





ಪುತ್ತೂರು: ಬಜರಂಗದಳದ ನಾಲ್ವರು ಕಾರ್ಯಕರ್ತರ ಗಡಿಪಾರು ಆದೇಶಕ್ಕೆ ಕರ್ನಾಟಕ ಉಚ್ಚನ್ಯಾಯಾಲಯ ತಡೆಯಾಜ್ಞೆ ನೀಡಿದೆ.
ಪುತ್ತೂರು ಸಂಪ್ಯ ನಿವಾಸಿ ಪ್ರಜ್ವಲ್, ತಿಂಗಳಾಡಿಯ ನಿತಿನ್, ದಿನೇಶ್ ಹಾಗು ಒಳಮೊಗ್ರು ಗ್ರಾಮದ ಅಜಲಡ್ಕ ನಿವಾಸಿ ಪ್ರದೀಪ್ ಎಂಬವರನ್ನು ಬಾಗಲಕೋಟೆ ಜಿಲ್ಲೆಗೆ ಗಡಿಪಾರು ಮಾಡಲು ಪೊಲೀಸ್ ಇಲಾಖೆ ಶಿಫಾರಸು ಮಾಡಿದ್ದು ಗಡಿಪಾರಿಗೆ ಆದೇಶವಾಗಿತ್ತು.ಹೈಕೋರ್ಟ್ ಇದಕ್ಕೆ ತಡೆಯಾಜ್ಞೆ ನೀಡಿದೆ.ಆರೋಪಿಗಳ ಪರವಾಗಿ ನ್ಯಾಯವಾದಿ ಸುಯೋಗ್ ಹೇರಳೆ ವಾದಿಸಿದ್ದರು.










