ಶಾಲಾ ಮುಖ್ಯಮಂತ್ರಿಯಾಗಿ ಅಶ್ಮಿತಾ, ಉಪ ಮುಖ್ಯಮಂತ್ರಿಯಾಗಿ ನಿವೇದ್
ಕಾಣಿಯೂರು: ನಾಣಿಲ ಸ. ಹಿ.ಪ್ರಾ.ಶಾಲೆಯ ಶಾಲಾ ಸಂಸತ್ತಿನ ಚುನಾವಣೆಯನ್ನು ನಡೆಸಲಾಯಿತು. ಶಾಲಾ ಮುಖ್ಯಮಂತ್ರಿಯಾಗಿ 7ನೇ ತರಗತಿಯ ಅಶ್ಮಿತಾ ಹಾಗೂ ಉಪ ಮುಖ್ಯಮಂತ್ರಿಯಾಗಿ 6ನೇತರಗತಿಯ ನಿವೇದ್ ಆಯ್ಕೆಯಾದರು. ವಿರೋಧ ಪಕ್ಷದ ನಾಯಕಿಯಾಗಿ ವಂಶಿಕಾ ಡಿ.ವಿ, ಗೃಹಮಂತ್ರಿ ಯಶ್ವಿನ್ ಹಾಗೂ ಅಕ್ಷಯ್, ಸಾಂಸ್ಕೃತಿಕ ಮಂತ್ರಿ ಮೋಕ್ಷಿತ ಹಾಗೂ ಅನನ್ಯ, ಆಹಾರ ಮತ್ತು ಆರೋಗ್ಯ ಮಂತ್ರಿ ಮಾನ್ವಿ ಮತ್ತು ಸಾನ್ವಿ, ವಾರ್ತಾ ಮಂತ್ರಿ ಕೀರ್ತನ ಹಾಗೂ ಜಯಲಕ್ಷ್ಮಿ, ಗ್ರಂಥಾಲಯ ಮಂತ್ರಿ ಕಾವ್ಯ ಹಾಗೂ ಬೃಂದಾ, ಕ್ರೀಡಾ ಮಂತ್ರಿ ನಿಶಾಂತ್ ಹಾಗೂ ಅಕ್ಷಯ್, ಸ್ವಚ್ಛತಾ ಮಂತ್ರಿ ನವ್ಯ ಹಾಗೂ ದೀಕ್ಷಾ, ನೀರಾವರಿ ಮಂತ್ರಿ ರಿತೇಶ್ ಹಾಗೂ ದಿವಿತ್, ದಿವನ್ ಅವರು ಆಯ್ಕೆಯಾಗಿದ್ದಾರೆ. ಶಾಲಾ ಸಂಸತ್ತಿನ ಚುನಾವಣೆಯ ಹಾಗೂ ಮಂತ್ರಿಮಂಡಲ ರಚನೆಯ ಕುರಿತಂತೆ ಮುಖ್ಯಗುರು ಪದ್ಮಯ್ಯ ಗೌಡರವರು ಮಾರ್ಗದರ್ಶನವನ್ನು ನೀಡಿದರು.
ಚುನಾವಣಾ ಉಸ್ತುವಾರಿಯಾಗಿ ಸಹಶಿಕ್ಷಕ ಸುನಿಲ್ ಕುಮಾರ್ ಕಾರ್ಯ ನಿರ್ವಹಿಸಿದರು. ಚುನಾವಣಾ ಕಾರ್ಯನಿರ್ವಾಹಣಾಧಿಕಾರಿಗಳಾಗಿ ಸಹಶಿಕ್ಷಕಿ ನಂದಿನಿ, ಅತಿಥಿ ಶಿಕ್ಷಕಿ ಚೇತನಾ, ಗೌರವ ಶಿಕ್ಷಕಿಯರಾದ ಸವಿತಾ, ಶ್ವೇತಾ ಕಾರ್ಯನಿರ್ವಹಿಸಿದರು.