ಮುಖ್ಯ ಮಂತ್ರಿಯಾಗಿ ಮಿಥುನ್.ಎಂ, ಉಪ ಮುಖ್ಯ ಮಂತ್ರಿಯಾಗಿ ಆಯಿಷತ್ ಸಫಾ ಆಯ್ಕೆ
ನಿಡ್ಪಳ್ಳಿ; ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆ ಚೂರಿಪದವು ಇಲ್ಲಿಯ ಶಾಲಾ ಮಂತ್ರಿಮಂಡಲವನ್ನು ಜೂ.8 ರಂದು ರಚಿಸಲಾಯಿತು.ಮುಖ್ಯ ಮಂತ್ರಿಯಾಗಿ ಮಿಥುನ್. ಎಮ್,ಉಪಮುಖ್ಯ ಮಂತ್ರಿಯಾಗಿ ಆಯಿಷತ್ ಸಫಾ ಆಯ್ಕೆಯಾದರು.
ವಿರೋಧ ಪಕ್ಷದ ನಾಯಕನಾಗಿ ಶರಣ್, ಶಿಕ್ಷಣ ಮಂತ್ರಿಯಾಗಿ ದೀಶಾ.ಬಿ ಹಾಗೂ ಉಪ ಶಿಕ್ಷಣ ಮಂತ್ರಿಯಾಗಿ ಫಿದ,ಆರೋಗ್ಯ ಮಂತ್ರಿಯಾಗಿ ಬೀಬಿ ಆಸಿಯ ಹಾಗು ಉಪ ಆರೋಗ್ಯ ಮಂತ್ರಿಯಾಗಿ ಅಹಮ್ಮದ್ ಸುಲ್ತಾನ್ ,ಕ್ರೀಡಾ ಮಂತ್ರಿಯಾಗಿ ಅಬ್ದುಲ್ ವಾರೀಸ್ ಹಾಗು ಉಪ ಕ್ರೀಡಾ ಮಂತ್ರಿಯಾಗಿ ರಿಹಾನ್ ಖಾನ್,ಗೃಹಮಂತ್ರಿಯಾಗಿ ಶರಣ್ ಹಾಗು ಉಪಗೃಹಮಂತ್ರಿಯಾಗಿ ಮುಹಮ್ಮದ್ ಅಮೀನ್,ನೀರಾವರಿ ಮಂತ್ರಿಯಾಗಿ ಭುವನೇಶ್,ಹಾಗು ಉಪ ನೀರಾವರಿ ಮಂತ್ರಿಯಾಗಿ ಮಹಮ್ಮದ್ ರಾಝಿನ್,ವಾರ್ತಾಮಂತ್ರಿಯಾಗಿ ಪೂರ್ಣೇಶ್ ಹಾಗು ಉಪ ವಾರ್ತಾ ಮಂತ್ರಿಯಾಗಿ ಪ್ರೀತೇಶ್,ಸ್ವಚ್ಚತಾ ಮಂತ್ರಿಯಾಗಿ ಮುಬಶಿಲ್ ಹಾಗು ಉಪ ಸ್ವಚ್ಚತಾ ಮಂತ್ರಿಯಾಗಿ ಮಹಮ್ಮದ್ ಕಾಮಿಲ್,ಗ್ರಂಥಾಲಯ ಮಂತ್ರಿಯಾಗಿ ನುಹಾಫಾತಿಮ ಮತ್ತುಉಪ ಗ್ರಂಥಾಲಯ ಮಂತ್ರಿಯಾಗಿ ಜಲಜಾಕ್ಷಿ ಆಯ್ಕೆಯಾದರು.
ಶಾಲಾ ಮುಖ್ಯ ಗುರು ಲಕ್ಷ್ಮಿ ಯವರ ನೇತೃತ್ವದಲ್ಲಿ ನಡೆದ ಆಯ್ಕೆ ಕಾರ್ಯಕ್ರಮದಲ್ಲಿ ಸಹಶಿಕ್ಷಕಿಯರಾದ ಕುಮುದ,ಐರಿನಾ ಕ್ರಾಸ್ತ,ಸುಜಾತ ಸಹಕರಿಸಿದರು.