ತೂರಿನಲ್ಲಿ ತನ್ನ ಮೂರನೇ ಶಾಖೆಯನ್ನು ತೆರೆದಿದ್ದು, ಆರಂಭದ ದಿನಗಳಿಂದಲೇ ಗ್ರಾಹಕರಿಂದ ಉತ್ತಮ ಸ್ಪಂಧನೆ ವ್ಯಕ್ತವಾಗಿದೆ. ಇದೀಗ ಗ್ರಾಹಕರಿಗೆ ಅನುಕೂಲಕರವಾಗಲೆಂದು ಪುತ್ತೂರಿನ ಜಾತ್ರೋತ್ಸವದ ಪ್ರಯುಕ್ತ ವಿಶೇಷ ರೀಯಾಯಿತಿಯ ಕೊಡುಗೆಗಳನ್ನು ನೀಡುತ್ತಿದೆ. ಈಗಾಗಲೇ ಸಂಸ್ಥೆಯಲ್ಲಿ ರಿಯಾಯಿತಿ ದರದ ಮಾರಾಟ ಪ್ರಕ್ರಿಯೆ ಆರಂಭವಾಗಿದ್ದು, ಏ.25ರ ವರೆಗೆ ಮುಂದುವರಿಯಲಿದೆ.

ವಿವಿಧ ಕಂಪೆನಿಯ ಎಲೆಕ್ಟ್ರೋನಿಕ್ಸ್ ಐಟಂಗಳು:
ಸಂಸ್ಥೆಯಲ್ಲಿ ವಿವಿಧ ಕಂಪೆನಿಯ ಟಿ.ವಿ., ಫ್ರಿಡ್ಜ್, ವಾಷಿಂಗ್ ಮೆಷಿನ್, ಗ್ರೈಂಡರ್, ಮಿಕ್ಸಿ, ವಿವಿಧ ತರಹದ ಫ್ಯಾನ್ ಗಳು, ಏರ್ ಕಂಡೀಷನರ್, ಕೂಲರ್, ಗಿಫ್ಟ್ ಐಟಂಗಳು ಸೇರಿದಂತೆ ವಿವಿಧ ಬಗೆಯ ಎಲೆಕ್ಟ್ರೋನಿಕ್ಸ್ ಐಟಂಗಳು ಲಭ್ಯವಿದೆ.

ಮನಸೂರೆಗೊಳ್ಳುವ ಫರ್ನೀಚರ್ ಐಟಂ:
ಸೋಫ ಸೆಟ್ಟ್, ಡೈನಿಂಗ್ ಸೆಟ್, ದೀವಾನ, ಬೆಡ್ ರೂಂ ಸೆಟ್, ಟಿಫಾಯಿ, ವಿವಿಧ ಬಗೆಯ ಅಲ್ಮೆರಾಗಳು, ವಿವಿಧ ಬಗೆಯ ಕಾಟ್ ಗಳು, ವಿವಿಧ ಕಂಪೆನಿಯ ಬೆಡ್ ಗಳು, ಪಿಲ್ಲೋಗಳು, ಕಾರ್ನರ್ ಸೋಫಸೆಟ್ ಗಳು, ರೀಡಿಂಗ್‌ ಟೇಬಲ್ ಸೇರಿದಂತೆ ವಿವಿಧ ಬಗೆಯ ಮರ ಹಾಗೂ ಪ್ಲ್ಯಾಸ್ಟಿಕ್ ಚೇರ್ ಗಳು ಲಭ್ಯವಿದೆ.

ಫ್ರೀ ಹೋಮ್ ಡೆಲಿವರಿ:
ಸಂಸ್ಥೆಯು ಗ್ರಾಹಕರ ಅನುಕೂಲಕ್ಕಾಗಿ ಆಯ್ದ ವಸ್ತುಗಳನ್ನು ಉಚಿತವಾಗಿ ಮನೆಗೆ ಮುಟ್ಟಿಸುವ ವ್ಯವಸ್ಥೆಯನ್ನು ಮಾಡುತ್ತಿದೆ.

ಈ.ಎಂ.ಐ. ಸೌಲಭ್ಯ:
ಸಂಸ್ಥೆಯಲ್ಲಿ ಬಜಾಜ್ ಸೇರಿದಂತೆ ವಿವಿಧ ಕಂಪೆನಿಗಳಿಂದ ಸಾಲಸೌಲಭ್ಯದ ವ್ಯವಸ್ಥೆಯನ್ನು ಮಾಡಿದೆ. ಗ್ರಾಹಕರು ಈ.ಎಂ.ಐ. ಮೂಲಕ ತಮ್ಮಿಷ್ಟದ ಎಲೆಕ್ಟ್ರೋನಿಕ್ಸ್ ಹಾಗೂ ಫರ್ನೀಚರ್ ಐಟಂಗಳನ್ನು ಮನೆಗೆ ಕೊಂಡೊಯ್ಯಬಹುದಾಗಿದೆ.

ವಿಶಾಲ ಪಾರ್ಕಿಂಗ್ ವ್ಯವಸ್ಥೆ:
ಪುತ್ತೂರಿನ ಪೇಟೆಯಲ್ಲಿ ಹೆಚ್ಚಿನ ಅಂಗಡಿಗಳಿಗೆ ತೆರಳಬೇಕಾದರೆ ನಮಗೆ ನಮ್ಮ ವಾಹನಗಳನ್ನು ಪಾರ್ಕಿಂಗ್ ಮಾಡುವುದೇ ದೊಡ್ಡ ಸಮಸ್ಯೆಯಾಗಿದೆ. ಆದರೆ ಮಂಜುನಾಥೇಶ್ವರ ಎಲೆಕ್ಟ್ರೋನಿಕ್ಸ್ & ಫರ್ನೀಚರ್ಸ್ ನಲ್ಲಿ ವಿಶಾಲವಾದ ಪಾರ್ಕಿಂಗ್ ಸೌಲಭ್ಯವಿದ್ದು, ವಸ್ತುಗಳ ಆಯ್ಕೆಗೆ ವಿಫುಲ ಅವಕಾಶವಿದೆ.

500 ರೂಪಾಯಿ ಪಾವತಿ ಮಾಡಿ, ದ್ವಿಚಕ್ರವಾಹನ, ಕಾರುಗೆಲ್ಲುವ ಅವಕಾಶ:

ಸಂಸ್ಥೆಯಲ್ಲಿ ಪ್ರತೀ ಹದಿನೈದು ದಿನಗಳಿಗೊಮ್ಮೆ 500 ರೂಪಾಯಿ ಪಾವತಿ ಮಾಡುವಂತಹ ಲಕ್ಕಿ ಸ್ಕೀಂ ಅನ್ನು ಆರಂಭಿಸಲಾಗಿದ್ದು, ಈಗಾಗಲೇ ಸದಸ್ಯರ ಸೇರ್ಪಡೆ ಆರಂಭಗೊಂಡಿದೆ. ಅದರಲ್ಲಿ ಎರಡು ದ್ವಿಚಕ್ರವಾಹನ ಹಾಗೂ ಕಾರು ಗೆಲ್ಲುವ ಅವಕಾಶವನ್ನು ಸಂಸ್ಥೆ ಕಲ್ಪಿಸಿದೆ.
ಪ್ರತೀ ಹದಿನೈದು ದಿನಗಳಿಗೊಮ್ಮೆ ಡ್ರಾ ನಡೆಯಲಿದ್ದು, ಸದಸ್ಯರು 500 ರೂಪಾಯಿ ಪಾವತಿ ಮಾಡಬೇಕಾಗಿದೆ. ಪ್ರತೀ ತಿಂಗಳು ಎರಡು ಡ್ರಾ ನಡೆಯಲಿದ್ದು, ಅದರಲ್ಲಿ ಎಲೆಕ್ಟ್ರೋನಿಕ್ಸ್ ಐಟಂ, ಫರ್ನೀಚರ್ ಐಟಂ, ಅಲ್ಮೆರಾ, ದ್ವಿಚಕ್ರ ವಾಹನ, ಚಿನ್ನಾಭರಣ, ಚಿನ್ನದ ನಾಣ್ಯವನ್ನು ಗೆಲ್ಲಬಹುದಾಗಿದೆ. ಬಂಪರ್ ಬಹುಮಾನವಾಗಿ ಮಾರುತಿ ಸ್ವಿಫ್ಟ್ ಕಾರನ್ನು ಗೆಲ್ಲುವ ಅವಕಾಶವಿದೆ.
ಡ್ರಾದಲ್ಲಿ ವಿಜೇತರಾಗದ ಸದಸ್ಯರಿಗೆ ತ್ರಿಬಲ್ ಡೋರ್ ನ ಅಲ್ಮೆರಾ ವಿತ್ ಡ್ರೆಸ್ಸಿಂಗ್ ಟೇಬಲ್, ೪೦ ಇಂಚಿನ ಟಿವಿ, ಡೈನಿಂಗ್ ಟೇಬಲ್ ಸೆಟ್, ಸೋಫಾ ಸೆಟ್ ವಿತ್ ಟಿಫಾಯಿ, ಫ್ಯಾ‌ನ್, ಗ್ರೈಂಡರ್, ಮಿಕ್ಸಿ, ನಾನ್ ಸ್ಟಿಕ್, ಕೂಲರ್ ಲಭ್ಯವಿದ್ದು, ತಮ್ಮಿಷ್ಟದ ವಸ್ತುಗಳ ಆಯ್ಕೆಗೆ ಮುಕ್ತ ಅವಕಾಶವಿದೆ.

ಸ್ಕೀಂ ಗೆ ಸದಸ್ಯರಾದವರಿಗೆ ಉಚಿತ ಇನ್ಶೂರೆನ್ಸ್:

ಸಂಸ್ಥೆ ಆಯೋಜನೆ ಮಾಡಿರುವ ಲಕ್ಕಿ ಸ್ಕೀಂ ಗೆ ಸದಸ್ಯರಾದ ಪ್ರತಿಯೋರ್ವ ಸದಸ್ಯರಿಗೂ ಒಂದೂವರೆ ಲಕ್ಷ ರೂಪಾಯಿ ಮೊತ್ತದ ಇನ್ಶೂರೆನ್ಸ್ ಅನ್ನು ಉಚಿತವಾಗಿ ನೀಡಲಿದೆ. ಇದರಲ್ಲಿ ಯಾವುದೇ ಸದಸ್ಯನಿಗೆ ಒಂದೂವರೆ ಲಕ್ಷ ರೂಪಾಯಿ ಮೌಲ್ಯದ ರಸ್ತೆ ಮತ್ತು ರೈಲು ಅಪಘಾತ ವಿಮೆ/ಆಸ್ಪತ್ರೆ ವಾಸ ಚಿಕಿತ್ಸೆ ವೆಚ್ಚ ಲಭಿಸಲಿದೆ.

LEAVE A REPLY

Please enter your comment!
Please enter your name here