![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಬೆಳ್ಳಾರೆ : ಚಾಲಕನ ನಿಯಂತ್ರಣ ತಪ್ಪಿ ಜೀಪೊಂದು ಚರಂಡಿಗೆ ಬಿದ್ದ ಘಟನೆ ಮೇ.14 ರಂದು ರಾತ್ರಿ ಬೆಳ್ಳಾರೆ ಸಮೀಪ ನೆಟ್ಟಾರಿನಲ್ಲಿ ನಡೆದಿದೆ.
![](https://puttur.suddinews.com/wp-content/uploads/2024/05/309eb995-9a96-4af5-92fc-3e7b5d7c3117.jpg)
ಬೆಳ್ಳಾರೆ ಕಡೆಯಿಂದ ಮಾಡಾವು ಕಡೆಗೆ ಹೋಗುತ್ತಿದ್ದ ಥಾರ್ ಜೀಪು ನಿಯಂತ್ರಣ ತಪ್ಪಿ ನೆಟ್ಟಾರಿನಲ್ಲಿ ರಸ್ತೆ ಬದಿಯ ದೊಡ್ಡ ಚರಂಡಿಗೆ ಉರುಳಿ ಬಿದ್ದಿದೆ. ಪರಿಣಾಮ ಜೀಪಿನ ಎದುರುಭಾಗ ಸಂಪೂರ್ಣ ಜಖಂಗೊಂಡಿದೆ. ಚಾಲಕ ಕೆಯ್ಯೂರು ಗ್ರಾಮದ ಬೊಳಿಕಳ ಸುಳ್ಯ ನಿವಾಸಿ ವಿನೋದ್ ಎಂಬವರಿಗೆ ಗಾಯವಾಗಿರುವುದಾಗಿ ತಿಳಿದು ಬಂದಿದೆ.