ವಿಟ್ಲ: ಶಾಲಾ ವಾರ್ಷಿಕ ಹಬ್ಬಗಳು ವಿದ್ಯಾರ್ಥಿ ಮತ್ತು ಶಾಲಾ ಸಂಬಂಧಗಳನ್ನು ಮತ್ತಷ್ಟು ಭದ್ರವಾಗಿಸುತ್ತದೆ. ಈ ಹಬ್ಬಗಳಲ್ಲಿ ಶೈಕ್ಷಣಿಕ ವರ್ಷಕ್ಕೆ ಹೊಸದಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳನ್ನು ಗೌರವಿಸಿ ಪರಿಚಯಿಸುವ ನೂತನ ಕಾರ್ಯಕ್ರಮ “ಫ್ರೆಷರ್ಸ್ ಡೇ-2024” ವಿಠ್ಠಲ್ ಜೇಸಿಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಆಚರಿಸಲಾಯಿತು.
ಬಾಯಾರಿನ ಹೆದ್ದಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಆದಿನಾರಾಯಣ ಭಟ್ ರವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿ ಆಧುನಿಕ ಶಿಕ್ಷಣ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳ ಹವ್ಯಾಸಗಳಿಗೆ ಅವಕಾಶ ಕೊಡುವುದರಿಂದ ಪುಟ್ಟ ಮಕ್ಕಳ ವಿಷಯೇತರ ಚಟುವಟಿಕೆಗಳಲ್ಲಿ ಬೆಳವಣಿಗೆ ಸಾಧ್ಯ, ಇದು ಮಕ್ಕಳಿಗೆ ತುಂಬಾ ಸಂತಸ ನೀಡುತ್ತದೆ ಎಂದರು.
ಸಂಸ್ಥೆಯ ಅಧ್ಯಕ್ಷರಾದ ಎಲ್. ಎನ್.ಕೂಡೂರುರವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ ಶಾಲೆಯ ಅಭಿವೃದ್ಧಿಯ ಬಗ್ಗೆ ಮಾಹಿತಿ ನೀಡಿ, ಈ ಶೈಕ್ಷಣಿಕ ಸಾಲಿನಲ್ಲಿ ಮಕ್ಕಳು ಹೊಸದಾಗಿ ಒಳಾoಗಣ ಶಟಲ್ ಹಾಗೂ ವಾಲಿಬಾಲ್ ಕೋರ್ಟ್ ಗಳ ಪ್ರಯೋಜನ ಪಡೆಯಲಿದ್ದಾರೆ ಎಂದರು. ಸಮಾರಂಭದಲ್ಲಿ ಸ್ಟೆಮ್ ರೋಬೋಟಿಕ್ ಮ್ಯಾನೇಜರ್ ಸರ್ವೇಶ್ ನಾಯಕ್ ಉಪಸ್ಥಿತರಿದ್ದು ರೋಬೋಟಿಕ್ ಮಹತ್ವವನ್ನು ವಿವರಿಸಿದರು.
ವೇದಿಕೆಯಲ್ಲಿ ಉಪಾಧ್ಯಕ್ಷರಾದ ಶ್ರೀಧರ್ ಶೆಟ್ಟಿ, ಜೊತೆ ಕಾರ್ಯದರ್ಶಿಗಳಾದ ಶ್ರೀ ಪ್ರಕಾಶ್, ಆಡಳಿತಾಧಿಕಾರಿ ರಾಧಾಕೃಷ್ಣ, ಪ್ರಾಂಶುಪಾಲರಾದ ಜಯರಾಮ ರೈ ಉಪಪ್ರಾಂಶುಪಾಲೆ ಜ್ಯೋತಿ ಶೆಣೈ ಮೊದಲಾದವರು ಉಪಸ್ಥಿತರಿದ್ದರು.
ಹೊಸದಾಗಿ ಸೇರಿದ 166 ಹೊಸ ವಿದ್ಯಾರ್ಥಿಗಳು ತಮ್ಮ ಪ್ರತಿಭಾ ಪ್ರದರ್ಶನ ನಡೆಸಿಕೊಟ್ಟರು. ವಿದ್ಯಾರ್ಥಿನಿಯರಾದ ಅನ್ವಿತಾ ಹಾಗೂ ತಂಡದವರು ಪ್ರಾರ್ಥನೆ ಗೈದರು.ಅತ್ಮಿ ಸ್ವಾಗತಿಸಿದರು. ಆಯಿಷಾತ್ ಅಮಿಷ ವಂದಿಸಿದರು, ಅನುಪಮಾ ಹಾಗೂ ಅಭಿರಾಮ್ ಭಟ್ ಕಾರ್ಯಕ್ರಮ ನಿರೂಪಿಸಿದರು.