ಮುಖ್ಯಮಂತ್ರಿಯಾಗಿ ಅನ್ವಿತ್, ಉಪಮುಖ್ಯಮಂತ್ರಿಯಾಗಿ ಮುಹಮ್ಮದ್ ರಾಝಿಕ್
ಪುತ್ತೂರು: ದ.ಕ.ಜಿ.ಪಂ.ಉ.ಹಿ.ಪ್ರಾ ಶಾಲೆ ಏಕತ್ತಡ್ಕ (ಅಜ್ಜಿಕಲ್ಲು) ಇಲ್ಲಿಯ ಶಾಲಾ ಮಂತ್ರಿಮಂಡಲವನ್ನು ರಚಿಸಲಾಯಿತು. ಮುಖ್ಯಮಂತ್ರಿಯಾಗಿ ಅನ್ವಿತ್, ಉಪಮುಖ್ಯಮಂತ್ರಿಯಾಗಿ ಮುಹಮ್ಮದ್ ರಾಝಿಕ್ ಆಯ್ಕೆಯಾದರು.
ವಿರೋಧ ಪಕ್ಷದ ನಾಯಕಿಯಾಗಿ ಶ್ರಾವ್ಯ ಕೆ, ಶಿಕ್ಷಣ ಮಂತ್ರಿಯಾಗಿ ಪವನ ರೈ ಹಾಗೂ ಉಪಶಿಕ್ಷಣ ಮಂತ್ರಿಯಾಗಿ ಎ.ಕೆ ಮುಹಮ್ಮದ್ ಮುಬಶ್ಸೀರ್, ಆರೋಗ್ಯ ಮಂತ್ರಿಯಾಗಿ ಸೇಜಶ್ರೀ ಸಿ ಆರ್ ಹಾಗೂ ಉಪ ಆರೋಗ್ಯ ಮಂತ್ರಿಯಾಗಿ ತನ್ವಿ, ಕ್ರೀಡಾಮಂತ್ರಿಯಾಗಿ ಗಗನ್ ವೈ ಎಸ್, ಉಪ ಕ್ರೀಡಾ ಮಂತ್ರಿಯಾಗಿ ಪ್ರಣಾಮ್, ಗೃಹಮಂತ್ರಿಯಾಗಿ ಯಶಸ್ವಿ, ಉಪಗೃಹಮಂತ್ರಿಯಾಗಿ ಅಂಕಿತಾ ಎ ಪಿ, ನೀರಾವರಿ ಮಂತ್ರಿಯಾಗಿ ವಿನೋದ್, ಉಪನೀರಾವರಿ ಮಂತ್ರಿಯಾಗಿ ವಿಖ್ಯಾತ್, ವಾರ್ತಾಮಂತ್ರಿಯಾಗಿ ಪ್ರತೀಕ್ಷಾ ಎಂ, ಉಪ ವಾರ್ತಾಮಂತ್ರಿಯಾಗಿ ಮೊಯಿದೀನ್ ಮಷದ್, ಸ್ವಚ್ಛತಾ ಮಂತ್ರಿ ಕೃತಿಕಾ, ಆಹಾರ ಮಂತ್ರಿಯಾಗಿ ಕ್ಷಮಾ ಎಸ್ ಪೂಜಾರಿ, ಹಣಕಾಸು ಮಂತ್ರಿ ಆದಿತ್ಯ ಎಚ್ ಟಿ, ಕೃಷಿ ಮಂತ್ರಿಯಾಗಿ ಅಬ್ದುಲ್ ಜವಾದ್, ಶಿಸ್ತು ಮಂತ್ರಿಯಾಗಿ ವಿನೀತ್ ಆಯ್ಕೆಯಾದರು.
ಶಾಲಾ ಮುಖ್ಯಗುರು ಚಿತ್ರಾ ರೈ ಎಚ್ ರವರ ನೇತೃತ್ವದಲ್ಲಿ ನಡೆದ ಆಯ್ಕೆ ಕಾರ್ಯಕ್ರಮದಲ್ಲಿ ಸಹಶಿಕ್ಷಕರಾದ ಪ್ರೀತಮ್ ಎನ್, ಶಿಕ್ಷಕಿಯರಾದ ಚಂದ್ರಕಲಾ ಡಿ ಹಾಗೂ ಲಕ್ಷ್ಮಿ ಸಹಕರಿಸಿದರು.