ಪುತ್ತೂರು: ಪೆರ್ಲಂಪಾಡಿ ದೊಡ್ಡಮನೆ- ಸ್ಥಳಮನೆಯ ನೂತನ ತರವಾಡು ಮನೆಯ ಗೃಹಪ್ರವೇಶ ಮತ್ತು ರುದ್ರಚಾಮುಂಡಿ ಮತ್ತು ಸಹಪರಿವಾರ ದೈವಗಳ ಪುನರ್ ಪ್ರತಿಷ್ಠೆ, ಕಲಶೋತ್ಸವ ಹಾಗೂ ನೇಮೋತ್ಸವ ಕಾರ್ಯಕ್ರಮ ಏ.22ರಿಂದ ಏ.26ರವರೆಗೆ ನೀಲೇಶ್ವರ ಬ್ರಹ್ಮಶ್ರೀ ಕೆ.ಯು. ಅರವತ್ತಿನ್ ಪದ್ಮನಾಭ ತಂತ್ರಿಯವರ ನೇತೃತ್ವದಲ್ಲಿ ವೈದಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಿತು.
ಏ.24ರಂದು ಬೆಳಿಗ್ಗೆ ಗಣಪತಿ ಹೋಮ, ಪ್ರಸಾದ ಪ್ರತಿಷ್ಠೆ ನಡೆದು 7.30ರ ವೃಷಭ ಲಗ್ನದಲ್ಲಿ ತರವಾಡು ಮನೆಯ ಗೃಹಪ್ರವೇಶ ನಡೆದು ಶ್ರೀ ವೆಂಕಟ್ರಮಣ ದೇವರ ಮುಡಿಪು ಪೂಜೆಯ ಬಳಿಕ ಶ್ರೀ ದೈವಗಳ ಪ್ರತಿಷ್ಠೆ ನಡೆದು ಕಲಶಾಭಿಷೇಕ, ತಂಬಿಲ ಸೇವೆ ನಡೆಯಿತು.
ಸಂಜೆ ದೀಪಾರಾಧನೆ, ಶ್ರೀ ಧರ್ಮದೈವ ರುದ್ರಚಾಮುಂಡಿ ಮತ್ತು ಪರಿವಾರ ದೈವಗಳ ಭಂಡಾರ ತೆಗೆಯುವ ಕಾರ್ಯಕ್ರಮ ನಡೆಯಿತು.
ರಾತ್ರಿ ಗುರು ಕಾರ್ನೊರು, ಕಲ್ಲುರ್ಟಿ ದೈವ, ವರ್ಣರ ಪಂಜುರ್ಲಿ ದೈವಗಳನೇಮ, ಭೂಮಿ ಪಂಜುರ್ಲಿ ದೈವದ ನೇಮ ನಡೆಯಿತು.
ಏ.25ರಂದು ಬೆಳಿಗ್ಗೆ ರಕೇಶ್ವರಿ ದೈವದ ನೇಮ, ಕುಪ್ಪೆ ಪಂಜುರ್ಲಿ ದೈವದ ನೇಮ ನಡೆಯಿತು.
ಎ.26ರಂದು ಬೆಳಿಗ್ಗೆ ನಾಗಚಾಮುಂಡಿ ದೈವದ ನೇಮ, ಧರ್ಮದೈವ ರುದ್ರಚಾಮುಂಡಿ ದೈವದ ನೇಮ ನಡೆದು, ಮಧ್ಯಾಹ್ನ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು. ಸಂಜೆ ಗುಳಿಗೆ ನೇಮ ನಡೆಯಿತು.ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕಿಟ್ಟಣ್ಣ ಗೌಡ ಕಾನದಬರಿ, ಕಾರ್ಯದರ್ಶಿ ಪ್ರೇಮಾನಂದ ಪೆರ್ಲಂಪಾಡಿ ದೊಡ್ಡಮನೆ, ಕೋಶಾಧಿಕಾರಿ ಚಿನ್ನಪ್ಪ ಗೌಡ ಚಲ್ಲತ್ತಡಿ, ತರವಾಡು ಮುಖ್ಯಸ್ಥರಾದ ಪಿ.ವಾಸುದೇವ ಗೌಡ ಪೆರ್ಲಂಪಾಡಿ ದೊಡ್ಡಮನೆ ಹಾಗೂ ಜೀರ್ಣೋದ್ದಾರ ಸಮಿತಿ ಸದಸ್ಯರುಗಳು, ಕುಟುಂಬಸ್ಥರು ಮತ್ತು ಬಂಧುಮಿತ್ರರು ಭಕ್ತಾದಿಗಳನ್ನು ಸ್ವಾಗತಿಸಿ, ಪ್ರಸಾದ ನೀಡಿ ಸತ್ಕರಿಸಿದರು.