ಕೆಯ್ಯೂರು: ಮಾಡಾವು ಯಂಗ್ ಮೆನ್ಸ್ ಸಂಘಟನೆಯ 32 ನೇ ವಾರ್ಷಿಕೋತ್ಸವದ ಅಂಗವಾಗಿ 2 ದಿನಗಳಲ್ಲಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು. ಜೂ 1 ರಂದು ಬೆಳಗ್ಗೆ, ಯಂಗ್ ಮೆನ್ಸ್ ವತಿಯಿಂದ ನಿರ್ಮಿಸಲ್ಪಟ್ಟು ಮಾಡಾವು ಜಮಾಅತಿಗೆ ಅರ್ಪಿಸಲಾದ ಗೌಸಿಯಾ ರೆಸಿಡೆನ್ಸಿಯ ಉದ್ಘಾಟನೆಯನ್ನು ಪುತ್ತೂರಿನ ಸಯ್ಯಿದ್ ಅಹ್ಮದ್ ಪೂಕೊಯ ತಂಗಳ್ ರವರು ನಿರ್ವಹಿಸಿದರು. ತದ ನಂತರ ಜರುಗಿದ ಮತ ಪ್ರಭಾಷಣ ಕಾರ್ಯಕ್ರಮವು ಗೌಸಿಯಾ ಯಂಗ್ ಮೆನ್ಸ್ ಅಧ್ಯಕ್ಷ ಜನಾಬ್ ಹಾರಿಸ್ ಪಾತುಂಜರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಮತ ಪ್ರಭಾಷಣವನ್ನು ಅಶ್ರಫ್ ಸಖಾಫಿ ಕಣಿಯಾರ್ ಉದ್ಘಾಟಿಸಿದರು. ಮಾಡಾವು ಖತೀಬರಾದ ನೌಫಲ್ ರಹ್ಮಾನಿಯವರು ಜಮಾತ್ ಅಭಿವೃದ್ಧಿಯಲ್ಲಿ ಯುವಕರು ನಿರ್ವಹಿಸಬೇಕಾದ ಪಾತ್ರದ ಕುರಿತು ಪ್ರಭಾಷಣ ನಡೆಸಿದರು. ಜೂ2ರಂದು ರಾತ್ರಿ ಉಸ್ತಾದ್ ವಲಿಯುದ್ದಿನ್ ಫೈಝೀಯವರ ನೇತೃತ್ವದಲ್ಲಿ ನೂರೇ ಆಜ್ಮೀರ್ ಆದ್ಯಾತ್ಮಿಕ ಮಜ್ಲಿಸ್ ಜರುಗಿತು. ಈ ಕಾರ್ಯಕ್ರಮವು ಜನಾಬ್ ಹಮೀದ್ ಹಾಜಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ದುಗ್ಗಲಡ್ಕ ಸಯ್ಯಿದ್ ಜಲಾಲುದ್ದೀನ್ ತಂಗಳ್ ನಿರ್ವಹಿಸಿದರು. ಜನಾಬ್ ಹುಸೈನ್ ಧಾರಿಮಿ ರೆಂಜಾಲಾಡಿಯವರು ಪ್ರಾಸ್ಥಾವಿಕ ನುಡಿಗಳನ್ನು ಆಡಿದರು. ಈ ಸಂಧರ್ಭದಲ್ಲಿ ಗೌಸಿಯಾ ರೆಸಿಡೆನ್ಸಿಯನಿರ್ಮಾಣ ಕಾರ್ಯದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿದ ಹಸೈನಾರ್ ಹಾಜಿ ಪಲ್ಲತಡ್ಕ ಮತ್ತು ಶಾಫಿ ಕಣಿಯಾರ್ ಅವರುಗಳನ್ನು ಶಾಲು ಹೊಡೆಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಅಬ್ದುಲ್ ಖಾದಿರ್ ಮುಸ್ಲಿಯಾರ್ ಅಥಿತಿಗಳನ್ನು ಸ್ವಾಗತಿಸಿದರು. ಸುಲೈಮಾನ್ ಮುಸ್ಲಿಯಾರ್ ವಂದಿಸಿದರು. ಬಶೀರ್ ಮಾಸ್ಟರ್ ಕಾರ್ಯಕ್ರಮದ ನಿರೂಪಣೆ ಮಾಡಿದರು.