ಆತೂರು ಆಯಿಶಾ ವಿದ್ಯಾಲಯದ ಶಾಲಾ ಪ್ರಾರಂಭೋತ್ಸವ, ನೂತನ ಶಾಲಾ ವಾಹನ ಉದ್ಘಾಟಣಾ ಕಾರ್ಯಕ್ರಮ

0

ಪುತ್ತೂರು : ಆತೂರು ಆಯಿಶಾ ವಿದ್ಯಾಸಂಸ್ಥೆ ಇದರ ಶಾಲಾ ಆರಂಭೋತ್ಸವವು ಜೂ.13 ರಂದು ಅದ್ದೂರಿಯಾಗಿ ನೆರವೇರಿತು. ಜೊತೆಗೆ ನೂತನ ಶಾಲಾ ವಾಹನದ ಉದ್ಘಾಟನೆ ಯೂ ಕೂಡ ನಡೆಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪುತ್ತೂರಿನ ಉಪತಹಶೀಲ್ದಾದರರಾದ ಸುಲೋಚನಾ ಪಿ.ಕೆ. ಕಾರ್ಯಕ್ರಮ ಕ್ಕೆ ಚಾಲನೆ ನೀಡಿ ,ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಆ ಬಳಿಕ ನೂತನ ಶಾಲಾ ವಾಹನದ ಕೀಲಿ ಕೈ ಪ್ರಾಂಶುಪಾಲರಿಗೆ ಹಸ್ತಾಂತರಿಸೋ ಮೂಲಕ ಶಾಲಾ ವಾಹನದ ಉದ್ಘಾಟನೆ ನೆರವೇರಿತು.ಶಾಲಾ ಸ್ಥಾಪಕ ಆಧ್ಯಕ್ಷರಾದ ಅಮೀನ್ ಅಹ್ಸನ್ ಪ್ರಾಸ್ತವಿಕ ಮಾತನಾಡಿದರು.

ಸಂಸ್ಥೆಯ ಆಧ್ಯಕ್ಷರಾದ ಅಬ್ಧುಲ್ ರವೂಫ್ ಯು.ಎಂ ಕೂಡ ಮಕ್ಕಳಿಗೆ ಶುಭ ಹಾರೈಸಿದರು.ಕಾರ್ಯಕ್ರಮದ ಆಧ್ಯಕ್ಷತೆಯನ್ನು ಸ್ಥಾಪಕ ಕಾರ್ಯದರ್ಶಿ ಜಲೀಲ್ ಮುಕ್ರಿ ಇವರು ವಹಿಸಿದರು.
ಆರನೇ ತರಗತಿಯ ದುವಾ ಸಲಾಮ ಪ್ರಾರ್ಥನಾ ಗೀತೆ ಹಾಡಿದರು. ಪ್ರಾಂಶುಪಾಲರು ಸ್ವಾಗತಿಸಿ , ಶಿಕ್ಷಕಿ ರಮ್ಯಾ ಎಸ್ ಇವರು ವಂದಿಸಿದರು . ಶಿಕ್ಷಕಿ ಕಮರುನ್ನೀಸಾ ಮತ್ತು ಅಮೀನಾ ದಿಷಾ ಕಾರ್ಯಕ್ರಮವನ್ನು ನಿರೂಪಿಸಿದರು. ಈ ವೇಳೆ ಸಂಸ್ಥೆಯ ಟ್ರಸ್ಟಿಗಳು , ಪೋಷಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

LEAVE A REPLY

Please enter your comment!
Please enter your name here