ತೆಂಕಿಲ ಶಾಲಾ ಬಳಿಯ ಸೇತುವೆ ಕೆಳಗೆ 8 ಕುರಿಗಳ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ

0

ಪುತ್ತೂರು: ಮಾಣಿ ಮೈಸೂರು ರಸ್ತೆಯ ತೆಂಕಿಲದ ವಿವೇಕಾನಂದ ಶಾಲಾ ಬಳಿಯ ಸೇತುವೆ ಕೆಳಗೆ 8 ಕುರಿಗಳ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಕಳೆದ ಮೂರು ನಾಲ್ಕು ದಿನಗಳ ಹಿಂದೆ ಈ ಕುರಿಗಳು ಸತ್ತಿರಬಹುದೆಂದು ಶಂಕಿಸಲಾಗಿದೆ. ಆದರೆ ಇದನ್ನು ಇಲ್ಲಿ ತಂದು ಹಾಕಿದವರು ಯಾರು? ಎಂಬ ಪ್ರಶ್ನೆ ಹುಟ್ಟಿಕೊಂಡಿದ್ದು ಉತ್ತರ ಸಿಕ್ಕಿಲ್ಲ. ಈ ಪರಿಸರ ಕೆಟ್ಟ ವಾಸನೆಯಿಂದ ಕೂಡಿದ್ದು, ಜನರು ಮೂಗು ಮುಚ್ಚಿ ನಡೆದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಲಾರಿಯಲ್ಲಿ ಕುರಿಗಳ ಸಾಗಾಟದ ವೇಳೆ ಸತ್ತ ಕುರಿಗಳನ್ನು ಇಲ್ಲಿ ಎಸೆದುಹೋಗಿರಬಹುದೆಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ. ನಗರಸಭಾ ಸದಸ್ಯ ಪಿ ಜಿ ಜಗನ್ನಿವಾಸ್‌ ರಾವ್‌ ನಗರಸಭಾ ಆಯುಕ್ತರಿಗೆ ಮಾಹಿತಿ ನೀಡಿದ್ದು, ಕುರಿಗಳ ಮೃತದೇಹ ತೆರವು ಕಾರ್ಯಾಚರಣೆ ನಿರೀಕ್ಷೆಯಲ್ಲಿ ಸಾರ್ವಜನಿಕರಿದ್ದಾರೆ.

LEAVE A REPLY

Please enter your comment!
Please enter your name here