ಪುತ್ತೂರು: ನೆಹರು ನಗರದ ವಿವೇಕಾನಂದ ಸೆಂಟ್ರಲ್ ಸ್ಕೂಲ್ ನಲ್ಲಿ ಜೂ.5 ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.ಸಾಂಕೇತಿಕವಾಗಿ ಸಸಿಗಳನ್ನು ವಿತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಗಿಡಮೂಲಿಕೆಗಳ ಔಷಧೀಯ ಗುಣಗಳನ್ನು ಶಿಕ್ಷಕಿ ರಂಜಿತಾ ತಿಳಿಸಿಕೊಟ್ಟರು. ಶಾಲಾ ಮುಖ್ಯಗುರು ಸಿಂಧು ವಿ.ಜಿ ಮಾತನಾಡಿ, ಪರಿಸರ ದಿನದ ಮಹತ್ವವನ್ನು ತಿಳಿಸಿದರು. ಪರಿಸರ ಪ್ರತಿಜ್ಞೆಯನ್ನು ಸ್ಕೌಟ್ ನಿಹಾಲ್ ರೈ ನಡೆಸಿಕೊಟ್ಟರು. ಸ್ಕೌಟ್ ಸಂಪ್ರೀತ್ ಪರಿಸರದ ಸುವಿಚಾರವನ್ನು ತಿಳಿಸಿದರು. ಗೈಡ್ ಧನ್ಯಶ್ರೀ ಕಾರ್ಯಕ್ರಮವನ್ನು ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಸ್ಕೌಟ್ಸ್, ಗೈಡ್ಸ್, ಕಬ್ಸ್ ಮತ್ತು ಬುಲ್ ಬುಲ್ ವಿದ್ಯಾರ್ಥಿಗಳಿಂದ ಗಿಡನೆಡುವ ಕಾರ್ಯಕ್ರಮವು ಗೈಡ್ಸ್ ಕ್ಯಾಪ್ಟನ್ ಪ್ರಫುಲ್ಲ, ಪ್ಲಾಕ್ ಲೀಡರ್ ಅಶ್ವಿನಿ, ಸ್ಕೌಟ್ಸ್ ಮಾಸ್ಟರ್ ರಮೇಶ್, ಕ್ಲಬ್ಸ್ ಮಾಸ್ಟರ್ ಸ್ವಾತಿ ಇವರ ಮಾರ್ಗದರ್ಶನದಲ್ಲಿ ನಡೆಯಿತು.