ಕೈಕಾರದಲ್ಲಿ ರಸ್ತೆ ಬದಿಗೆ ಕಸ, ಗ್ರಾಪಂನಿಂದ ತೆರವು

0

ಪುತ್ತೂರು: ಒಳಮೊಗ್ರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೈಕಾರದಲ್ಲಿ ಶಾಲಾ ಬಳಿ ರಸ್ತೆ ಬದಿಗೆ ಯಾರೋ ವಾಹನದಲ್ಲಿ ಬಂದು ಕಸ ಸುರಿದು ಹೋಗಿದ್ದು ಇದನ್ನು ಗ್ರಾಪಂನಿಂದ ತೆರವುಗೊಳಿಸಲಾಯಿತು. ಕಸ ಸುರಿದು ಹೋಗಿರುವ ಬಗ್ಗೆ ಮಾಹಿತಿ ಪಡೆದುಕೊಂಡ ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು, ಕಾರ್ಯದರ್ಶಿ ಜಯಂತಿ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಸ್ವಚ್ಛವಾಹಿನಿ ವಾಹನದ ಮೂಲಕ ಸ್ಥಳದಲ್ಲಿದ್ದ ಕಸವನ್ನು ತೆರವುಗೊಳಿಸಲಾಯಿತು.


ರಸ್ತೆ ಬದಿಗೆ ಕಸ, ತ್ಯಾಜ್ಯ ಸುರಿಯುತ್ತಿರುವುದು ಮತ್ತೆ ಹೆಚ್ಚಾಗಿದ್ದು ಈ ಬಗ್ಗೆ ಗ್ರಾಪಂ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದು ರಸ್ತೆ ಬದಿಗೆ ತ್ಯಾಜ್ಯ, ಕಸ ಸುರಿಯುತ್ತಿರುವುದು ಗಮನಕ್ಕೆ ಬಂದರೆ ತಕ್ಷಣವೇ ಗ್ರಾಪಂಗೆ ಮಾಹಿತಿ ನೀಡುವಂತೆ ಅಧ್ಯಕ್ಷರು ಮನವಿ ಮಾಡಿಕೊಂಡಿದ್ದಾರೆ. ಹೆಚ್ಚಾಗಿ ರಾತ್ರಿ ವೇಳೆ ವಾಹನದಲ್ಲಿ ಬಂದು ಕಸ ಸುರಿದು ಹೋಗುತ್ತಿರುವುದು ಕಂಡು ಬಂದಿದ್ದು ಈ ಬಗ್ಗೆ ಸಾರ್ವಜನಿಕರು ಗಮನಿಸಿದರೆ ವಾಹನದ ನಂಬರ್ ಸಮೇತ ಪಂಚಾಯತ್‌ಗೆ ತಿಳಿಸುವಂತೆ ಕೋರಿದ್ದಾರೆ. ಈ ರೀತಿಯಾಗಿ ಕಸ,ತ್ಯಾಜ್ಯ ಸುರಿದು ಹೋಗುತ್ತಿರುವವರ ವಿರುದ್ಧ ದಂಡ ಹಾಗೂ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here