ನೇರಳಕಟ್ಟೆ ಆರ್ಯಾಪು ಶ್ರೀ ಅಮ್ಮನವರ ದೇವಸ್ಥಾನದಲ್ಲಿ ಶ್ರದ್ಧಾಭಕ್ತಿಯ ವಾರ್ಷಿಕ ಮಾರಿಪೂಜೆ

0

ಪುತ್ತೂರು: ನೇರಳಕಟ್ಟೆ ಆರ್ಯಾಪು ಶ್ರೀ ಅಮ್ಮನವರ ದೇವಸ್ಥಾನದಲ್ಲಿ ಶ್ರದ್ಧಾ ಭಕ್ತಿಯ ವಾರ್ಷಿಕ ಮಾರಿಪೂಜೆಯು ಶ್ರೀ ಕ್ಷೇತ್ರದ ತಂತ್ರಿವರ್ಯರಾದ ಬ್ರಹ್ಮಶ್ರೀ ವೇದಮೂರ್ತಿ ನಾಗೇಶ್ ತಂತ್ರಿ ಕೆಮ್ಮಿಂಜೆರವರ ನೇತೃತ್ವದಲ್ಲಿ ಮೇ 16 ರಿಂದ 17 ರತನಕ ಜರಗಿತು.


ಮೇ 16 ರಂದು ಬೆಳಿಗ್ಗೆ ದೇವತಾ ಪ್ರಾರ್ಥನೆ, ಪಂಚಗವ್ಯ-ಪುಣ್ಯವಾಚನ ಶುದ್ಧಿ, ಶ್ರೀ ಗಣಪತಿ ಹೋಮ, ಕಲಶ ಪೂಜೆ, ಸಾರ್ವಜನಿಕ ಸತ್ಯನಾರಾಯಣ ಪೂಜೆ ಹಾಗೂ ಮಧ್ಯಾಹ್ನ ಶ್ರೀ ಅಮ್ಮನವರಿಗೆ ಗುಡಾನ್ನ ಮತ್ತು ಹಾಲು ಪಾಯಸ ಸಮರ್ಪಣೆ ನಂತರ ಮಹಾಪೂಜೆ, ಪ್ರಸಾದ ವಿತರಣೆ, ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ‘ಅಮ್ಮನ ಪ್ರಸಾದ’ ನಡೆಯಲಿದೆ. ಸಂಜೆ ಶ್ರೀ ಕಲ್ಲುರ್ಟಿ ದೈವದ ಅಭಯ ಸ್ವೀಕಾರ, ರಾತ್ರಿ ವೃಶ್ಚಿಕ ಲಗ್ನ ಮುಹೂರ್ತದಲ್ಲಿ ಶ್ರೀ ಅಮ್ಮನವರಿಗೆ ಮಹಾಪೂಜೆ, ಕ್ಷೇತ್ರದ ಇತರೇ ದೈವಗಳಿಗೆ ಪೂಜೆ, ಶ್ರೀ ಅಮ್ಮನವರಿಂದ ಹಾಗೂ ಸ-ಪರಿವಾರ ದೈವಗಳಿಂದ ಆಭಯ ಸ್ವೀಕಾರ, ಶ್ರೀ ಅಮ್ಮನವರ ಭಂಡಾರ ತೆಗೆಯುವುದು, ಉತ್ಸವ ಬಯಲು ‘ಆರ್ಯಾಪು ನೇರಳಕಟ್ಟೆ’ ಮೂಲ ಕ್ಷೇತ್ರಕ್ಕೆ ಶ್ರೀ ಅಮ್ಮನವರ ಭಂಡಾರವನ್ನು ಕೊಂಡೊಯ್ಯುವುದು ನಡೆಯಿತು.


ಮೇ 17 ರಂದು ಪ್ರಾತಃಕಾಲ ಆರ್ಯಾಪು ನೇರಳಕಟ್ಟೆಯಲ್ಲಿ ಶ್ರೀ ಅಮ್ಮನವರನ್ನು ಪ್ರತಿಸ್ಥಾಪಿಸುವುದು, ಶ್ರೀ ಅಮ್ಮನವರ ದೂತರಿಗೆ ಬಲಿ ನೀಡುವುದು, ಪೂರ್ವಾಹ್ನ ಬಿ.ಕೆ ಸುಂದರ್ ನೆಲ್ಲಿಗುಂಡಿ ಮತ್ತು ಬಳಗದವರಿಂದ ಭಜನಾ ಕಾರ್ಯಕ್ರಮ, ಮಧ್ಯಾಹ್ನ ಶ್ರೀ ಅಮ್ಮನವರಿಗೆ ಮಹಾಪೂಜೆ, ಅನ್ನದ ಪಲ್ಲ ಪೂಜೆ, ಸ-ಪರಿವಾರ ದೈವಗಳಿಗೆ ಪೂಜೆ, ಮಡಸ್ಥಾನ ಸೇವೆ(ವಿಶೇಷ ಸೇವೆ), ಶ್ರೀ ಅಮ್ಮನವರ ಹಾಗೂ ಇತರೇ ದೈವಗಳಿಂದ ಅಭಯ ಸ್ವೀಕಾರ, ಆರ್ಯಾಪು ನೇರಳಕಟ್ಟೆಯಲ್ಲಿ ಶ್ರೀ ಅಮ್ಮನವರ ಮಹಾಪ್ರಸಾದ ವಿತರಣೆ, ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ಅಮ್ಮನ ಪ್ರಸಾದ, ಸಂಜೆ ಶ್ರೀ ಅಮ್ಮನವರು ಹಾಗೂ ಸ-ಪರಿವಾರ ದೈವಗಳ ಭಂಡಾರವನ್ನು ಆರ್ಯಾಪು ನೇರಳಕಟ್ಟೆಯಿಂದ ದೇವಸ್ಥಾನಕ್ಕೆ ಕೊಂಡೊಯ್ಯುವುದು ಹಾಗೂ ಪ್ರತಿಷ್ಠಾಪಿಸುವುದು ನಡೆಯಿತು. ಮೇ 18 ರಂದು ಪೂರ್ವಾಹ್ನ ಶ್ರೀ ಅಮ್ಮನವರಿಗೆ ಶುದ್ಧಿ ಕಲಶ, ದೈವಗಳಿಗೆ ತಂಬಿಲ ಸೇವೆ, ಮಹಾಪೂಜೆ ಪ್ರಸಾದ ವಿತರಣೆ ನಡೆಯಲಿದೆ.


ಈ ಪುಣ್ಯ ಕಾರ್ಯದಲ್ಲಿ ಕೊಂಬೆಟ್ಟು ಶ್ರೀ ರಾಮಕೃಷ್ಣ ಪ್ರೌಢಶಾಲಾ ಸಂಚಾಲಕ ಕಾವು ಹೇಮನಾಥ ಶೆಟ್ಟಿ, ಪುತ್ತೂರು ಪುಡಾ ಅಧ್ಯಕ್ಷ ಭಾಸ್ಕರ ಕೋಡಿಂಬಾಳ, ರೋಟರಿ ಕ್ಲಬ್ ಪುತ್ತೂರು ಸ್ವರ್ಣ ಅಧ್ಯಕ್ಷ ಸುಂದರ್ ರೈ ಬಲ್ಕಾಡಿ, ಪುತ್ತೂರು ನಗರಸಭೆ ಸದಸ್ಯ ರಮೇಶ್ ರೈ ಮೊಟ್ಟೆತ್ತಡ್ಕ, ಶ್ರೀ ಕ್ಷೇತ್ರದ ಆಡಳಿತ ಸಮಿತಿಯ ಗೌರವಾಧ್ಯಕ್ಷ ಸತೀಶ್ ರೈ ಮಿಶನ್‌ಮೂಲೆ, ಅಧ್ಯಕ್ಷ ರವಿಚಂದ್ರ ಆಚಾರ್ಯ, ಅನುವಂಶಿಕ ಆಡಳತ ಮೊಕ್ತೇಸರ ಗಂಗಾಧರ್ ಸೀಗೆಬಲ್ಲೆ ವಿಟ್ಲ, ಪ್ರಧಾನ ಕಾರ್ಯದರ್ಶಿ ದಿನೇಶ್ ರೈ ಮೊಡಪ್ಪಾಡಿಮೂಲೆ, ಪ್ರಧಾನ ಸಂಚಾಲಕರಾದ ನೇಮಾಕ್ಷ ಸುವರ್ಣ, ಕೋಶಾಧಿಕಾರಿ ಸುರೇಶ್ ಪಿ, ಶ್ರೀ ಅಮ್ಮನವರ ಸೇವಾ ಸಮಿತಿ ಅಧ್ಯಕ್ಷ ಜಗನ್ನಾಥ ಪಿ., ಆಡಳಿತ ಸಮಿತಿ ಕಾರ್ಯದರ್ಶಿ ಲೋಕೇಶ್ ರೈ ಮೇರ್ಲ, ಪ್ರಧಾನ ಅರ್ಚಕ ಸುನಿಲ್ ಮಚ್ಚೇಂದ್ರರವರ ಸಹಿತ ನೂರಾರು ಭಗವದ್ಭಕ್ತರು ಧಾರ್ಮಿಕ ಕಾರ್ಯದಲ್ಲಿ ಶ್ರದ್ಧಾಭಕ್ತಿಯಿಂದ ಪಾಲ್ಗೊಂಡರು.

ನಾಲ್ವರು ಎಸೆಸ್ಸೆಲ್ಸಿ ಪ್ರತಿಭಾವಂತರಿಗೆ ಸನ್ಮಾನ..
ಶ್ರೀ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಕಳೆದ ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್‌ನಲ್ಲಿ ಉತ್ತೀರ್ಣರಾದ ಹಿತಾ ಶೆಟ್ಟಿ(ದಿ.ಸೀತಾರಾಮ ಶೆಟ್ಟಿ ಕಂಬಳದಡ್ಡ ಹಾಗೂ ಪ್ರಮೀಳಾ ಶೆಟ್ಟಿ ದಂಪತಿ ಪುತ್ರಿ), ಬಿ.ಪಿ ಸಿಂಚನಾ(ಭಾಸ್ಕರ್ ನೆಲ್ಲಿಗುಂಡಿ ಹಾಗೂ ಪವಿತ್ರ ನೆಲ್ಲಿಗುಂಡಿ ದಂಪತಿ ಪುತ್ರಿ), ಕೆ.ಟಿ ಪ್ರಣಾಮ್(ಪ್ರದೀಪ್ ಹಾಗೂ ನಯನಾ ದಂಪತಿ ಪುತ್ರಿ), ರೋಹನ್ ಎ.ಎಚ್(ಹೊಸಮನೆ ಆನಂದ ಹೆಚ್ ಹಾಗೂ ಸವಿತಾ ಕೆ ದಂಪತಿ ಪುತ್ರಿ)ರವರುಗಳನ್ನು ಗುರುತಿಸಿ ಶ್ರೀ ಕ್ಷೇತ್ರದ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಲಾಯಿತು.

LEAVE A REPLY

Please enter your comment!
Please enter your name here