ಪೂಂಜರೇ ಎಷ್ಟೊಂದು ತೊಂದರೆ ಅನುಭವಿಸಿದ್ದೀರಿ, ಕೇಸಿಗೂ ಒಳಗಾಗಿದ್ದೀರಿ, ಈ ಪ್ರಕರಣ ರಾಜಕೀಯ ಗೊಂದಲಕ್ಕೆ ಕಾರಣವಾಗಿದ್ದರೂ ಶಶಿರಾಜ್ ಶೆಟ್ಟಿ ಜೈಲಿನಲ್ಲೇ ಇದ್ದಾರೆ. ಯುವ ಮೋರ್ಛಾದ ಅಧ್ಯಕ್ಷರೂ ಆಗಿರುವ ಅವರು ನಿರಪರಾಧಿ ಎಂದು ತಾವು ಇಷ್ಟೆಲ್ಲಾ ಹೋರಾಟ ನಡೆಸುತ್ತಿದ್ದೀರಿ. ಆದರೆ ಅದು ಇಷ್ಟರವರೆಗೆ ಪ್ರಯೋಜನಕ್ಕೆ ಬಂದಿರುವುದಿಲ್ಲ. ಅವರನ್ನು ಜೈಲಿನಿಂದ ಮತ್ತು ಕೇಸಿನಿಂದ ಬಿಡಿಸಲು ಸುಲಭ ಉಪಾಯವೊಂದಿದೆ- ತಿಳಿಸಲೇ?
ಅಕ್ರಮ ಗಣಿಗಾರಿಕೆ ಪ್ರಕರಣದ ಇನ್ನೊಬ್ಬ ಆರೋಪಿ ತಮ್ಮ ಪಕ್ಷದ ಜಿಲ್ಲಾ ಯುವ ಮೋರ್ಛಾದ ಉಪಾಧ್ಯಕ್ಷ ಪ್ರಮೋದ್ ಗೌಡರು ಆರೋಪಿ ಎಂದು ಶಾಸಕ ಹರೀಶ್ ಪೂಂಜರೇ ಪ್ರತಿಭಟನೆಯಲ್ಲಿ ಹೇಳಿರುವಾಗ ಅವರು ಠಾಣೆಗೆ ಬಂದು ಅಥವಾ ಹೇಳಿಕೆಯ ಮೂಲಕ ಶಶಿರಾಜ್ ಶೆಟ್ಟಿಯ ಪಾತ್ರ ಈ ಅಕ್ರಮ ಗಣಿಗಾರಿಕೆಯಲ್ಲಿಲ್ಲ ಎಂದು ತಿಳಿಸಿದರೆ ಶಶಿರಾಜ್ ಶೆಟ್ಟಿಗೆ ನ್ಯಾಯ ದೊರಕಿ ಪ್ರಕರಣ ಮುಗಿದಂತೆ ಅಲ್ಲವೇ?
ಒಂದು ವೇಳೆ ಕಾಂಗ್ರೆಸ್ ಪಕ್ಷದವರ ಕೈವಾಡವಿದ್ದರೆ ಅದು ವಿಫಲವಾಗಿ ಅವರಿಗೆ ಮುಖಭಂಗವೇ ಆಗುತ್ತದೆ. ತಹಶಿಲ್ದಾರ ವಿಚಾರಣೆ, ಪೊಲೀಸ್ ಠಾಣೆಯ ದೂರು ಎಲ್ಲವೂ ತಪ್ಪಾಗಿ ಶಶಿರಾಜ್ ಶೆಟ್ಟಿ ನಿರಪರಾಽಯಾಗಿ ಹೊರಗೆ ಬರುತ್ತಾರೆ, ಕೇಸ್ ಆಗಿದ್ದರೂ ಜಾಮೀನಿಗೆ ತೊಂದರೆ ಆಗುವುದಿಲ್ಲ, ಚಾರ್ಜ್‌ಶೀಟ್ ಆಗುವುದಿಲ್ಲ ಅಲ್ಲವೇ? ನಿರಪರಾಧಿ ಎಂದು ತಾವು ಹೇಳಿತ್ತಿರುವ ಶಶಿರಾಜ್ ಶೆಟ್ಟಿ ಬಂಧನದ ವಿಷಯದಲ್ಲಿ ನೀವು ಮಾಡಿದ ಪ್ರತಿಭಟನೆ, ಹೋರಾಟಕ್ಕೆ ಜಯ ದೊರಕಿದಂತೆ ಆಗುವುದಿಲ್ಲವೇ? ಒಟ್ಟು ಪ್ರಕರಣವೇ ಇತ್ಯರ್ಥವಾಗುವುದಿಲ್ಲವೇ?
ನೀವು ಆ ರೀತಿಯ ಪ್ರಯತ್ನ ಮಾಡಿದರೆ ಸಾರ್ವಜನಿಕ ಬೆಂಬಲವು ನಿಮಗೆ ದೊರಕುವುದಲ್ಲದೆ ಇಡೀ ಪ್ರಕರಣವೇ ಸುಖಾಂತ್ಯವಾಗಿ ದ.ಕ ಜಿಲ್ಲೆಯ ಜನರಿಗೂ ನೆಮ್ಮದಿ ಸಿಗುವುದು ಖಂಡಿತ.
ಡಾ.ಯು.ಪಿ.ಶಿವಾನಂದ
ಸುದ್ದಿ ಜನಾಂದೋಲನ ವೇದಿಕೆ, ಪುತ್ತೂರು, ಸುಳ್ಯ, ಬೆಳ್ತಂಗಡಿ