*ಕೃಷಿಕರಿಗೆ ಮಾಹಿತಿ ತಂತ್ರಜ್ಞಾನ ಅಗತ್ಯ – ಎನ್.ಜಿ.ಪ್ರಭಾಕರ್ ರೈ
*ಮೇ.25ರ ರಜತ ಸಂಭ್ರಮಕ್ಕೆ ಸ್ವಾಗತ – ಕೇಶವ ಅಮೈ
ಪುತ್ತೂರು: ಎಸ್‌ಆರ್‌ಕೆ ಲ್ಯಾಡರ‍್ಸ್‌ನ 25ನೇ ವರ್ಷದ ರಜತ ಸಂಭ್ರಮದಲ್ಲಿ ಸರಣಿ 9ನೇ ಕಾರ್ಯಕ್ರಮವಾಗಿ ಭಾರತೀಯ ಕಿಸಾನ್ ಸಂಘ ಸುಳ್ಯ ಇದರ ಸಹಯೋಗದಲ್ಲಿ ಮೇ.5ರಂದು ಬಾಳಿಲ ವಿದ್ಯಾಬೋಧಿನಿ ಪ್ರೌಢಶಾಲೆಯಲ್ಲಿ ಕೃಷಿ ವಿಚಾರ ಸಂಕಿರಣ ನಡೆಯಿತು.
ಸುಳ್ಯ ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ಎನ್ ಜಿ ಪ್ರಭಾಕರ್ ರೈ ಅವರು ಕೃಷಿ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿ ಕೃಷಿ ಕ್ಷೇತ್ರಕ್ಕೆ ಇವತ್ತು ಮಾಹಿತಿಯ ತಂತ್ರಜ್ಞಾನದ ಅವಶ್ಯಕತೆ ಇದೆ. ಅದನ್ನು ಇಂತಹ ಕಾರ್ಯಗಾರ ಮೂಲಕ ಕೃಷಿಕರಿಗೆ ನೀಡುವುದು ಬಹಳ ಮುಖ್ಯ. ಕೃಷಿಕರಿಗೆ ಹತ್ತಿರವಾಗಿರುವ ಎಸ್.ಆರ್.ಕೆ.ಲ್ಯಾಡರ‍್ಸ್ ಸಂಸ್ಥೆಯು ತನ್ನ 25ನೇ ವರ್ಷದ ಸಂಭ್ರಮದಲ್ಲಿ ಕೃಷಿಕರಿಗೆ ಉತ್ತಮ ಮಾಹಿತಿ ನೀಡುತ್ತಿರುವುದು ಶ್ಲಾಘನೀಯ ಎಂದರು. ಉದ್ಘಾಟನೆಯ ಬಳಿಕ ಪ್ರಥಮ ಗೋಷ್ಠಿಯಲ್ಲಿ ಕೃಷಿಗೆ ನೀರಿನ ಸಮರ್ಪಕ ಬಳಕೆಯ ಕುರಿತು ಸುರೇಶ್ ಬಲ್ನಾಡು ಮತ್ತು ಅಡಿಕೆಯೊಂದಿಗೆ ಉಪವಾಣಿಜ್ಯ ಬೆಳೆಗಳ ಕುರಿತು ಅಜಿತ್ ಪ್ರಸಾದ್ ರೈ ಅವರು ವಿಚಾರ ಮಂಡನೆ ಮಾಡಿದರು. ಗೋಷ್ಠಿಯ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಎಸ್.ಆರ್.ಕೆ.ಲ್ಯಾಡರ‍್ಸ್‌ನ ಮಾಲಕ ಕೇಶವ ಅಮೈ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ ಎಸ್.ಆರ್.ಕೆ.ಲ್ಯಾಡರ‍್ಸ್ ಕೃಷಿಕರ ಆಪ್ತ ಮಿತ್ರನಾಗಿ ಕೆಲಸ ನಿರ್ವಹಿಸುತ್ತಾ ಇದೀಗ ರಜತ ಸಂಭ್ರಮದಲ್ಲಿದೆ. ಮೇ.25ರಂದು ಕೊಯಿಲದ ಕಲಾಯಿಗುತ್ತಿನಲ್ಲಿ ನಡೆಯುವ ರಜತ ಸಂಭ್ರಮಕ್ಕೆ ಎಲ್ಲರು ಆಗಮಿಸುವಂತೆ ಮನವಿ ಮಾಡಿದರು. ವಿದ್ಯಾಬೋಧಿನಿ ಪ್ರೌಢಶಾಲೆಯ ಸಂಚಾಲಕ ಪಿ.ಜಿ.ಎಸ್ ಎನ್ ಪ್ರಸಾದ್, ಬಾಳಿಲ ಕಳೆಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಕೂಸಪ್ಪ ಗೌಡ ಮುಗುಪ್ಪು, ಪ್ರಗತಿಪರ ಕೃಷಿಕ ರಾಮಕೃಷ್ಣ ಭಟ್ ಕುರಂಬುಡೇಲು, ಸುಳ್ಯ ಭಾರತೀಯ ಕಿಸಾನ್ ಸಂಘದ ಕೋಶಾಧಿಕಾರಿ ಸೀತಾರಾಮ ಕೆ. ಕಂಚಿಗಾರಮೂಲೆ, ಆಕರ್ಷಣ್ ಸಂಸ್ಥೆಯ ಮಾಲಕ ಸಾಧಿಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಒಕ್ಕಲಿಗ ಸ್ಪಂದನ ಸಮುದಾಯ ಸಹಕಾರ ಸಂಘ ಕಡಬ ತಾಲೂಕು ಇದರ ಉಪಾಧ್ಯಕ್ಷ ಚೇತನ್ ಆನೆಗುಂಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಿಸಾನ್ ಸಂಘದ ಉಪಾಧ್ಯಕ್ಷ ಗೋಪಾಲಕೃಷ್ಣ ಭಟ್ ಸ್ವಾಗತಿಸಿ, ಎಸ್.ಆರ್.ಕೆ. ಸಿಬ್ಬಂದಿ ದಿನೇಶ್ ವಂದಿಸಿದರು. ಮನೋಜ್ ಕಾರ್ಯಕ್ರಮ ನಿರೂಪಿಸಿದರು. ವಸಂತ್ ಕಾರ್ಯಕ್ರಮ ಸಂಯೋಜಕರಾಗಿದ್ದರು.