ಪುತ್ತೂರು: ಎರಡು ಪ್ರಮುಖ ರಸ್ತೆಗಳ ಅಭಿವೃದ್ದಿಗೆ 6 ಕೋಟಿ ರೂ.ಅನುದಾನ ಮಂಜೂರು

0

ಪುತ್ತೂರು:ಪುತ್ತೂರು ವಿಧಾನಸಭಾ ವ್ಯಾಪ್ತಿಯ ಎರಡು ಪ್ರಮುಖ ರಸ್ತೆಗಳ ಡಾಮರೀಕರಣಕ್ಕೆ ಒಟ್ಟು 6 ಕೋಟಿ ರೂ. ಅನುದಾನ ಮಂಜೂರಾಗಿದೆ.
ಸುಬ್ರಹ್ಮಣ್ಯ- ಮಂಜೇಶ್ವರ ರಾಜ್ಯ ಹೆದ್ದಾರಿ ಯಲ್ಲಿ ಪುತ್ತೂರು ತಾಲೂಕು ವ್ಯಾಪ್ತಿಯಲ್ಲಿ 5.2 ಕಿ.ಮೀ.ರಸ್ತೆ ಡಾಮರೀಕರಣಕ್ಕೆ 3.12 ಕೋಟಿ ರೂ.ಹಾಗೂ ನಿಂತಿಕಲ್ಲು- ಬೆಳ್ಳಾರೆ- ನೆಟ್ಟಾರು- ಅಮ್ಚಿನಡ್ಕ- ಕಾವು- ಈಶ್ವರಮಂಗಲ ಮೂಲಕ ಪಳ್ಳತ್ತೂರಿಗೆ ತೆರಳುವ ರಸ್ತೆಯಲ್ಲಿ ಪುತ್ತೂರು ತಾಲೂಕು ವ್ಯಾಪ್ತಿಯಲ್ಲಿ 4.8 ಕಿ.ಮೀ. ಡಾಮರೀಕರಣಕ್ಕೆ 2.88 ಕೋಟಿ ರೂ ಅನುದಾನ ಮಂಜೂರಾಗಿದೆ.

ಈ ಎರಡೂ ರಸ್ತೆಗಳು ನಾದುರಸ್ತಿಯಲ್ಲಿದ್ದು ರಸ್ತೆ ಅಭಿವೃದ್ದಿಗೆ ಅನುದಾನ ಬಿಡುಗಡೆ ಮಾಡುವಂತೆ ಶಾಸಕ ಅಶೋಕ್ ಕುಮಾರ್ ರೈ ಅವರು ಸರಕಾರಕ್ಕೆ ಮನವಿ ಸಲ್ಲಿಸಿದ್ದರು.ಶಾಸಕರ ಮನವಿಗೆ ಸ್ಪಂದಿಸಿದ ಸರಕಾರ 6 ಕೋಟಿ ರೂ ಅನುದಾನವನ್ನು ಮಂಜೂರು ಮಾಡಿದ್ದು ತ್ವರಿತವಾಗಿ ಈ ರಸ್ತೆ ಡಾಮರೀಕರಣ ಕಾಮಗಾರಿ ನಡೆಯಲಿದೆ.
ಈ ಎರಡು ರಸ್ತೆಗಳ ಮೂಲಕ ಶ್ರೀ ಕ್ಷೇತ್ರ ಸುಬ್ರಹ್ಮಣ್ಯಕ್ಕೆ ಅತ್ಯಧಿಕ ಸಂಖ್ಯೆಯಲ್ಲಿ ಯಾತ್ರಾರ್ಥಿಗಳ ಸಂಚಾರ ಇದ್ದು ಹಲವು ವರ್ಷಗಳ ಹಿಂದೆ ಡಾಮರು ಹಾಕಿದ್ದು ಅಲ್ಲಲ್ಲಿ ಹೊಂಡಗಳು ಸೃಷ್ಟಿಯಾಗಿದ್ದವು. ಈ ರಸ್ತೆಯನ್ನು ಅಭಿವೃದ್ದಿ ಮಾಡುವ ಕುರಿತು ಸಾರ್ವಜನಿಕರು ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ಮನವಿ ಮಾಡಿದ್ದರು.ತಕ್ಷಣ ಸ್ಪಂದಿಸಿದ ಶಾಸಕರು ರಸ್ತೆ ಅಭಿವೃದ್ದಿ ಮಾಡುವ ಭರವಸೆಯನ್ನು ನೀಡಿದ್ದರು ಎಂದು ಶಾಸಕರ ಕಚೇರಿ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here