- *ಸಲಹಾ ಸಮಿತಿ ಸದಸ್ಯರಿಗೆ, ಶಾಖೆಯಲ್ಲಿ ಸೇವೆ ಸಲ್ಲಿಸಿದ ಸಿಬ್ಬಂದಿಗಳಿಗೆ, ಉತ್ತಮ ಗ್ರಾಹಕರಿಗೆ ಗೌರವಾರ್ಪಣೆ
- *ಒಕ್ಕಲಿಗ ಗೌ.ಸೇ.ಸಂಘದ ಪುತ್ತೂರು, ಬೆಳ್ತಂಗಡಿ, ಕಡಬ ತಾ| ಅಧ್ಯಕ್ಷರಿಗೆ ಸನ್ಮಾನ
ನೆಲ್ಯಾಡಿ: ಪುತ್ತೂರು ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘ ಪ್ರಾಯೋಜಿತ, ಪುತ್ತೂರಿನ ಎಪಿಎಂಸಿ ರಸ್ತೆಯಲ್ಲಿರುವ ಮಣಾಯಿ ಆರ್ಚ್ ಕಟ್ಟಡದಲ್ಲಿ ಪ್ರಧಾನ ಕಚೇರಿ ಹೊಂದಿರುವ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ನೆಲ್ಯಾಡಿ ಶಾಖೆಯ ದಶಮಾನೋತ್ಸವ ಸಂಭ್ರಮ ಜೂ.8ರಂದು ನೆಲ್ಯಾಡಿ ಡೆಂಜ ಕಾಂಪ್ಲೆಕ್ಸ್ನಲ್ಲಿರುವ ಶಾಖೆಯ ಕಚೇರಿಯಲ್ಲಿ ನಡೆಯಿತು. ಸಮಾರಂಭದಲ್ಲಿ ಕಳೆದ 10 ವರ್ಷಗಳಲ್ಲಿ ಶಾಖೆಯಲ್ಲಿ ದುಡಿದ ಪ್ರಬಂಧಕರು, ಸಿಬ್ಬಂದಿಗಳು, ಸಲಹಾ ಸಮಿತಿಯ ಸದಸ್ಯರು, ಉತ್ತಮ ಗ್ರಾಹಕರಿಗೆ ಗೌರವಾರ್ಪಣೆ ಮಾಡಲಾಯಿತು.
ಸಂಘದ ಅಧ್ಯಕ್ಷರಾದ ಚಿದಾನಂದ ಬೈಲಾಡಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕರ ಕುಶಾಲಪ್ಪ ಗೌಡ ಪೂವಾಜೆ, ಪುತ್ತೂರು ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷರಾದ ರವಿ ಮುಂಗ್ಲಿಮನೆ, ಕಡಬ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷರಾದ ಸುರೇಶ್ ಬೈಲು ಸಂದರ್ಭೋಚಿತವಾಗಿ ಮಾತನಾಡಿದರು. ಸಂಘದ ಉಪಾಧ್ಯಕ್ಷರಾದ ಯು.ಪಿ.ರಾಮಕೃಷ್ಣ, ಸಂಘದ ನಿರ್ದೇಶಕರೂ, ನೆಲ್ಯಾಡಿ ಶಾಖಾ ಸಲಹಾ ಸಮಿತಿ ಅಧ್ಯಕ್ಷರಾದ ಪ್ರವೀಣ್ ಕುಂಟ್ಯಾನ, ಸಂಘದ ನಿರ್ದೇಶಕಿ, ನೆಲ್ಯಾಡಿ ಶಾಖಾ ಸಲಹಾ ಸಮಿತಿ ಉಪಾಧ್ಯಕ್ಷೆ ಸುಪ್ರಿತಾರವಿಚಂದ್ರ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಧಾಕರ ಕೆ.,ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಲಹಾ ಸಮಿತಿ ಸದಸ್ಯರಿಗೆ/ಸಿಬ್ಬಂದಿಗಳಿಗೆ ಗೌರವಾರ್ಪಣೆ:
ನೆಲ್ಯಾಡಿ ಶಾಖಾ ಸಲಹಾ ಸಮಿತಿ ಸದಸ್ಯರಾದ ಸುಂದರ ಗೌಡ ಅತ್ರಿಜಾಲು, ರಾಧಾಕೃಷ್ಣ ಕೆರ್ನಡ್ಕ, ತುಕ್ರಪ್ಪ ಗೌಡ ಗೋಳಿತ್ತೊಟ್ಟು, ನೋಣಯ್ಯ ಗೌಡ ಡೆಬ್ಬೇಲಿ, ಡೊಂಬಯ್ಯ ಗೌಡ ಶಿರಾಡಿ, ಪದ್ಮನಾಭ ಗೌಡ ನೀರಾಯ, ಜಿನ್ನಪ್ಪ ಗೌಡ ಪೊಸೊಳಿಗೆ, ಸುರೇಶ್ ಪಡಿಪಂಡ, ಸುಲತಮೋಹನಚಂದ್ರ, ಸಲಹಾ ಸಮಿತಿ ಮಾಜಿ ಸದಸ್ಯ ಪುರಂದರ ಗೌಡ ಕಡೀರ, ಈ ಹಿಂದೆ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿದ್ದ ಶಿವಪ್ರಸಾದ್ ಎ., ತೇಜಸ್ವಿನಿ, ಹರೀಶ್ ವೈ., ಕಾರ್ತಿಕ್ ಎಂ., ಚೇತನ್ಕುಮಾರ್, ರಾಧಾಕೃಷ್ಣ, ವಿಜಯಕುಮಾರ್, ಪ್ರಸ್ತುತ ನೆಲ್ಯಾಡಿ ಶಾಖಾ ವ್ಯವಸ್ಥಾಪಕರಾದ ವಿನೋದ್ರಾಜ್ ಎಸ್., ಜಯಂತಕುಮಾರ್ ಎಸ್., ಅಜಿತ್ ಬಿ.ಕೆ., ಸಂಘದ ಕನ್ಸಲ್ಟಿಂಗ್ ಇಂಜಿನಿಯರ್ ನರೇಶ್ ಡಿ.ಎಸ್.ದೇರಾಜೆ, ಸರಫರಾದ ದಯಾನಂದ ಆಚಾರ್ಯ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಧಾಕರ ಕೆ., ಡೆಂಜ ಕಾಂಪ್ಲೆಕ್ಸ್ ಮಾಲಕರಾದ ಪುರಂದರ ಗೌಡ ಡೆಂಜ, ಚಂದ್ರಶೇಖರ ಗೌಡ ಡೆಂಜ, ಮಾಜಿ ನಿರ್ದೇಶಕ ಸಾಂತಪ್ಪ ಗೌಡ ಪಿಜಕ್ಕಳ, ಕಾಮಧೇನು ಮಹಿಳಾ ಸಹಕಾರಿ ಸಂಘದ ಅಧ್ಯಕ್ಷೆ ಉಷಾ ಅಂಚನ್, ಪುತ್ತೂರು ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಭಾಸ್ಕರ ಗೌಡ ಇಚ್ಲಂಪಾಡಿ ಅವರಿಗೆ ಸ್ಮರಣಿಕೆ, ಗುಲಾಬಿ ಹೂ ನೀಡಿ ಗೌರವಿಸಲಾಯಿತು.
ಗ್ರಾಹಕರಿಗೆ ಗೌರವಾರ್ಪಣೆ:
ನೆಲ್ಯಾಡಿ ಶಾಖೆಯ ಪ್ರಥಮ ಠೇವಣಿದಾರರಾದ ತುಕ್ರಪ್ಪ ಗೌಡ ಗೋಳಿತ್ತೊಟ್ಟು, ಪ್ರಥಮ ಸಾಲಗಾರರಾದ ನಾಗೇಶ್ ಡಿ.ದರ್ಖಾಸು, ಪ್ರಥಮ ಉಳಿತಾಯ ಖಾತೆ ತೆರೆದ ರವಿಚಂದ್ರ ಹೊಸವೊಕ್ಲು, ಉತ್ತಮ ಗ್ರಾಹಕರಾದ ದಾಮೋದರ ಗೌಡ ಪುಚ್ಚೇರಿ, ಪೂವಣಿ ಗೌಡ ಕೊರಡೇಲು, ರಾಕೇಶ್ ಸಂಕೇಶ, ಪ್ರವೀಣ್ ಭಂಡಾರಿ ಪುರ, ಅಝೀಝ್ ಕೋಲ್ಪೆ, ಬಾಳಪ್ಪ ಗೌಡ ಅಗರ್ತ ಅವರಿಗೆ ಗೌರವಾರ್ಪಣೆ ಮಾಡಲಾಯಿತು.
ಸನ್ಮಾನ:
ಸಂಘದ ಮಾಜಿ ನಿರ್ದೇಶಕರೂ, ನೆಲ್ಯಾಡಿ ಶಾಖೆಯ ಸಲಹಾ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಚಂದ್ರಶೇಖರ ಬ್ರಂತೋಡು, ನಾಗೇಶ್ ನಳಿಯಾರು, ಲಿಂಗಪ್ಪ ಗೌಡ ಕಡೆಂಬ್ಯಾಲು, ಸಂಘದ ನಿರ್ದೇಶಕರಾಗಿದ್ದು ಪ್ರಸ್ತುತ ನೆಲ್ಯಾಡಿ ಶಾಲಾ ಸಲಹಾ ಸಮಿತಿ ಅಧ್ಯಕ್ಷರಾಗಿರುವ ಪ್ರವೀಣ್ ಕುಂಟ್ಯಾನ, ಉಪಾಧ್ಯಕ್ಷೆ ಸುಪ್ರಿತಾ ರವಿಚಂದ್ರ, ಡಿಸಿಸಿ ಬ್ಯಾಂಕ್ನ ನಿರ್ದೇಶಕರೂ, ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷರೂ ಆಗಿರುವ ಕುಶಾಲಪ್ಪ ಗೌಡ ಪೂವಾಜೆ, ಪುತ್ತೂರು ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷರಾದ ರವಿ ಮುಂಗ್ಲಿಮನೆ, ಕಡಬ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಸುರೇಶ್ ಬೈಲು ಅವರನ್ನು ಸನ್ಮಾನಿಸಲಾಯಿತು. ನಾಗೇಶ್ ನಳಿಯಾರು, ಗುರುವಾಯನಕೆರೆ ವಿದ್ವಾನ್ ಪ.ಪೂ.ಕಾಲೇಜಿನ ಆಡಳಿತಾಧಿಕಾರಿ ಚಂದ್ರಶೇಖರ ಗೌಡ, ರಾಧಾಕೃಷ್ಣ ಗೌಡ ಕೆರ್ನಡ್ಕ ಅವರು ಅನಿಸಿಕೆ ವ್ಯಕ್ತಪಡಿಸಿದರು.
ಸಂಘದ ನಿರ್ದೇಶಕರೂ, ನೆಲ್ಯಾಡಿ ಶಾಖಾ ಸಲಹಾ ಸಮಿತಿ ಅಧ್ಯಕ್ಷರಾದ ಪ್ರವೀಣ್ ಕುಂಟ್ಯಾನ ಸ್ವಾಗತಿಸಿ, ನೆಲ್ಯಾಡಿ ಶಾಖಾ ವ್ಯವಸ್ಥಾಪಕ ವಿನೋದ್ರಾಜ್ ವಂದಿಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಧಾಕರ ಕೆ.ನಿರೂಪಿಸಿದರು. ನಿರ್ದೇಶಕಿ ತೇಜಸ್ವಿನಿಶೇಖರ ಗೌಡ ಪ್ರಾರ್ಥಿಸಿದರು. ಸಂಘದ ನಿರ್ದೇಶಕರಾದ ರಾಮಕೃಷ್ಣ ಗೌಡ ಕರ್ಮಲ, ಜಿನ್ನಪ್ಪ ಗೌಡ ಮಳುವೇಲು, ಸುದರ್ಶನ ಗೌಡ ಕೋಡಿಂಬಾಳ, ಸಂಜೀವ ಗೌಡ ಕುದ್ಲೂರು, ಸತೀಶ ಪಾಂಬಾರು, ಲೋಕೇಶ್ ಚಾಕೋಟೆ, ತೇಜಸ್ವಿನಿಶೇಖರ ಗೌಡ, ವಿವಿಧ ಶಾಖೆಗಳ ಸಲಹಾ ಸಮಿತಿ ಸದಸ್ಯರು, ಗ್ರಾಹಕರು, ವಿವಿಧ ಕ್ಷೇತ್ರಗಳ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮಧ್ಯಾಹ್ನ ಸಹಭೋಜನ ನಡೆಯಿತು.
ಗಣಪತಿ ಹವನ/ಲಕ್ಷ್ಮೀ ಪೂಜೆ:
ಶಾಖೆಯ ದಶಮಾನೋತ್ಸವ ಹಾಗೂ 11ನೇ ವರ್ಷಕ್ಕೆ ಪಾದಾರ್ಪಣೆ ಪ್ರಯುಕ್ತ ಬೆಳಿಗ್ಗೆ ಕಚೇರಿಯಲ್ಲಿ ಗಣಪತಿ ಹವನ, ಲಕ್ಷ್ಮೀ ಪೂಜೆ ನಡೆಯಿತು. ಸುಬ್ರಹ್ಮಣ್ಯ ಬಳ್ಳಕ್ಕುರಾಯ ಅವರು ಧಾರ್ಮಿಕ ವಿಧಿವಿಧಾನ ನೆರವೇರಿಸಿದರು.
ನಾಮಫಲಕ ಅಳವಡಿಕೆ:
ನೆಲ್ಯಾಡಿ ಪೇಟೆಯ ಮೂರು ಕಡೆಗಳಲ್ಲಿ ಸಂಘದ ನಾಮ ಫಲಕ ಅನಾವರಣ ಮಾಡಲಾಯಿತು. ನೆಲ್ಯಾಡಿ ಗ್ರಾ.ಪಂ.ಅಧ್ಯಕ್ಷ ಸಲಾಂ ಬಿಲಾಲ್, ಕೌಕ್ರಾಡಿ ಗ್ರಾ.ಪಂ.ಅಧ್ಯಕ್ಷ ಲೋಕೇಶ್ ಬಾಣಜಾಲು ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.