ಪುತ್ತೂರು: ಸುದ್ದಿ ಕೃಷಿ ಮಾಹಿತಿ ಕೇಂದ್ರ ಅರಿವು ಇದರ ವತಿಯಿಂದ ಆಹಾರದ ಮೀನುಗಳನ್ನು ಮನೆಯಲ್ಲಿ, ತೋಟಗಳಲ್ಲಿ ಸಾಕುವ, ಹಣ ಗಳಿಕೆಯ ಬಗ್ಗೆ ಮಾಹಿತಿ ಕಾರ್ಯಗಾರ ಮೇ.19ರಂದು ಎ.ಪಿ,ಎಂ.ಸಿ ರಸ್ತೆಯಲ್ಲಿರುವ ಕ್ರಿಸ್ಟೋಫರ್ ಕಾಂಪ್ಲೆಕ್ಸ್ ನಲ್ಲಿ ಸುದ್ದಿ ಅರಿವು ಕೃಷಿ ಕೃಂದ್ರದಲ್ಲಿ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿದ್ದ ಕಾರ್ಕಳ ಮತ್ಯ ಕನ್ಯ ಅಕ್ವೇರಿಯಂನ ಶಶಿ ಕುಮಾರ್‌ರವರು ಅಲಂಕಾರಿಕ ಮೀನು, ಆಹಾರದ ಮೀನಿನಲ್ಲಿರುವ ವಿಧಗಳು, ಸಾಕಾಣಿಕೆಯ ಕ್ರಮಗಳು, ಮುಂಜಾಗ್ರತಾ ಕ್ರಮಗಳು, ಸರಕಾರದ ಸಹಾಯಧನಗಳು, ಲಾಭದಾಯಕ ವಿಧಾನಗಳು ಕುರಿತು ವಿವರವಾದ ಮಾಹಿತಿ ನೀಡಿದರು.
ರಿತೇಶ್ ಉರ್ಲಾಂಡಿ, ಡಾ.ಶ್ರೀಧರ್ ಗೌಡ.ಪಿ.ನೆಲ್ಲಿಕಟ್ಟೆ, ಕೃಷ್ಣಪ್ರಸಾದ್ ಉಪ್ಪಿನಂಗಡಿ, ರಮೇಶ್ ಐವರ್ನಾಡು, ಚಂದ್ರಶೇಖರ್ ಕೆದಿಲ, ಕ್ಸೆವಿಯರ್ ಪುಣಚ, ಯತೀಶ್ ಕಡಬ, ಯತಿನ್.ಪಿ.ಸಬಳೂರು, ಶುಭಾಕರ್ ದರ್ಬೆತಡ್ಕ, ಮಹೇಶ್ ಕಡಬ, ನಿಶ್ಚಿತ್ ಕಾಣಿಯೂರು, ಸರೋಜಿನಿ ಕೊಂಬಾರು, ವಸಂತ್ ಮಣಿಯಾಣಿ ಅರಿಯಡ್ಕ, ಎಮ್.ಸಿಲಾಮಾಂತೆರೋ ಕಡಬ, ವಿನ್ಯಾಸ್ ಸಂಪ್ಯ, ಚಂದ್ರಶೇಖರ.ಕೆ.ಸಿ.ಕಾವು, ದಾಮೋದರ್ ರೈ ನಿಡ್ಪಳ್ಳಿ, ದಿನೇಶ್ ನರಿಮೊಗರು, ಧರ್ಮರಾಜ್ ಸುಳ್ಯ, ಸುರೇಶ್ ಅಲಂಕಾರು ಮೊದಲಾದವರು ಭಾಗವಹಿಸಿ ತರಬೇತಿಯ ಪ್ರಯೋಜನ ಪಡೆದುಕೊಂಡರು. ಸುದ್ದಿ ಅರಿವು ಕೃಷಿ ಕೇಂದ್ರದ ಸಿಬ್ಬಂದಿ ಚೈತ್ರ ಹಾಗೂ ಹರಿಣಾಕ್ಷಿ ಸಹಕರಿಸಿದರು.