ಬೆಥನಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಪರಿಸರ ದಿನಾಚರಣೆ

0

ಪುತ್ತೂರು : ಜೂ.5 ರಂದು ಬೆಥನಿ ಮಾಧ್ಯಮ ಪ್ರೌಢಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.ಪ್ರಾಸ್ತವಿಕವಾಗಿ, ಶಾಲಾ ಸ್ಕೌಟ್ಸ್‌ ಮತ್ತು ಗೈಡ್ಸ್‌ ವಿದ್ಯಾಥಿಗಳಾದ, ಕು. ಶ್ರೀನಿಧಿ ಮತ್ತು ಕು. ಕೆಲಿಡಾರವರೂ ಕಾರ್ಯ ಕ್ರಮವನ್ನು ನಿರೂಪಿಸಿದರು.


ಕಾರ್ಯ ಕ್ರಮದಲ್ಲಿ ಅತಿಥಿಗಳಾಗಿ ಆಗಮಿಸಿದ್ದ ರಾಷ್ಟ್ರೀಯ ಗೇರು ಸಂಶೋಧನಾ ವಿಭಾಗದ ಮುಖ್ಯ ತಾಂತ್ರಿಕ ಅಧಿಕಾರಿ ಪ್ರಕಾಶ್‌ ಭಟ್ ವಿದ್ಯಾಥಿಗಳನ್ನು ಉದ್ದೇಶಿಸಿ , ಪರಿಸರವನ್ನು ಸಂರಕ್ಷಿಸುದರೊಂದಿಗೆ ಸ್ವಚ್ಚತೆಯನ್ನು ಕಾಪಡಬೇಕು .ಪ್ರತಿಯೊಬ್ಬ ವಿದ್ಯಾರ್ಥಿಯೂ ಒಂದು ಗಿಡವನ್ನುನೆಟ್ಟು ಅದನ್ನು ಪೋಷಿಸುವುದು ನಮ್ಮ ಕರ್ತವ್ಯ ವಾಗಬೇಕು. ಬೀಜದ ಉಂಡೆಗಳನ್ನು ಮಾಡಿ ಅದನ್ನು ಅರಣ್ಯಗಳಲ್ಲಿ ಬಿತ್ತುವುದು ಹೇಗೆ ಎಂದು ಮಕ್ಕಳಲ್ಲಿ ಮನವರಿಕೆ ಮಾಡಿದರು.”ಕಾಡು ಬೆಳೆಸಿ – ನಾಡು ಉಳಿಸಿ” “ಮರ ಒಂದು ಉಪಯೋಗ – ನೂರಾ ಒಂದು” ಎಂದೂ ವಿದ್ಯಾರ್ಥಿ ಗಳೊಂದಿಗೆ ಘೋಷಣೆ ಮಾಡಿದರು.


ಈ ಕಾಯಾಕ್ರಮದಲ್ಲಿ ಆಶ್ರೇಯ್‌ ಶಟ್ಟಿ ಸ್ವಾಗತಿಸಿ, ವಂಶಿಕೃಷ್ಣ ಧನ್ಯವಾದ ಸಲ್ಲಿಸಿದರು. ಈ ಕಾಯಾಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್‌ ಆಗ್ನೇಸ್‌ ಶಾಂತಿ, ಶಿಕ್ಷಕರು, ಶಿಕ್ಷಕೇತರ ವೃಂದವರು ಪಾಲ್ಗೋಂಡರು.

LEAVE A REPLY

Please enter your comment!
Please enter your name here